ಮಂಗಳೂರು: ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ರಿಜ್ವಿತ್ಜಗದೀಶ್ ಹಾಗೂ ಶಕ್ತಿ ವಸತಿ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿಯಾದ ನಮಿತ್ ಪಿ.ಸಿ ಎಂಬ ವಿದ್ಯಾರ್ಥಿಗಳು ಇದೇ ತಿಂಗಳ ಆಗಸ್ಟ್ ೧೭ ರಿಂದ ೨೩ರ ವರೆಗೆ ಮಲೇಷಿಯದಲ್ಲಿ ನಡೆಯುವ ಅಂತರಾಷ್ಟ್ರೀಯ ಟೈಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಕೃಷ್ಣ ನಾಯಕ್ ಅವರು ಟೈಕ್ವಾಂಡೋ ತರಬೇತುದಾರರಾಗಿದ್ದಾರೆ.
ಈ ಸಂದರ್ಭದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾಯ್ಕ್, ಆಡಳಿತಾಧಿಕಾರಿ ಡಾ. ಕೆ.ಸಿ ನಾಯ್ಕ್, ಪ್ರಧಾನ ಸಲಹೆಗಾರರಮೇಶ ಕೆ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲೆ ದಿವ್ಯಜ್ಯೋತಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಅಭಿನಂದಿಸಿರುತ್ತಾರೆ.