News Karnataka Kannada
Saturday, May 11 2024
ಮಂಗಳೂರು

ಮಂಗಳೂರು: ಮಿಲಾಗ್ರಿಸ್ ಕಾಲೇಜಿನಲ್ಲಿ ಆಡ್- ಆನ್ ಕೋರ್ಸ್‌ಗಳ ಸಮಾರೋಪ ಕಾರ್ಯಕ್ರಮ

Mangalore: Concluding program of add-on courses at Milagris College
Photo Credit : News Kannada

ಮಂಗಳೂರು:  ಜೂ.17ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನಲ್ಲಿ , ಆಡ್-ಆನ್ ಕೋರ್ಸ್‌ಗಳು ಸಮಾರೋಪ ಕಾರ್ಯಕ್ರಮವನ್ನು ಮಿಲಾಗ್ರಿಸ್‌ ಕಾಲೇಜಿ ನ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಮುಖ್ಯ ಅತಿಥಿಯಾಗಿ ರೆಕ್ಟರ್, ಗ್ಲ್ಯಾಡ್ಸಮ್ ಹೋಮ್ ಮತ್ತು ಸಿ. ಬಿ. ಇ.ಯ ನಿಯೋಜಿತ ಕಾರ್ಯದರ್ಶಿ ವಂ. ಗುರು. ಪ್ರವೀಣ್ ಲಿಯೋ ಲಸ್ರಾಡೊ ಆಗಮಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳು ದೇಶದ ಯುವ ಶಕ್ತಿಗಳಾಗಿದ್ದು ಏಕಾಗ್ರಚಿತ್ತದಿಂದ ಧನಾತ್ಮಕ ವಿಚಾರಗಳ ಬಗ್ಗೆ ಮನಸ್ಸು ಕೇಂದ್ರಿಕರಿಸಿದ್ದಲ್ಲಿ ತಮ್ಮ ಅವಿರತ ಪರಿಶ್ರಮದಿಂದ ಬಹುದೊಡ್ಡ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಎಂದು ಕರೆ ನೀಡಿದರು.

ಆಡ್-ಆನ್ ಕೋರ್ಸ್‌ಗಳ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಮರಿಯಾ ಡಿ’ಕೋಸ್ಟಾ ಸ್ಪೋಕನ್ ಇಂಗ್ಲೀಷ್, ರೇಮಂಡ್ ಡಿ’ಕುನ್ಹಾ, ಪತ್ರಿಕೋದ್ಯಮ, ಗೋಪಾಲಕೃಷ್ಣ ದೇಲಂಪಾಡಿ, ಯೋಗ, ಸಿ.ಎ.ಡೈಲನ್ ರೆಬೆಲ್ಲೊ, ಜಿಎಸ್‌ಟಿ, ಸಪ್ನಾ ಶೆಣೈ, ವೈಯಕ್ತಿಕ ಹಣಕಾಸು ಯೋಜನೆ, ಸೋಫಿಯಾ ಮೊಲಿ ವಾಸ್, ಪ್ರಥಮ ಚಿಕಿತ್ಸೆ, ರಾಜೀವ್ ಕೆ ಶೆಣೈ, ಛಾಯಾಗ್ರಹಣ, ಮಿಚೆಲ್ ದೀಪ್ತಿ ಫೆರ್ನಾಂಡಿಸ್, ಬ್ಯೂಟಿಷಿಯನ್, ಪ್ರೇಕ್ಷಾ ತೇಜ್, ಇವೆಂಟ್ ಮ್ಯಾನೇಜ್ಮೆಂಟ್,  ಜಿತೇಶ್, ನೃತ್ಯ, ಹರಿನಾ ರಾವ್,ಕ್ರಾಫ್ಟ್ & ಕಸೂತಿ, ಕು.ಮ್ಯಾಗ್ರಿಯನ್ ಪಿಂಟೊ, ಬೇಸಿಕ್ ಕಂಪ್ಯೂಟರ್ ಮತ್ತು ಟ್ಯಾಲಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿ ಆಡ್- ಆನ್ ಕೋರ್ಸ್‌ನ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಮತ್ತು ಕಲಿಕೆಯ ಅವಧಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ಹಂಚಿಕೊಂಡರು. ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂ. ಗುರು ಮೈಕಲ್ ಸಾಂತುಮಾಯರ್ ಸ್ವಾಗತಿಸಿದರು. ಆಡ್ ಆನ್ ಕೋರ್ಸ್‌ಗಳ ಸಂಯೋಜಕರಾದ ಜಾಬಿನ್ ಜೋಸೆಫ್ ವಂದಿಸಿದರು. ವಿದ್ಯಾರ್ಥಿನಿ ಜೇವಿಟಾ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು