News Karnataka Kannada
Tuesday, April 30 2024
ಮಂಗಳೂರು

ದಕ್ಷಿಣವಲಯ ಅಥ್ಲೆಟಿಕ್ಸ್ ನಲ್ಲಿ ನಿಟ್ಟೆ ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

Nitte's best performance in South Zone Athletics
Photo Credit : News Kannada

ನಿಟ್ಟೆ: ಅ. ೧೫ ರಂದು ೧೭ ರವರೆಗೆ ತೆಲಂಗಾಣದ ವರಂಗಲ್ ನಲ್ಲಿ ನಡೆದ ದಕ್ಷಿಣ ವಲಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ೧೮ ವರ್ಷದ ಒಳಗಿನ ವಯೋಮಿತಿಯ 3,000 ಮೀಟರ್ ಓಟದಲ್ಲಿ ಡಾ.ಎನ್.ಎಸ್.ಎ.ಎಂ.ಪಿ.ಯು ಕಾಲೇಜಿನ ದ್ವಿತೀಯ ವರ್ಷದ ಕಾಮರ್ಸ್ ವಿದ್ಯಾರ್ಥಿನಿ ನಂದಿನಿ ಜಿ ಚಿನ್ನದ ಪದಕವನ್ನು ಪಡೆದರೆ, ೨೦ ವರ್ಷದೊಳಗಿನ ವಯೋಮಿತಿಯ 800 ಮೀಟರ್ ಓಟದಲ್ಲಿ ಡಾ.ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಕಂಚಿನ ಪದಕ ಹಾಗೂ ೧೮ ವರ್ಷದ ಒಳಗಿನ ವಯೋಮಿತಿಯ ಜಾವೆಲಿನ್ ಥ್ರೋನಲ್ಲಿ ಡಾ.ಎನ್.ಎಸ್.ಎ.ಎಂ.ಪಿ.ಯು ಕಾಲೇಜಿನ ದ್ವಿತೀಯ ವರ್ಷದ ಕಾಮರ್ಸ್ ವಿದ್ಯಾರ್ಥಿ ಕುಲದೀಪ್ ಕುಮಾರ್ ಕಂಚಿನ ಪದಕ ತಮ್ಮದಾಗಿಸಿಕೊಂಡಿರುವರು.

ಈ ಮೂವರು ಪದಕ ವಿಜೇತರು ಈ ಸಾಧನೆಯಿಂದ ನವೆಂಬರ್ 7 ರಿಂದ 9ರವರೆಗೆ ಕೊಯಮತ್ತೂರಿನಲ್ಲಿ ನಡೆಯಲಿರುವ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು