Bengaluru 23°C
Ad

ಬುರ್ಖಾ ಧರಿಸಿ ಬಂದ ಖದೀಮ : ಜ್ಯುವೆಲ್ಲರಿ ಶಾಪ್​ನಲ್ಲಿ ದರೋಡೆಗೆ ಯತ್ನ

ಆಭರಣದ ಅಂಗಡಿಯೊಂದಕ್ಕೆ ಬುರ್ಖಾಧರಿಸಿ ಮತ್ತೋರ್ವ ಹೆಲ್ಮೆಟ್‌ ಧರಿಸಿ ನುಗ್ಗಿದ ಮಾಲೀಕನಿಗೆ ಚಾಕು ತೋರಿಸಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ಘಟನೆ ಹೈದರಾಬಾದ್‌ನ ಉಪನಗರವಾದ ಮೆಡ್ಚಲ್‌ನಲ್ಲಿ ಗುರುವಾರ ನಡೆದಿದೆ.

ಹೈದರಾಬಾದ್: ಆಭರಣದ ಅಂಗಡಿಯೊಂದಕ್ಕೆ ಬುರ್ಖಾಧರಿಸಿ ಮತ್ತೋರ್ವ ಹೆಲ್ಮೆಟ್‌ ಧರಿಸಿ ನುಗ್ಗಿದ ಮಾಲೀಕನಿಗೆ ಚಾಕು ತೋರಿಸಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ಘಟನೆ ಹೈದರಾಬಾದ್‌ನ ಉಪನಗರವಾದ ಮೆಡ್ಚಲ್‌ನಲ್ಲಿ ಗುರುವಾರ ನಡೆದಿದೆ.

ಬುರ್ಖಾದಾರಿ ಮಾಲೀಕನಿಗೆ ಚಿನ್ನವನ್ನು ತುಂಬಿಸುವಂತೆ ಹೇಳಿದ್ದಾನೆ. ಈ ವೇಳೆ ಮಗ ಒಳಗೆ ಓಡಿಹೋಗಿದ್ದಾನೆ. ಚಿನ್ನ ನೀಡುವುದಕ್ಕೆ ನಿರಾಕರಿಸಿದಕ್ಕೆ ಭುಜ್ಕಕೆ ಚಾಕುವಿನಿಂದ ಇರಿದಿದ್ದಾನೆ.ಇದರಿಂದ ವಿಚಲಿತನಾದ ಅಂಗಡಿ ಮಾಲೀಕನು ಅಂಗಡಿಯಿಂದ ಹೊರಗೆ ಓಡಿದ್ದಾನೆ. ಇದೇ ವೇಳೆ ಕಳ್ಳರು ಕೈಗೆ ಸಿಕ್ಕ ಆಭರಣ, ವಸ್ತುಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಪರಾರಿಯಾಗಿದ್ದಾರೆ.

ಅಂಗಡಿಯ ಮಾಲೀಕರು ಹೊರಬಂದು ಅಕ್ಕಪಕ್ಕದ ಜನರನ್ನು ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದಾಗ, ಕಳ್ಳರು ಗಾಬರಿಗೊಂಡು ಓಡಿಹೋಗಿದ್ದಾರೆ.ಆಗ ಅಂಗಡಿಯಲ್ಲಿದ್ದ ವ್ಯಕ್ತಿ ದರೋಡೆಕೋರನ ಮೇಲೆ ಕುರ್ಚಿಯಿಂದ ಹೊಡೆದಿದ್ದಾನೆ. ಬಳಿಕ ಗಾಬರಿಯಿಂದ ಕಳ್ಳರು ಬೈಕ್​ನಲ್ಲಿ ಪರಾರಿಯಾಗಿದ್ದಾರೆ. ಈ ಇಡೀ ಘಟನೆಯನ್ನು ಅಂಗಡಿಯ ಕ್ಲೋಸ್ಡ್-ಸರ್ಕ್ಯೂಟ್ ಕ್ಯಾಮೆರಾಗಳು ದಾಖಲಿಸಿವೆ. ಪೊಲೀಸರು ದೃಶ್ಯಾವಳಿಗಳನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಕಳ್ಳರ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದಾರೆ.

https://x.com/upuknews1/status/1804093517020426565

Ad
Ad
Nk Channel Final 21 09 2023
Ad