Bengaluru 22°C
Ad

ರೈಲಿನಲ್ಲಿ ಎರಡು ತುಂಡುಗಳಲ್ಲಿ ಮಹಿಳೆ ಶವ ಪತ್ತೆ : ಕೈ, ಕಾಲುಗಳು ಮಿಸ್!

ಮಹಿಳೆಯ ಶವವನ್ನು ಎರಡು ಭಾಗ ತುಂಡರಿಸಿ ಟ್ರಾಲಿ ಬ್ಯಾಗ್‌ನಲ್ಲಿ ಇರಿಸಿ ರೈಲಿನಲ್ಲಿ ಬಿಟ್ಟು ಹೋಗಲಾಗಿದೆ. ಮಧ್ಯಪ್ರದೇಶದ ಇಂದೋರ್ ನಗರದ ರೈಲಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಭೋಪಾಲ್: ಮಹಿಳೆಯ ಶವವನ್ನು ಎರಡು ಭಾಗ ತುಂಡರಿಸಿ ಟ್ರಾಲಿ ಬ್ಯಾಗ್‌ನಲ್ಲಿ ಇರಿಸಿ ರೈಲಿನಲ್ಲಿ ಬಿಟ್ಟು ಹೋಗಲಾಗಿದೆ. ಮಧ್ಯಪ್ರದೇಶದ ಇಂದೋರ್ ನಗರದ ರೈಲಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಬೇರೆಡೆ ಮಹಿಳೆಯನ್ನು ಕೊಲೆ ಮಾಡಿ, ನಂತರ ದೇಹವನ್ನು ಎರಡು ಭಾಗಗಳಾಗಿ ತುಂಡರಿಸಿ, ಎರಡು ಟ್ರೋಲಿ ಬ್ಯಾಗ್‌ಗಳಲ್ಲಿ ತುಂಬಿಸಿ ರೈಲಿನಲ್ಲಿ ಬಿಟ್ಟು ಹೋಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರುನ ಅನುಮಾನ ವ್ಯಕ್ತಪಡಿಸಿದರು.

ಇಂದೋರ್ ನಿಲ್ದಾಣಕ್ಕೆ ಬಂದ ರೈಲು ಪ್ರಯಾಣಿಕರು ಇಳಿದ್ಮೇಲೆ ಬೋಗಿಗಳನ್ನು ಸ್ವಚ್ಛತಾ ಕಾರ್ಯಕ್ಕಾಗಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಸ್ವಚ್ಛತಾ ಕಾರ್ಮಿಕರು ಅನುಮಾನಾಸ್ಪದ ಬ್ಯಾಗ್ ಕಂಡ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ರೈಲ್ವೇ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಬ್ಯಾಗ್ ತರೆದು ನೋಡಿದಾಗ ಮಹಿಳೆಯ ಶವ ಸಿಕ್ಕಿದೆ. 20 ರಿಂದ 25 ವಯಸ್ಸಿನ ಮಹಿಳೆ ಶವ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಶವವನ್ನು ರೈಲ್ವೇ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಮಹಿಳೆಯ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Ad
Ad
Nk Channel Final 21 09 2023
Ad