ದೇಶೀಯ ಕ್ರಿಕೆಟ್ನ ಹಿರಿಯ ಆಟಗಾರ ಬಿಪುಲ್ ಶರ್ಮಾ ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ನಂತರ ಯುಎಸ್ ಕ್ರಿಕೆಟ್ಗೆ ತೆರಳಲು ನಿರ್ಧರಿಸಿದ್ದಾರೆ. ಬಿಪುಲ್ ಶರ್ಮಾ ಈಗಾಗಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರರಾಗಿದ್ದರು.
ಪಂಜಾಬ್ ಕಿಂಗ್ಸ್ 11 ತಂಡದ ಪರವಾಗಿಯೂ ಇವರು ಆಡಿದ್ದಾರೆ. ಸದ್ಯ ಯುಎಸ್ ಕ್ರಿಕೆಟ್ನಲ್ಲಿ ಆಡುವ ಸಲುವಾಗಿ ಭಾರತೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ.
ಬಿಸಿಸಿಐ ನಿಯಮದ ಅನ್ವಯ ಭಾರತೀಯ ಆಟಗಾರರು ವಿದೇಶಿ ಲೀಗ್ನಲ್ಲಿ ಭಾಗವಹಿಸಬೇಕಾದರೆ ಅವರು ಐಪಿಲ್ ಮತ್ತು ದೇಶೀಯ ಕ್ರಿಕೆಟ್ನಿಂದ ಹಿಂದೆ ಸರಿಯಬೇಕಿದೆ. ಐಪಿಎಲ್ನಲ್ಲಿ ಬಿಪುಲ್ 33 ಪಂದ್ಯಗಳನ್ನು ಆಡಿದ್ದಾರೆ. ಭಾರತದಲ್ಲಿ ಒಟ್ಟಾರೆ 59 ಪಂದ್ಯಗಳನ್ನು ಆಡಿದ್ದು, 126 ವಿಕೆಟ್ ಕಬಳಿಸಿದ್ದಾರೆ.