ಹೊಸದಿಲ್ಲಿ: ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು ತಮ್ಮ 66ನೇ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡರು.
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ನಿಧನ ಹೊಂದಿದ ಹಿನ್ನೆಲೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಕೂಡದೆಂದು ರಜನೀಕಾಂತ್ ಅಭಿಮಾನಿಗಳಿಗೆ ಹೇಳಿದ್ದು, ಆದರೂ ರಜನಿ ಅಭಿಮಾನಿಗಳು ಭಾರೀ ಪೋಸ್ಟರ್ ಗಳನ್ನು ಏರಿಸಿ ಸಂಭ್ರಮ ಆಚರಿಸಿದ್ದಾರೆ. ಇನ್ನು ಕೆಲವರು ರಜನಿಗೆ ಉತ್ತಮ ಆಯುರಾರೋಗ್ಯವನ್ನು ದೇವರು ಅನುಗ್ರಹಿಸಲೆಂದು ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.