ಮಂಗಳೂರು: ಮಾರ್ಚ್ 23 ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಎಕ್ಸೆಲ್ಸೋ – 2024 ಒಂದು ದಿನದ ಅಂತರ್ ಕಾಲೇಜು ಸ್ಪರ್ಧೆಯನ್ನು ಬೆಳಗ್ಗೆ 9.00 ಗಂಟೆಯಿಂದ 12.30 ರ ವರೆಗೆ ಆಯೋಜಿಸಲಾಗಿದೆ.
ಸ್ವತಂತ್ರ ಹಣಕಾಸು ಸಲಹೆಗಾರ ಶ್ರೀಯುತ ಪೀಟರ್ ಆಂಥೋನಿ ಪಿಂಟೋ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕಾಲೇಜಿನ ಸಂಚಾಲಕ ರೆ| ಫಾ| ಬೊನವೆಂಚರ್ ನಝರತ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಕ್ಸೆಲ್ಸೊ 2024 ಅತ್ಯುತ್ತಮ ನಿರ್ವಹಣಾ ತಂಡ, ಮಾನವ ಸಂಪನ್ಮೂಲ ಈವೆಂಟ್, ಮಾರ್ಕೆಟಿಂಗ್ ಈವೆಂಟ್ ಮತ್ತು ಐಸ್
ಬ್ರೇಕರ್ ಈವೆಂಟ್ ಅನ್ನು ಒಳಗೊಂಡಿದೆ ಎಂದು ಪ್ರಾಂಶುಪಾಲ ರೆ| ಫಾ| ಮೈಕೆಲ್, ಸಾಂತುಮಯೋರ್ ತಿಳಿಸಿದ್ದಾರೆ.