ಹರಿಯಾಣ: ತಾಯಿ ತನ್ನ 11 ವರ್ಷದ ಮಗನನ್ನು ಅಮಾನುಷವಾಗಿ ಥಳಿಸಿರುವ ಘಟನೆ ಫರಿದಾಬಾದ್‌ನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲಸದಿಂದ ಸಂಜೆ ಮನೆಗೆ ಬಂದ ಪತಿ ಸಿಸಿಟಿವಿ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾನೆ.

ಇಂತಹ ಅಮಾನುಷ ಕೃತ್ಯಗೈದ ಪತ್ನಿಯ ವಿರುದ್ಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾನೆ. ಮಹಿಳೆ ತನ್ನ ಮಗನಿಗೆ ಥಳಿಸುತ್ತಿರುವುದನ್ನು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇನ್ನು ಹಲ್ಲೆಯ ಸಂದರ್ಭದಲ್ಲಿ ಮಗುವಿನ ತಂದೆ ಮಧ್ಯಪ್ರವೇಶಿಸಿ ಮಗುವನ್ನು ತನ್ನ ಕ್ರೂರ ತಾಯಿಯಿಂದ ರಕ್ಷಿಸಿದ ದೃಶ್ಯಾವಳಿಗಳು ಸಹ ಸೆರೆಯಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಾಲಕನ ತಂದೆ, ಪತ್ನಿಯ ಕ್ರೂರ ವರ್ತನೆ ವಿರುದ್ಧ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯುಸಿ) ಆದೇಶದ ಮೇರೆಗೆ ಸೂರಜ್‌ಕುಂಡ್ ಪೊಲೀಸ್ ಠಾಣೆಯು ತಾಯಿಯ ವಿರುದ್ಧ ಕ್ರೌರ್ಯ ಪ್ರಕರಣವನ್ನು ದಾಖಲಿಸಿದೆ.

https://twitter.com/i/status/1795093434107056242