ನಟ ನಾಗಾರ್ಜುನ ನಟಸುತ್ತಿರುವ ಥ್ರಿಲ್ಲರ್ ಸಿನಿಮಾ ‘ಗೋಸ್ಟ್’ ನಿಂದ ನಟಿ ಕಾಜೋಲ್ ಹೊರ ಬಂದಿದ್ದು, ಈಗ ಅವರ ಜಾಗಕ್ಕೆ ನಟಿ ಅಮಲಾ ಪೌಲ್ ನಟಿಸಲಿದ್ದಾರೆ.
ಈಗಾಗಲೇ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದ್ದು, ಅಮಲಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಟಿ ಅಮಲಾ ಒಪ್ಪಿಕೊಂಡಿದ್ದಾರೆ. ಆದರೆ ಸಿನಿಮಾದಲ್ಲಿ ಹೆಚ್ಚಿ ರೊಮಾನ್ಸ್ ದೃಶ್ಯವಿರಲಿದೆಯಂತೆ. ಅಮಲಾ, ನಾಗಾರ್ಜುನ ಜೊತೆ ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋದು ಕಷ್ಟ.
ಆದರೆ ಈ ದೃಶ್ಯದಲ್ಲಿ ನಟಿಸಲು ಭಾರೀ ಮೊತ್ತದ ಸಂಭಾವನೆ ಕೊಡಿ ಎಂಬು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಯಾವಾಗಲೂ ಡಿಫರೆಂಟ್ ಪಾತ್ರ, ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಾಗುವ ಅಮಲಾ ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾರೆ ಕಾದು ನೋಡಬೇಕಿದೆ.