ಬೆಂಗಳೂರು: ಅರುಣ್ ಲೋಕನಾಥ್ ನಿರ್ದೇಶನದ, ನಟ ಉಪೇಂದ್ರ ಅಭಿನಯದ ‘ಉಪೇಂದ್ರ ಮತ್ತೆ ಬಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಇದೀಗ ಯುಟ್ಯೂಬ್ನಲ್ಲಿ ಟ್ರೇಲರ್ ಗೆ ಟ್ರೇಡಿಂಗ್ನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಚಿತ್ರಕ್ಕೆ ಉಪೇಂದ್ರ ಸಂಭಾಷಣೆಯನ್ನು ಬರೆದಿದ್ದಾರೆ. ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಅಭಿನಯಿಸಿದ್ದ ’ಸೊಗ್ಗಾಡೆ ಚಿನ್ನಿ ನಾಯನ’ ಚಿತ್ರದ ರಿಮೇಕ್ ‘ಉಪೇಂದ್ರ ಮತ್ತೆ ಬಾ’. ಚಿತ್ರದಲ್ಲಿ ಪ್ರೇಮ, ಶೃತಿ ಹರಿಹರನ್, ಹರ್ಷಿಕಾ ಪೂಣಚ್ಚ ಹಾಗೂ ಎ ಚಿತ್ರದ ಖ್ಯಾತಿಯ ಚಾಂದಿನಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ವಿ.ಸಂಭ್ರಮ್ ಸಂಗೀತವಿದೆ.