ನಟ ವಿಜಯ್ ಸೇತುಪತಿ ಹಾಗೂ ನಟಿ ಕತ್ರೀನಾ ಕೈಫ್ ನಟಿಸುತ್ತಿರುವ ಚಿತ್ರದ ಬಗ್ಗೆ ತಿಳಿಯೋಕೆ ಅಭಿಮಾನಿಗಳು ಕಾತುರದಿಂದಿದ್ದಾರೆ. ಅದಕ್ಕೆ ಕ್ರಿಸ್ ಮಸ್ ಹಬ್ಬದಂದು ನಟಿ ಅಭಿಮಾನಿಗಳಿಗೆ ಸಿನಿಮಾದ ಹೆಸರನ್ನು ರಿವೀಲ್ ಮಾಡಿದ್ದಾರೆ.
ಈ ಬಗ್ಗೆ ಇನ್ಸ್ ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ನಿರ್ದೇಶಕ ಶ್ರೀ ರಾಮ್ ರಾಘವನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರ “ಮೆರ್ರಿ ಕ್ರಿಸ್ ಮಸ್”.
ಇದೇ ಚಿತ್ರದಲ್ಲಿ ನಟಿ ಕತ್ರೀನಾ ಹಾಗೂ ವಿಜಯ್ ಸೇತುಪತಿ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ತ ಚಿತ್ರದ ಶೂಟಿಂಗ್ ಕೆಲಸ ಆರಂಭವಾಗಿದೆ. ಕತ್ರೀನಾ ʼಮೆರ್ರಿ ಕ್ರಿಸ್ ಮಸ್ʼ ನಲ್ಲಿ ಮಾತ್ರವಲ್ಲದೆ ಸಲ್ಮಾನ್ ಜತೆಯಲ್ಲಿ ‘ಟೈಗರ್ 3’ ಚಿತ್ರದಲ್ಲಿ ಹಾಗೂ ಫರ್ಹಾನ್ ಅಖ್ತರ್ ನಿರ್ದೇಶನದಲ್ಲಿ ಬರುತ್ತಿರುವ ‘ಜೀ ಲೇ ಜಾರ’ ಸಿನಿಮಾದಲ್ಲೂ ಬಣ್ಣಹಚ್ಚಿದ್ದಾರೆ.