ಮಂಗಳೂರು: ಕೆನರಾ ಕಾಲೇಜು (ಸ್ವಾಯತ್ತ), ಮಂಗಳೂರು – ಸೆಂಟರ್ ಫಾರ್ ಪಿಜಿ ಸ್ಟಡೀಸ್ ಇನ್ ಕಾಮರ್ಸ್ ವತಿಯಿಂದ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಹಾಗೂ ವೃತ್ತಿಪರ ಸಾಮರ್ಥ್ಯವರ್ಧನೆಯ ಉದ್ದೇಶದಿಂದ ವಿವಿಧ ಸ್ಕಿಲ್ ಡೆವಲಪ್‌ಮೆಂಟ್ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮವನ್ನು ಸೆಪ್ಟಂಬರ್ ೦9, 2026 ರ೦ದು ಆಯೋಜಿಸಲಾಯಿತು. ಕಾರ್ಯಕ್ರಮವು ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಾದ, ಕಾಕುಂಜೆ ಗ್ರೂಪ್ ಆಫ್ ಕಂಪನೀಸ್‌ನ ನಿರ್ದೇಶಕರಾದ ಶ್ರೀ ಮಿಥುನ್ ಭಟ್ ಕಾಕುಂಜೆ , ಅವರು ‘ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಹಾಗೂ ಇಂತಹ ಕ್ಲಬ್‌ಗಳು ಅವರ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಪ್ರೇರೇಪಿಸಿದರು.

ಪಿಜಿ ಸಂಯೋಜಕಿ ಶ್ರೀಮತಿ ಸ್ವಾತಿ ನಾಯಕ್ ಅವರು ತಮ್ಮ ನುಡಿಗಳಲ್ಲಿ, ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿರಿಸಿ ವಿಭಾಗದ ಈ ಹೊಸ ಪ್ರಯತ್ನಕ್ಕೆ ಹೆಜ್ಜೆ ಇಡುವ ಯೋಜನೆಯನ್ನು ಪ್ರಸ್ತಾಪಿಸಿದರಲ್ಲದೇ, Research Club ಮತ್ತು Finance Club ಕುರಿತು, ಶ್ರೀಮತಿ ಸ್ನೇಹಾ ಪೈ ಅವರು Communication Club ಕುರಿತು ಹಾಗೂ ಶ್ರೀಮತಿ ಶ್ವೇತಾ ಪೈ ಅವರು Aptitude Club ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ಹಾಗೂ ಈ ಮಾಹಿತಿ ನೀಡಿದ ವಿಭಾಗದ ಉಪನ್ಯಾಸಕಿಯರೇ ಕ್ರಮವಾಗಿ ಸಂಬಂಧಿತ ಕ್ಲಬ್‌ಗಳ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಕ್ಲಬ್‌ಗಳಿಗೆ ಕ್ರಮವಾಗಿ Curio, Fin, Orator’s ಮತ್ತು Aptivance ಎಂಬ ಹೆಸರುಗಳನ್ನು ನಾಮಕರಣ ಮಾಡಲಾಗಿದ್ದು, ಮುಖ್ಯ ಅತಿಥಿಗಳಾದ ಶ್ರೀ ಮಿಥುನ್ ಭಟ್ ಕಾಕುಂಜೆ ಅವರು ಹೆಸರುಗಳನ್ನು ಅನಾವರಣಗೊಳಿಸಿದರು.

ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಪ್ರಾಂಶುಪಾಲೆ, ಡಾ. ಪ್ರೇಮಲತಾ ವಿ., , ಅಧ್ಯಾಪಕರ ಈ ವಿನೂತನ ಪ್ರಯತ್ನವನ್ನು ಶ್ಲಾಘಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮವಾಗಿ ಮುನ್ನಡೆಯಲು ವಿದ್ಯಾರ್ಥಿಗಳು ಶೈಕ್ಷಣಿಕ ಅರ್ಹತೆಯೊಂದಿಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಪ್ರೇರೇಪಿಸಿದರು.ವಿದ್ಯಾರ್ಥಿಗಳ ಸಮಗ್ರ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವಂತೆ ರೂಪಿಸಲಾದ ಈ ಕ್ಲಬ್‌ಗಳ ಮೂಲಕ ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಜ್ಞಾನ ಮತ್ತು ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿನಿ ಸಾಕ್ಷಿ ಸ್ವಾಗತಿಸಿದರು. ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಅಂಕಿತಾ ವಂದನಾರ್ಪಣೆ ಸಲ್ಲಿಸಿದರು.