News Karnataka Kannada
Saturday, May 11 2024
ಮಂಗಳೂರು

ಮಂಗಳೂರು: ವಿದ್ಯಾರ್ಥಿಗಳು ವಿದ್ಯಾರ್ಥಿಜೀವನದಲ್ಲಿಯೇ ಸಂಸ್ಕಾರವನ್ನು ಪಡೆಯಬೇಕು- ಚಂದ್ರಶೇಖರ ಶೆಟ್ಟಿ

Students should get samskara sanskar in student life itself: Chandrasekhar Shetty
Photo Credit :

ಮಂಗಳೂರು, ಆ.18: ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವಕಾಲೇಜು ಹಾಗೂ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣಮಯ 2022 ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.

ಉದ್ಘಾಟನೆಯನ್ನು ಸನಾತನ ನಾಟ್ಯಾಲಯ ಮಂಗಳೂರಿನ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿಯವರು ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್ ಶೆಟ್ಟಿಯವರು ಶ್ರೀಕೃಷ್ಣನ ಮಹಿಮೆಯಕುರಿತಂತೆ ತಿಳಿಸಿದರು. ನಾವು ನಮ್ಮ ಜೀವನದಲ್ಲಿ ಅನೇಕ ಸಂಸ್ಕಾರಯುತ ಅಭ್ಯಾಸವನ್ನು ಮಾಡಬೇಕಾಗಿದೆ ನಾವು ಸಣ್ಣ ಸಣ್ಣ ವಿಷಯಗಳಾದ ನಮ್ಮ ತಂದೆ ತಾಯಿಗೆ ಗೌರವವನ್ನು ಕೊಡುವುದು ಅನ್ನವನ್ನು ತಟ್ಟೆಯಲ್ಲಿ ಉಳಿಸದೆ ಪೂರ್ಣ ಊಟ ಮಾಡುವುದು ಸೇರಿದಂತೆ ಹಲವು ವಿಷಯಗಳ ಕುರಿತು ವಿದ್ಯಾರ್ಥಿ ಜೀವನದಲ್ಲಿಯೇ ಸಂಸ್ಕಾರವನ್ನು ಪಡೆಯಬೇಕು. ಇಂತಹ ಸಂಸ್ಕಾರವು ನಮ್ಮನ್ನುಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ .ಕೆ ಮಾತನಾಡಿ ಶ್ರೀ ಕೃಷ್ಣಜನ್ಮಾಷ್ಟಮಿ ನಿಮಿತ್ತ ಮಕ್ಕಳಿಗೆ ಶ್ರೀಕೃಷ್ಣನ ವೇಷವನ್ನು ಹಾಕಿ ಸ್ಪರ್ಧೆಗೆ ಬಂದಿರುವ ಮುದ್ದುಮಕ್ಕಳು ಅಭಿನಂದನೀಯರು. ಇವರನ್ನು ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆಸಿದಾಗ ಇವರುದೇಶಕ್ಕೆಉತ್ತಮ ಪ್ರಜೆಯಾಗುತ್ತಾರೆ. ಇವರು ಸಹ ಎಲ್ಲರಿಗೂ ಸಮಾನವಾದ ಗೌರವವನ್ನು ನೀಡುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್‌ ಇವರು ವಹಿಸಿ ಮಾತನಾಡಿ ನಾವು ಸ್ಪರ್ಧೆಯಲ್ಲಿ ಭಾಗವಹಿಸುವುದು ನಮ್ಮಆತ್ಮವಿಶ್ವಾಸವನ್ನು ಹೆಚ್ಚುಗೊಳಿಸುತ್ತದೆ. ಈ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸಲು ಪ್ರೋತ್ಸಾಹಿಸುವ ಶಿಕ್ಷಕರು, ಸಂಸ್ಥೆ ಹಾಗೂ ಪೋಷಕರಿಗೆಅಭಿನಂದನೆಯನ್ನು ಸಲ್ಲಿಸಿದರು.

ವೇದಿಕೆಯಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ಪೆಟ್ರಿಷಿಯಾ ಪಿಂಟೊ ಉಪಸ್ಥಿತರಿದ್ದರು.ಕಾರ್ಯಕ್ರಮದ ಸ್ವಾಗತವನ್ನು ಶರಣಪ್ಪ ಹಾಗೂ ವಂದನಾರ್ಪಣೆಯನ್ನು ಭವ್ಯಶ್ರೀ ಇವರು ಸಲ್ಲಿಸಿದರು. ಪೂರ್ಣೇಶ್‌ ಚಿತ್ರಕಲಾ ಅಧ್ಯಾಪಕರು ಕಾರ್ಯಕ್ರಮದ ಸಂಯೋಜಕರಾಗಿದ್ದರು.

ಈ ಸಂದರ್ಭದಲ್ಲಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಈ ಕೆಳಗಿನಂತಿದ್ದಾರೆ. ಚಿತ್ರಕಲೆ ಪ್ರಥಮ ಸ್ಥಾನವನ್ನುಅಗಮ್ಯ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು, ದ್ವಿತೀಯ ಸ್ಥಾನವನ್ನುಅನ್ವಿತ್ ಹರೀಶ್‌ ಕೆನರಾ ಶಾಲೆ ಉರ್ವಾ,ತೃತೀಯ ಸ್ಥಾನವನ್ನು ಅವನಿ ಬೆಳ್ಳಾರೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿನಿ, ಕುಣಿತ ಭಜನೆಯಲ್ಲಿ ಪ್ರಥಮ ಸ್ಥಾನವನ್ನು ಚಿನ್ಮಯಿ ಮತ್ತು ತಂಡ ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲು, ದ್ವಿತೀಯ ಸ್ಥಾನವನ್ನುಅಪೇಕ್ಷ ಮತ್ತುತಂಡ ಶಕ್ತಿ ರೆಸಿಡೆನ್ಶಿಯಲ್ ಶಾಲೆ, ತೃತೀಯ ಸ್ಥಾನವನ್ನು ಸ್ಪಂದನ ಮತ್ತುತಂಡ ಕುವೆಂಪು ಶಾಲೆ, ಶಕ್ತಿನಗರ, ಮುದ್ದುಕೃಷ್ಣದಲ್ಲಿ ಪ್ರಥಮ ಸ್ಥಾನವನ್ನುಕೈರಾಗಿರೀಶ್ ಶೆಣೈ, ದ್ವಿತೀಯ ಸ್ಥಾನವನ್ನು ನೇಹಲ್ ಎಂ. ರಾವ್,ತೃತೀಯ ಸ್ಥಾನವನ್ನು ಲಕ್ಷö್ಯರಾವ್, ಬೆಣ್ಣೆ ಕೃಷ್ಣ ಸ್ಪರ್ಧೆಯಲ್ಲಿಪ್ರಥಮ ಸ್ಥಾನವನ್ನುಅವೀಶ್‌ಎಸ್. ಶೆಟ್ಟಿ, ದ್ವಿತೀಯ ಸ್ಥಾನವನ್ನುಗಾನ್ವಿ, ತೃತೀಯ ಸ್ಥಾನವನ್ನುದೀತ್ಯಾ. ಯಶೋದ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸಾನ್ವಿ ಮತ್ತುಚಿತ್ರಾಕ್ಷಿ, ದ್ವಿತೀಯ ಸ್ಥಾನವನ್ನು ನೆಹಾಲಿ ಮತ್ತು ವಿದ್ಯಾ, ತೃತೀಯಸ್ಥಾನವನ್ನು ಶೌರ್ಯ ಮತ್ತುಆಧಿತಿ ಪಡೆದಿರುತ್ತಾರೆ.

