News Karnataka Kannada
Monday, April 29 2024
ಪರಿಸರ

ಮಂಗಳೂರು: ಕಾಂಗ್ರೆಸ್ ಸೇವಾದಳ ವತಿಯಿಂದ ವನಮಹೋತ್ಸವ ಆಚರಣೆ

Mangaluru: Congress Seva Dal celebrates Vanamahotsava
Photo Credit : R Bhat
ಮಂಗಳೂರು: ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸೇವಾದಳ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಸೇವಾದಳ  ಸಮಿತಿಗಳ ವತಿಯಿಂದ ಇಂದು ತಾ 10.7.2022 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿರುವ ನೆಹರೂ ಪ್ರತಿಮೆಯ ಪಾರ್ಕ್ ನಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೊ ರವರು ಮಾತನಾಡುತ್ತ, ಸ್ವಾತಂತ್ರ ಹೋರಾಟಗಾರರಾದ ಡಾ. ನಾ. ಸು. ಹರ್ಡಿಕರ್ ರವರು ಯುವಕರಿಗೆ ಶಿಸ್ತಿಗೆ ಪ್ರಾಮುಖ್ಯತೆ ನೀಡಿ ಸೇವಾದಳವನ್ನು ಪ್ರಾರಂಭ ಮಾಡಿದರು.
ಶಿಸ್ತಿನ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಒತ್ತುಕೊಡಬೇಕು. ಶಿಸ್ತಿನ್ನು ನಮ್ಮ ಜೀವನದಲ್ಲಿ ಪ್ರತಿ ಹಂತದಲ್ಲಿಯೂ ಅಳವಡಿಸಬೇಕು. ಇಂದಿನ ವನಮಹೋತ್ಸವ ಕಾರ್ಯಕ್ರಮದ ಮೂಲಕ ಹಲವಾರು ಜನಸ್ಪಂದನ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಿದ್ದೇವೆ.ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ರವರು ತಮ್ಮ ಅನುದಾನದ ನಿಧಿಯಿಂದ ಒಂದು ಲಕ್ಷ ರೂಪಾಯಿ ಯನ್ನು ಈ ನೆಹರೂ ಪಾರ್ಕ್ ಅಭಿವೃದ್ಧಿಗೆ ಈಗಾಗಲೇ ಘೋಷಣೆ ಮಾಡಿದ್ದಾರೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಎಂಎಲ್ ಸಿ ಐವನ್ ಡಿಸೋಜಾ ಮಾತನಾಡಿ, ಸೇವಾದಳಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು. ಕಾಂಗ್ರೆಸ್ ಪಕ್ಷ ಸೇವಾದಳದ  ಕ್ಯಾಂಪ್ ನಡೆಸಲು ಉತ್ತೇಜನ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸೇವಾದಳ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಸಲಿಂ, ಪ್ರಕಾಶ್ ಸಾಲ್ಯಾನ್, ಸೇವಾದಳದ ಕ್ಷೇತ್ರ ಅಧ್ಯಕ್ಷ ಉದಯ ಕುಂದರ್, ಬ್ಲಾಕ್ ಅಧ್ಯಕ್ಷ ಹುಸೈನ್ ಪಾದೆಕಲ್, ಸದಾನಂದ, ಮಾಜಿ ಮೇಯರ್ ಮಹಾಬಲ ಮಾರ್ಲ, ಸೇವಾದಳ ರಾಜ್ಯ ಸಂಘಟಕ ಪ್ರಭಾಕರ್ ಶ್ರೀಯಾನ್, ಟಿ.ಕೆ ಸುಧೀರ್, ಶುಭೋದಯ ಆಳ್ವ,ನೀರಜ್ ಪಾಲ್, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುನೀಲ್ ಪೂಜಾರಿ, ರಾಕೇಶ್ ದೇವಾಡಿಗ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾಂತಲ ಗಟ್ಟಿ, ವಿಜಯಲಕ್ಷ್ಮೀ, ಶಶಿಕಲಾ, ಚೇತನ್, ಗಿರೀಶ್ ಶೆಟ್ಟಿ, ರಮಾನಂದ್, ದಿನೇಶ್ ರಾವ್, ಮಂಜುಳಾ ನಾಯಕ್, ಸಮರ್ಥ ಭಟ್, ಗಣೇಶ ಉರ್ವಾ, ಪದ್ಮನಾಭ ಅಮೀನ್, ಯೋಗೇಶ್ ನಾಯಕ್,ಭಾಸ್ಕರ್ ರಾವ್,ಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
186

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು