ಮಂಗಳೂರು: ನಗರದ ಕೆನರಾ ಕಾಲೇಜಿನ (ಸ್ನಾಯತ್ತ) ವಾಣಿಜ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ “ವರ್ಚುವಲ್ ವಿಸ್ತಾಸ್ ಆಫ್ ಭಾರತ್ ಅನ್ ಲಾಕಿ೦ಗ್ ಇ೦ಡಿಯಾಸ್ ಕ್ರಿಯೇಟಿವ್ ಕ್ಯಾಪಿಟಲ್ ತ್ರೂ ಡಿಜಿಟಲ್ ಟ್ವಿನ್ಸ್ & ಸ್ಮಾರ್ಟ್ ಬಿಜಿ಼ನೆಸ್ ಸ್ಟ್ರಾಟಜಿ ” ಎಂಬ ವಿಷಯದ ಮೇಲೆ ರಾಜ್ಯ ಮಟ್ಟದ ಒಂದು ದಿನದ ಸಮ್ಮೇಳನವನ್ನು ಎಪ್ರಿಲ್ 18, 2026 ರ೦ದು ಯಶಸ್ವಿಯಾಗಿ ಆಯೋಜಿಸಿಲಾಯಿತು.
ಈ ಸಮ್ಮೇಳನದಲ್ಲಿ ವಿವಿಧ ಕಾಲೇಜುಗಳ ಯುಜಿ ಹಾಗೂ ಪಿಜಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಯುಜಿ ವಿದ್ಯಾರ್ಥಿಗಳಿಗಾಗಿ ಅಂತರ ತರಗತಿ ವಾಣಿಜ್ಯ ಮತ್ತು ನಿರ್ವಹಣಾ ಫೆಸ್ಟ್- ʼರಣನೀತಿ 2026′ ಅನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಸಿಎ ಪ್ರಸನ್ನ ಶೆಣೈ, ಸಹ-ಸ್ಥಾಪಕರು, ಪ್ರಸನ್ನ ಶೆಣೈ & ಕೋ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಇಂದಿನ ಡಿಜಿಟಲ್ ಯುಗದಲ್ಲಿ ಸಮ್ಮೇಳನದ ವಿಷಯದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ನವೀನತೆ ಮತ್ತು ಉದ್ಯಮಶೀಲತೆಯತ್ತ ಗಮನಹರಿಸಬೇಕು ಎಂದು ಪ್ರೇರೇಪಿಸಿದರು.
ಸ್ನಾತಕೋತ್ತರ ವಿಭಾಗದ ಸಂಯೋಜಕಿಯಾದ ಶ್ರೀಮತಿ ಸ್ವಾತಿ ನಾಯಕ್ ಅವರು ಕಾರ್ಯಕ್ರಮದ ಉದ್ದೇಶ ಮತ್ತು ರೂಪುರೇಷೆಗಳ ಕುರಿತು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲೆಯಾದ, ಡಾ. ಪ್ರೇಮಲತಾ ವಿ. ಅವರು ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ಬೆಳವಣಿಗೆ ಸಾಧಿಸಬೇಕು ಎಂದು ಹೇಳಿದರು.
ಉದ್ಘಾಟನಾ ಸಮಾರ೦ಭದ ಬಳಿಕ ಮುಖ್ಯ ಅತಿಥಿ, ಸಿಎ ಪ್ರಸನ್ನ ಶೆಣೈ, ತಾಂತ್ರಿಕ ಅಧಿವೇಶನವನ್ನು ನಡೆಸಿ, ನವೀನತೆ, ಸ್ಮಾರ್ಟ್ ಆ್ಯಪ್‌ಗಳು ಹಾಗೂ ಆಧುನಿಕ ವ್ಯವಹಾರ ತಂತ್ರಗಳ ಕುರಿತು ವಿವರವಾದ ಮಾಹಿತಿಯನ್ನು ಹಂಚಿಕೊಂಡರು. ಈ ಅಧಿವೇಶನವು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿತ್ತು.
