ಕೊಲ್ಕತ್ತಾ: ಹೆಸರಾಂತ ಬಂಗಾಳಿ ನಟಿ ಪಾಯಲ್ ಚಕ್ರವರ್ತಿಯ ಮೃತದೇಹವು ಬುಧವಾರ ಸಂಜೆ ವೆಸ್ಟ್ ಬೆಂಗಾಲ್ ನ ಸಿಲಿಗುರಿನಲ್ಲಿರುವ ಹೊಟೇಲ್ ನ ರೂಮ್ ನಲ್ಲಿ ಪತ್ತೆಯಾಗಿದೆ.
ಹೊಟೇಲ್ ಸಿಬ್ಬಂದಿ ನಟಿ ಪಾಯೆಲ್ ಇದ್ದ ರೂಮಿನಿಂದ ಯಾವುದೇ ಉತ್ತರ ಸಿಗದೆ ಇದ್ದಾಗ ಬಾಗಿಲನ್ನು ಒಡೆದು ಒಳಗಡೆ ಹೋಗಿದ್ದಾರೆ. ಈ ವೇಳೆ ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಈಕೆ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದರು.
ಈಕೆ ‘ಚೋಖರ್ ತಾರಾ ತು’ ಶೋ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು, ಇದೀಗ ಈಕೆಯ ಸಾವಿನ ಸುದ್ದಿ ಸಹ ಕಲಾವಿದರಿಗೆ ದೊಡ್ಡ ಶಾಕ್ ನೀಡಿದ್ದು ಚಿತ್ರರಂಗ ಕಂಬನಿ ಮಿಡಿದಿದೆ.