News Karnataka Kannada
Saturday, May 18 2024
ಕ್ಯಾಂಪಸ್

ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇರ ನೇಮಕಾತಿಗೆ ಈ ಮಾನದಂಡ ಕಡ್ಡಾಯ: ಯುಜಿಸಿ

ugc
Photo Credit : News Kannada

ದೆಹಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆ, ರಾಜ್ಯ ಅರ್ಹತಾ ಪರೀಕ್ಷೆ ಮತ್ತು ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿಗೆ ಕನಿಷ್ಠ ಮಾನದಂಡವಾಗಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಪ್ರಕಟಿಸಿದೆ. ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಗಳ ಕುರಿತು ಜೂನ್ 30 ರಂದು ಮಾಡಲಾದ ಪರಿಷ್ಕೃತ ನಿಯಮಾವಳಿಗಳ ಪ್ರಕಟಣೆಯು ಜುಲೈ 1, 2023 ರಿಂದ ಜಾರಿಗೆ ಬಂದಿದೆ.

ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಸುದ್ದಿ ಹಂಚಿಕೊಂಡಿದ್ದು, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌ಡಿ ಅರ್ಹತೆ ಐಚ್ಛಿಕವಾಗಿರುತ್ತದೆ ಎಂದು ತಿಳಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯನ್ನು ಸರಳೀಕರಿಸುವಲ್ಲಿ ಮತ್ತು ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ತಿದ್ದುಪಡಿ ಮಾಡಲಾದ ನಿಯಮಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಯುಜಿಸಿ ಹೇಳಿದೆ.

https://twitter.com/mamidala90/status/1676440794784313344? ref_src=twsrc%5Etfw%7Ctwcamp%5Etweetembed%7Ctwterm%5E1676440794784313344%7Ctwgr%5Ec5d28f1ae67384863d74194e037fbb2cdeb3f845%7Ctwcon%5Es1_&ref_url=https%3A%2F%2Ftv9kannada.com%2Feducation%2Fugc-announces-net-set-or-slet-no-longer-mandatory-for-direct-recruitment-to-assistant-professor-post-introduces-alternative-criteria-nsp-616092.html

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು