News Karnataka Kannada
Saturday, April 27 2024
ಕ್ಯಾಂಪಸ್

ಪುತ್ತೂರು| ದೇಶ ಭಕ್ತಿ, ಕರ್ತವ್ಯ ಪಾಲನೆಗೆ ಡಾ.ರೈ ಉದಾಹರಣೆ : ಸುಬ್ರಹ್ಮಣ್ಯ ನಟ್ಟೋಜ

Dr. Rai is an example of patriotism, devotion to duty: Subramanya Nattoja
Photo Credit :

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಡೆಯಿತು. ಡಾ. ರೈ ಅವರ ಅಪರಿಮಿತ ದೇಶ ಭಕ್ತಿ, ಸಾಧನೆ ಹಾಗೂ ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ರೀತಿಯ ನೆಲೆಯಲ್ಲಿ ಈ ಸನ್ಮಾನವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಡಾ.ದೀಪಕ್ ರೈ ಅವರು ವಿದೇಶದಲ್ಲಿ ಸರ್ಕಾರಿ ವೈದ್ಯರಾಗಿ ಕಾರ್ಯನಿರ್ವಹಿಸಿದವರು. ಮತ್ತಷ್ಟು ಉದ್ಯೋಗಾವಕಾಶಗಳು ಅವರಿಗೆ ಅಲ್ಲಿ ಕೈಬೀಸಿ ಕರೆದಿದ್ದವು. ಆದರೆ ತಾಯ್ನಾಡಿಗೆ ಸ್ಪಂದಿಸುವುದೇ ತನ್ನ ಬದುಕಿನ ಪರಮೋಚ್ಛ ಗುರಿ ಎಂದು ನಿರ್ಣಯಿಸಿ ಭಾರತಕ್ಕೆ ಮರಳಿದರು. ಇಲ್ಲಿನ ಜನರ ಸೇವೆಯನ್ನು ಮಾಡುತ್ತಾ ಯುವಸಮುದಾಯಕ್ಕೊಂದು ಮಾದರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನುಡಿದರು.

ಬದುಕಿನಲ್ಲಿ ಹಣವೇ ಮುಖ್ಯ ಎಂಬ ಭಾವನೆ ಜನಮಾನಸದಲ್ಲಿ ಅಂತರ್ಮುಖಿಯಾಗಿ ವಿಸ್ತೃತಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಅದಕ್ಕಿಂತಲೂ ಮಿಗಿಲಾದದ್ದು ದೇಶಸೇವೆ ಎಂಬುದನ್ನು ಆಚರಿಸಿ ತೋರಿಸಿದವರು ಡಾ.ರೈ. ಕೊರೋನಾ ಕಾಲದಲ್ಲಿ ಇಡಿಯ ನಾಡೇ ಮನೆಯೊಳಗೆ ಅವಿತು ಕುಳಿತಿದ್ದಾಗ ಸಮಾಜಕ್ಕಿಳಿದು ಕೊರೋನಾ ವಿರುದ್ಧ ಹೋರಾಟಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡವರು. ಇಂತಹವರು ನಮ್ಮ ಪುತ್ತೂರಿನಲ್ಲದ್ದಾರೆ ಎಂಬುದು ಇಡಿಯ ಪುತ್ತೂರಿಗೆ ಹೆಮ್ಮೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ದೀಪಕ್ ರೈ ದೇಶ ಎಲ್ಲದಕ್ಕಿಂತ ಶ್ರೇಷ್ಟವಾದದ್ದು. ದೇಶಪ್ರೇಮವನ್ನು ಬೆಳೆಸಿಕೊಂಡು ದೇಶಕ್ಕಾಗಿ ಮಿಡಿಯುವ ಮನಸ್ಸನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪ್ರಾಂಶುಪಾಲರುಗಳಾದ ಸತ್ಯಜಿತ್ ಉಪಾಧ್ಯಾಯ ಎಂ ಹಾಗೂ ಸುಚಿತ್ರಾ ಪ್ರಭು, ಬೋಧಕ, ಬೋಧಕೇತರ ವೃಂದ ಹಾಗೂ ವಿಒದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಸುಕನ್ಯಾ ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು