ನವದೆಹಲಿ: ಬಾಲಿವುಡ್ ನಟ ಶಾರೂಖ್ ಖಾನ್ ಮಹಾರಾಷ್ಟ್ರದ ಅಲಿಬಾಗ್ ನಲ್ಲಿ ಹೊಂದಿರುವ ಆಸ್ತಿಯು ಅಕ್ರಮವಲ್ಲ ಎಂದು ಮೇಲ್ಮನವಿ ಪ್ರಾಧಿಕಾರವು ಹೇಳಿದೆ.
ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿದ್ದ ಆಸ್ತಿಯನ್ನು ಕಾನೂನು ಸಮ್ಮತವಾಗಿ ಮರಳಿಸಿದೆ ಮತ್ತು ಶಾರೂಖ್ ವಿರುದ್ಧದ ಆರೋಪ ಆಧಾರರಹಿತ ಎಂದು ತಿಳಿಸಿದೆ.
ಆದಾಯ ತೆರಿಗೆ ಇಲಾಖೆಯು ಕಳೆದ ವರ್ಷ ಫೆಬ್ರವರಿಯಲ್ಲಿ ನಟ ಶಾರೂಖ್, ಪತ್ನಿ ಗೌರಿಖಾನ್, ಸಂಬಂಧಿಗಳು ಷೇರುದಾರರಾಗಿರುವ ಕಂಪೆನಿ ವಿರುದ್ಧ ನೋಟಿಸ್ ನೀಡಿತ್ತು. ಇದನ್ನು ಈಗ ನ್ಯಾಯ ತೀರ್ಮಾನ ಪ್ರಾಧಿಕಾರ ರದ್ದು ಮಾಡಿದೆ.