News Karnataka Kannada
Sunday, May 05 2024
ಕ್ಯಾಂಪಸ್

ಮೈಸೂರು: ಮಾ. 29 ರಂದು ಎಸ್ ಡಿಎಂಐಎಂಡಿ 28ನೇ ವಾರ್ಷಿಕ ಘಟಿಕೋತ್ಸವ

Ma. SDM's 28th Annual Convocation To Be Held On 29th
Photo Credit : News Kannada

ಮೈಸೂರು: ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ (ಎಸ್ ಡಿ ಎಂ ಐ ಎಂ ಡಿ) ಸಂಸ್ಥೆಯ 28ನೆಯ ವಾರ್ಷಿಕ ಘಟಿಕೋತ್ಸವವು ಮಾರ್ಚ್ 29ರಂದು  ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.

, ರಾಣೆ ಹೋಲ್ಡಿಂಗ್ಸ್  ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಎಲ್. ಗಣೇಶ್, ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದು, ಘಟಿಕೋತ್ಸವ ಭಾಷಣವನ್ನು ಮಾಡಲಿದ್ದಾರೆ.

ಎಸ್ ಡಿ ಎಮ್ ಐ ಎಮ್ ಡಿಗವರ್ನಿಂಗ್ ಬೋರ್ಡ್ ಅಧ್ಯಕ್ಷ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ  ಘಟಿಕೋತ್ಸವದ ಅಧ್ಯಕ್ಷತೆ  ವಹಿಸಲಿದ್ದಾರೆ. ಸಂಸ್ಥೆಯ ಗವರ್ನಿಂಗ್ ಬೋರ್ಡ್ ನ ಸದಸ್ಯರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಈ ಘಟಿಕೋತ್ಸವದಲ್ಲಿ ಸಂಸ್ಥೆಯು 2021-2023 ನೆಯ ಬ್ಯಾಚ್ ನ ಅರ್ಹ ವಿದ್ಯಾರ್ಥಿಗಳಿಗೆ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಮ್ಯಾನೇಜ್ಮೆಂಟ್ (PGDM) ಅನ್ನು ಪ್ರದಾನ ಮಾಡಲಿದೆ. ವಿವಿಧ ವಿಶೇಷ ವಿಷಯಗಳಲ್ಲಿ ಉತ್ತಮವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾದ   ಎಲ್. ಗಣೇಶ್ ಅವರಿ೦ದ ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ. ಇದರ ಜೊತೆಗೆ ಒಟ್ಟಾರೆ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ಅಧ್ಯಕ್ಷರ ಚಿನ್ನದ ಪದಕ ಹಾಗೂ ಒಟ್ಟಾರೆ ಅತ್ಯುತ್ತಮ ಸಾಧನೆಗಾಗಿ ಅ೦ಕುರ್ ಗುಪ್ತಾ ಸ್ಮಾರಕ ಚಿನ್ನದ ಪದಕ – ಈ  ಎರಡು ಗುರುತರವಾದ ಪದಕಗಳಿರುತ್ತವೆ.

2022-23 ನೆಯ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆ ಮಾಡಿದ ಸಾಧನೆಗಳು ಮತ್ತು ಸಂಸ್ಥೆಯಲ್ಲಿ ನಡೆದ ಚಟುವಟಿಕೆಗಳ ವಾರ್ಷಿಕ ವರದಿಯನ್ನು ಸಂಸ್ಥೆಯ ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್ ಅವರು ಪ್ರಸ್ತುತಪಡಿಸಲಿದ್ದಾರೆ.

ಮುಖ್ಯ ಅತಿಥಿಗಳ ಕಿರುಪರಿಚಯ:

 ಎಲ್. ಗಣೇಶ್ ಅವರು ರಾಣೆ ಹೋಲ್ಡಿಂಗ್ಸ್ ಲಿಮಿಟೆಡ್ ನ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರು ಮತ್ತು ರಾಣೆ ಗ್ರೂಪ್ ಕಂಪನಿಗಳ ಸಮೂಹದ ಅಧ್ಯಕ್ಷರು ಆಗಿದ್ದಾರೆ. ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಪೆನ್ಸಿಲ್ವೇನಿಯಾ ಸ್ಟೇಟ್ ವಿಶ್ವವಿದ್ಯಾನಿಲಯದಿಂದ ಎಮ್ ಬಿ ಎ ಸ್ನಾತಕೋತ್ತರ ಪದವಿ  ಪಡೆದುಕೊಂಡಿದ್ದಾರೆ.

45 ವರ್ಷಗಳ ದೀರ್ಘವಾದ ಕೈಗಾರಿಕಾ / ಔದ್ಯಮಿಕ ಅನುಭವವನ್ನು ಹೊಂದಿರುವ ಇವರು ಜಾಗತಿಕ ಮಟ್ಟದಲ್ಲಿ ಬಲವಾದ ಹೆಜ್ಜೆ ಗುರುತನ್ನು ಮೂಡಿಸುವಲ್ಲಿ ಹಾಗೂ ಶ್ರೇಷ್ಠವಾದ ಡೆಮಿಂಗ್ ಪ್ರಶಸ್ತಿಯನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಅನೇಕ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಶ್ರೀ. ಎಲ್. ಗಣೇಶ್ ಅವರು ಆಟೋಮೋಟಿವ್ ಉದ್ಯಮದ ಪ್ರಮುಖ ವಕ್ತಾರ ಎನಿಸಿಕೊಂಡಿದ್ದಾರೆ.

ಭಾರತದ ಆಟೊಮೋಟಿವ್ ಘಟಕಗಳ ತಯಾರಕರ ಅಸೋಸಿಯೇಶನ್ನಿನ ಅಧ್ಯಕ್ಷರಾಗಿಯೂ ಮತ್ತು ಮದ್ರಾಸ್ ಮ್ಯಾನೇಜ್ಮೆಂಟ್ ಅಸೋಸಿಯೇಶನ್ನಿನ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. ಅವರು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (CII), ದಕ್ಷಿಣ ವಲಯದ ಅಧ್ಯಕ್ಷರೂ ಆಗಿದ್ದರು. ಪ್ರಸ್ತುತ ಅವರು ದಕ್ಷಿಣ ಭಾರತದಲ್ಲಿ ನ್ಯೂಜಿಲೆಂಡ್ ದೇಶದ ಗೌರವ ರಾಯಭಾರಿಯಾಗಿದ್ದಾರೆ.

ರಾಣೆ ಗ್ರೂಪ್ ನ ನಿರ್ದೇಶಕರಾಗಿರುವ ಜೊತೆಗೆ, ಗಣೇಶ್ ಅವರು ಸುಂದರ್ಂ ಫೈನಾನ್ಸ್ ನ ಸ್ವತಂತ್ರ ನಿರ್ದೆಶಕರೂ ಆಗಿದ್ದಾರೆ. ಶ್ರೀ ಗಣೇಶ್ ಅವರು ಚೆನ್ನೈ ವಿಲ್ಲಿಂಗ್ಡನ್ ಕಾರ್ಪೊರೇಟ್ ಫೌಂಡೇಶನ್ ಹಾಗೂ ಚೆನ್ನೈ ಹೆರಿಟೇಜ್ಅ ಧ್ಯಕ್ಷರೂ ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು