ಬೆಂಗಳೂರು: ನಟಿ ಪಾರುಲ್ ಯಾದವ್ ಮೇಲೆ ಆರು ಬೀದಿನಾಯಿಗಳು ದಾಳಿ ನಡೆಸಿ ತಲೆ, ಕೈ, ಕಾಲುಗಳಿಗೆ ತೀವ್ರ ಗಾಯಗೊಳಿಸಿವೆ.
ಸೋಮವಾರ ಸಂಜೆ ತಮ್ಮ ಸಾಕುನಾಯಿಯೊಂದಿಗೆ ಮುಂಬಯಿನ ತಮ್ಮ ಅಪಾರ್ಟ್ ಮೆಂಟ್ ಬಳಿಯಿರುವ ಜೋಗೇಶ್ವರಿ ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದರು. ಈ ವೇಳೆ ಸಾಕು ನಾಯಿಯ ಮೇಲೆ ಅಲ್ಲಿದ್ದ ಬೀದಿ ನಾಯಿಗಳು ದಾಳಿ ನಡೆಸಿವೆ. ಸಾಕು ನಾಯಿಯನ್ನು ರಕ್ಷಿಸಲು ಮುಂದಾದ ಪಾರೂಲ್ರನ್ನು ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ತಲೆ, ಕೈ, ಕಾಲುಗಳಿಗೆ ತೀವ್ರ ಗಾಯಗಳಾಗಿವೆ.
ನಾಯಿಗಳ ಬಾಯಿಗೆ ತುತ್ತಾದ ಪಾರುಲ್ ನನ್ನು ಯಾವೊಬ್ಬ ವ್ಯಕ್ತಿಯೂ ರಕ್ಷಿಸಲೂ ಮುಂದಾಗಲಿಲ್ಲ. ತಲೆಯಲ್ಲಿ 3 ಸೆ.ಮಿ ನಷ್ಟು ಗಾಯವಾಗಿದ್ದು, ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.