ಗೋಪಿಕಾ ಕೃಷ್ಣ ಸ್ಪರ್ದೆಯಲ್ಲಿ ಪ್ರಥಮ ಸ್ಥಾನವನ್ನು ಮೋಕ್ಷ ಮತ್ತುತಂಡ ಶಾರದಾ ವಿದ್ಯಾಲಯ, ದ್ವಿತೀಯ ಸ್ಥಾನವನ್ನು ಹರ್ಷಿತಾ ಮತ್ತುತಂಡರಾಜ್‌ಅಕಾಡೆಮಿತೃತೀಯ ಸ್ಥಾನವನ್ನುಸೂರಜ್ ಮತ್ತುತಂಡ ಟಿಸಿಐಎಫ್ ಕೇಂಬ್ರಿಡ್ಜ್ ಶಾಲೆ, ದಾಸರಕೀರ್ತನೆಯಲ್ಲಿ ಪ್ರಥಮ ಸ್ಥಾನವನ್ನು ದಿಯಾಕೋಟ್ಯಾನ್ ಮತ್ತುತಂಡಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಶಾಲೆ, ದ್ವಿತೀಯ ಸ್ಥಾನವನ್ನು ರಾಶಿ ಮತ್ತುತಂಡ ಶಾರದಾ ವಿದ್ಯಾಲಯ, ತೃತೀಯ ಸ್ಥಾನವನ್ನು ಆಶ್ರಿತ್ ಶೆಟ್ಟಿ ಮತ್ತು ತಂಡ ರಾಜ್‌ ಅಕಾಡೆಮಿ, ಗೀತಾಕಂಠಪಾಠ (1ನೇ ತರಗತಿಯಿಂದ 5ನೇ ತರಗತಿ) ಪ್ರಥಮ ಸ್ಥಾನವನ್ನು ದಿವ್ಯಾಭಟ್ ಶಾರದಾ ವಿದ್ಯಾಲಯ, ದ್ವಿತೀಯ ಸ್ಥಾನವನ್ನು ಪ್ರೇರಣಾ ಪ್ರಶಾಂತ್ ಶರ್ಮ ಶಾರದಾ ವಿದ್ಯಾಲಯ,ತೃತೀಯ ಸ್ಥಾನವನ್ನುಅಮೋದ್ ಶಾಸ್ತ್ರಿ ಕೆನರಾ ಶಾಲೆ ಉರ್ವ ಇವರು ಪಡೆದಿರುತ್ತಾರೆ.

ಗೀತಾಕಂಠಪಾಠ (6ನೇ ತರಗತಿಯಿಂದ 7ನೇ ತರಗತಿ ವರೆಗೆ) ಪ್ರಥಮ ಸ್ಥಾನವನ್ನು ಪ್ರಕೃತಿ ಶರ್ಮ, ಶಾರದಾ ವಿದ್ಯಾನಿಲಯ, ದ್ವಿತೀಯ ಸ್ಥಾನವನ್ನು ಮುಕುಂದ್‌ಎಸ್ ವಿವೇಕಾನಂದ ಶಾಲೆ ಪುತ್ತೂರು, ತೃತೀಯ ಸ್ಥಾನವನ್ನು ಚೇತನ್‌ರಾವ್ ಶಾರದಾ ವಿದ್ಯಾನಿಲಯ ಪಡೆದಿರುತ್ತಾರೆ.

ಗೀತಾಕಂಠಪಾಠ (8ನೇ ತರಗತಿಯಿಂದ 10ನೇತರಗತಿ ವರೆಗೆ) ಪ್ರಥಮ ಸ್ಥಾನವನ್ನು ಸಮುದ್ಯತ, ಅಮೃತ ವಿದ್ಯಾಲಯ, ದ್ವಿತೀಯ ಸ್ಥಾನವನ್ನುತನ್ವಿ ಬಿ. ಶಾರದಾ ವಿದ್ಯಾಲಯ, ತೃತೀಯ ಸ್ಥಾನವನ್ನು ಶ್ರೀಶಾ ನಿಡ್ವಾಣಯ ವಿವೇಕಾನಂದ ಶಾಲೆ ಪುತ್ತೂರು ಇವರು ಪಡೆದಿರುತ್ತಾರೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನಗದು ಮತ್ತು ಫಲಕವನ್ನು ನೀಡಿಗೌರವಿಸಲಾಯಿತು. ಒಟ್ಟು 15 ಶಾಲೆಗಳ 150 ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸ್ಪರ್ದೆಯಲ್ಲಿ ಭಾಗವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು