ಮಂಗಳೂರು: ಕೆನರಾ ಕಾಲೇಜು (ಸ್ವಾಯತ್ತ) ಮಂಗಳೂರು, ಇಲ್ಲಿನ, ವಾಣಿಜ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ 2026–27ನೇ ಶೈಕ್ಷಣಿಕ ಸಾಲಿನ ಹೆಚ್ಚುವರಿ ಕೋರ್ಸ್ಗಳ ಉದ್ಘಾಟನಾ ಕಾರ್ಯಕ್ರಮವನ್ನು 8ನೇ ಸೆಪ್ಟೆಂಬರ್ 2026 ರಂದು ಆಯೋಜಿಸಲಾಯಿತು. MS Excel for Employability Skills ಹಾಗೂ Applied Tally Prime in Commerce ಎಂಬ ಎರಡು ಹೆಚ್ಚುವರಿ ಕೋರ್ಸ್ಗಳನ್ನು ಪರಿಚಯಿಸಲಾಯಿತು. ಕಾರ್ಯಕ್ರಮವು ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು.
ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸ೦ಯೋಜಕಿ ಶ್ರೀಮತಿ ಸ್ವಾತಿ ನಾಯಕ್ ಅವರು ಈ ಕೋರ್ಸ್ಗಳ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಎಂ.ಕಾಂ ವಿಭಾಗದ ಉಪನ್ಯಾಸಕಿಯರಾದ ಶ್ರೀಮತಿ ಶ್ವೇತಾ ಪೈ ಹಾಗೂ ಶ್ರೀಮತಿ ಸ್ನೇಹಾ ಪೈ ಅವರು ಹೆಚ್ಚುವರಿ ಕೋರ್ಸ್ಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಪ್ರವೀಣ್ ಕುಮಾರ್ ಕೆ.ಸಿ., ಪ್ರಾಂಶುಪಾಲರು, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು, ಇವರು, ‘ವಿದ್ಯಾರ್ಥಿಗಳು ಇಂತಹ ಹೆಚ್ಚುವರಿ ಕೋರ್ಸ್ಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಶೈಕ್ಷಣಿಕ ಜ್ಞಾನದೊಂದಿಗೆ ಪ್ರಾಯೋಗಿಕ ಮತ್ತು ಉದ್ಯೋಗಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಪ್ರೇರೇಪಿಸಿದರು.
ಅಧ್ಯಕ್ಷೀಯ ಮಾತುಗಳಲ್ಲಿ ಡಾ. ಪ್ರೇಮಲತಾ ವಿ ಪ್ರಾಂಶುಪಾಲೆ, ವಿದ್ಯಾರ್ಥಿಗಳ ವೃತ್ತಿ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ದೃಷ್ಟಿಯಿಂದ ಪಠ್ಯಕ್ರಮದ ಜೊತೆಗೆ ಹೆಚ್ಚುವರಿ ಕೋರ್ಸ್ಗಳನ್ನು ಮಾಡುವುದು ಅತ್ಯಗತ್ಯ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಈ ಕೋರ್ಸ್ಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರೇರೇಪಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿನಿಯರಾದ, ದೀಪಾಲಿ ಅವರು ಸ್ವಾಗತಿಸಿದರು. ಮಾನಸ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಹೃಷಿತಾ ವಂದನಾರ್ಪಣೆ ಸಲ್ಲಿಸಿದರು.

