ಹೈದರಾಬಾದ್: ಭಾರತ ಚಿತ್ರರಂಗದ ಯಶಸ್ವೀ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದ್ದು, ಇದೀಗ ನಟ ಪ್ರಭಾಸ್ ಇದೇ ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅನುಷ್ಕಾ ಜೊತೆಗೆ ಮದುವೆಯಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ತಾನಿನ್ನೂ ಮದುವೆಯಾಗುವ ಕುರಿತು ಯೋಚನೆಯನ್ನು ಮಾಡಿಲ್ಲ ಎಂದು ನಟ ಪ್ರಭಾಸ್ ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಸಂದರ್ಭ ಹೇಳಿದ್ದಾರೆ.
ಇತ್ತೀಚೆಗಷ್ಟೇ ರಾಣಾ ದಗ್ಗುಬಾಟಿಗಿಂತ ಪ್ರಭಾಸ್ ಸೆಕ್ಸಿಯಾಗಿದ್ದಾರೆಂದು ಅನುಷ್ಕಾ ಹೇಳಿಕೆ ನೀಡಿದ್ದರು ಈಗಾಗಲೇ ಪ್ರಭಾಸ್ ಹಾಗೂ ಅನುಷ್ಕಾ ನಡುವೆ ಪ್ರೇಮಾಂಕುವಾಗಿದೆ ಎಂಬ ಊಹಾಪೋಹಗಳಿದ್ದು, ಮದುವೆ ವಿಚಾರ ಕುರಿತು ಪ್ರಸ್ತುತ ನನ್ನ ಮಹಿಳಾ ಅಭಿಮಾನಿಗಳು ಭೀತಿ ಪಡುವ ಅಗತ್ಯವಿಲ್ಲ ಎಂದು ನಟ ಪ್ರಭಾಸ್ ನಗೆ ಬೀರಿದ್ದಾರೆ.