ಸಮ್ಮೇಳನದ ಅಂಗವಾಗಿ ನಡೆದ ಪ್ಯಾನೆಲ್ ಪೇಪರ್ ಪ್ರಸ್ತುತಿಗಳಲ್ಲಿ ವಿವಿಧ ಕಾಲೇಜುಗಳಿಂದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಂದ ಒಟ್ಟು 35 ಸಂಶೋಧನಾ ಪ್ರಬಂಧಗಳು ಮಂಡಿಸಲ್ಪಟ್ಟವು. ಇವು ಸಮಕಾಲೀನ ವ್ಯವಹಾರ ಮತ್ತು ಡಿಜಿಟಲ್ ಪರಿವರ್ತನೆಗೆ ಸಂಬಂಧಿಸಿದ ವಿಭಿನ್ನ ವಿಷಯಗಳನ್ನು ಒಳಗೊಂಡಿದ್ದವು. ಅಂದು ನಡೆದ ರಣನೀತಿ 2026 ಫೆಸ್ಟ್ , ಪದವಿ ವಿದ್ಯಾರ್ಥಿಗಳಲ್ಲಿ ಕಾರ್ಯಾತ್ಮಕ ಕಲಿಕೆ ಮತ್ತು ನಾಯಕತ್ವ ಕೌಶಲ್ಯಗಳನ್ನು ಅಳವಡಿಸಲು ಉತ್ತೇಜಿಸಿತು.
ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ಸಂಯೋಜಕಿಯಾದ ಶ್ರೀಮತಿ ಶ್ವೇತಾ ಪೈ ಎಂ. ಹಾಗೂ ಫೆಸ್ಟ್ ನ ಸಂಯೋಜಕಿಯಾದ ಶ್ರೀಮತಿ ಸ್ನೇಹಾ ಪೈ ಅವರು ವಿವಿಧ ಸ್ಪರ್ಧೆಗಳ ವಿಜೇತರನ್ನು ಘೋಷಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾದ ಶ್ರೀಮತಿ ಸಿಎ ವೃ೦ದಾ ಕೊನ್ನರ್, ಪ್ರೊಪ್ರೈಟರ್ ಕೊನ್ನರ್ & ಕ೦. , ಅವರು ವಿದ್ಯಾರ್ಥಿಗಳಿಗೆ ಧನಾತ್ಮಕ ಮನೋಭಾವವನ್ನು ಅಳವಡಿಸಿಕೊಂಡು ಡಿಜಿಟಲ್ ಯುಗದ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಳ್ಳಲು ಪ್ರೇರೇಪಿಸಿದರು ಮತ್ತು ವಿಜೇತ ಸ್ಪರ್ಧಿಗಳಿಗೆ ಬಹುಮಾನಗಳನ್ನು ವಿತರಿಸಿದರು.
ಕಾಲೇಜಿನ ಸಂಚಾಲಕರಾದ ಸಿಎ ಎಂ. ಜಗನ್ನಾಥ ಕಾಮತ್ ಅವರು ಅಧ್ಯಕ್ಷೀಯ ಭಾಷಣದಲ್ಲಿ ವಿಭಾಗದ ಶ್ರಮವನ್ನು ಶ್ಲಾಘಿಸಿ, ಇಂತಹ ಚಿಂತನಾತ್ಮಕ ಕಾರ್ಯಕ್ರಮಗಳನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದ್ದು, ವಿದ್ಯಾರ್ಥಿಗಳ ಜ್ಞಾನ ವಿನಿಮಯ, ಕೌಶಲ್ಯ ವೃದ್ಧಿ ಹಾಗೂ ಶೈಕ್ಷಣಿಕ ಸಹಭಾಗಿತ್ವಕ್ಕೆ ಉತ್ತಮ ವೇದಿಕೆಯನ್ನು ಒದಗಿಸಿತು.

