News Karnataka Kannada
Friday, May 03 2024
ಕ್ಯಾಂಪಸ್

ಮಂಗಳೂರು: ಯೆನೆಪೊಯಾ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ

Librarians' Day Yenepoya College
Photo Credit : By Author

ಮಂಗಳೂರು: ಪದ್ಮಶ್ರಿ ಡಾ.ಎಸ್. ಆರ್ ರಂಗನಾಥನ್ (1892-1972) ಅವರ ಜನ್ಮದಿನಾಚರಣೆಯ ನೆನಪಿಗಾಗಿ 2022 ರ ಆಗಸ್ಟ್ 22 ರಂದು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಮತ್ತು ಕೇಂದ್ರ ಗ್ರಂಥಾಲಯ, ಯೆನೆಪೊಯಾ (ಡೀಮ್ಡ್ ಟು ಬಿ ಯೂನಿವರ್ಸಿಟಿ) ನಲ್ಲಿ ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು.

ಡಾ.ಎಸ್.ಆರ್ ರಂಗನಾಥನ್ ಅವರನ್ನು ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಅಭಿವೃದ್ಧಿಗೆ ಡಾ.ಎಸ್.ಆರ್ ರಂಗನಾಥನ್ ಮುಂದಾಳತ್ವ ವಹಿಸಿದರು ಮತ್ತು ವೃತ್ತಿಯ ಬೆಳವಣಿಗೆಗೆ ತಮ್ಮ ಇಡೀ ಜೀವನವನ್ನು ಅರ್ಪಿಸಿದರು.

ಕಾರ್ಯಕ್ರಮವು ಶ್ರೀ.ಹಮದ್ ಬಿಲಾಲ್ (ಪ್ರಥಮ ವರ್ಷದ ಎಮ್.ಎಲ್.ಐ.ಸಿ ವಿದ್ಯಾರ್ಥಿ) ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿ, ಡಾ ಎಸ್ ಆರ್ ರಂಗನಾಥನ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಯೆನೆಪೊಯ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರು ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ. ಮಮತಾ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ವಿ.ಜಿ. ತಳವಾರ್ ಅವರು ಮಾತನಾಡಿ, ಡಾ.ಎಸ್.ಆರ್.ರಂಗನಾಥನ್ ಅವರು ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನೊಂದಿಗೆ ಅವರ ಒಡನಾಟವನ್ನು ಕುರಿತು ಮತ್ತು ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವಂತೆ ತಿಳಿಸಿದರು.

ಈ ಶುಭ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಒದಗಿಸಿದ್ದಕ್ಕಾಗಿ ಅವರು ಯೆನೆಪೊಯ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಅವರಿಗೆ ಧನ್ಯವಾದ ಅರ್ಪಿಸಿದರು.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಖೈಸರ್ ಮುನೀಬುಲ್ಲಾ ಖಾನ್ ಮಾತನಾಡಿ, ಡಾ.ಎಸ್. ಆರ್ ರಂಗನಾಥನ್ ಅವರ ಶ್ರೀಮಂತ ಪರಂಪರೆ ಮತ್ತು ಕೊಡುಗೆ ಕುರಿತು ಮಾತನಾಡಿದರು. ಡಾ.ಕೆ.ಎಸ್. ಅಲಿ ಉಪ ಗ್ರಂಥಪಾಲಕರು ಮತ್ತು ಸಹಾಯಕ ಪ್ರಾಧ್ಯಾಪಕರು, ಕೇಂದ್ರ ಗ್ರಂಥಾಲಯ, ಯೆನೆಪೊಯ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಅವರು ಯೆನೆಪೊಯ ಕೇಂದ್ರ ಗ್ರಂಥಾಲಯ ಮತ್ತು ಘಟಕ ಗ್ರಂಥಾಲಯಗಳಲ್ಲಿನ ಸಂಪನ್ಮೂಲಗಳು ಮತ್ತು ಸೇವೆಗಳ ಬಗ್ಗೆ ವಿವರಿಸಿದರು.

ಡಾ.ಬಿ.ಎಚ್. ಶ್ರೀಪತಿ ರಾವ್ ಪ್ರೊ-ವೈಸ್ ಚಾನ್ಸಲರ್ ಯೆನೆಪೊಯ (ಡೀಮ್ಡ್ ಟು ಯುನಿವರ್ಸಿಟಿ) ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ತಮ್ಮ ಬಾಲ್ಯದಲ್ಲಿ ಪುಸ್ತಕ ಮತ್ತು ಓದುವ ಪ್ರೀತಿಯನ್ನು ಬೆಳೆಸುವಲ್ಲಿ ಗ್ರಂಥಪಾಲಕರ ಪಾತ್ರದ ಬಗ್ಗೆ ವಿವರಿಸಿದರು. ತಂತ್ರಜ್ಞಾನದ ಪ್ರಗತಿಯಿಂದ ಪ್ರಸ್ತುತ ಪೀಳಿಗೆಯು ಗ್ರಂಥಾಲಯಗಳನ್ನು ಪೂರ್ಣವಾಗಿ ಬಳಸುತ್ತಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಓದುವ ಮತ್ತು ಪೂರ್ಣವಾಗಿ ಗ್ರಂಥಾಲಯವನ್ನು ಬಳಸುವ ಹವ್ಯಾಸವನ್ನು ಬೆಳೆಸಿಕೊಳ್ಳ ವಂತೆ ತಿಳಿಸಿದರು.

ಡಾ.ಬಿ.ಎಚ್. ಶ್ರೀಪತಿ ರಾವ್, ಗೌರವಾನ್ವಿತ ಪ್ರೊ-ವೈಸ್ ಚಾನ್ಸಲರ್ ಯೆನೆಪೊಯ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಅವರು ಮುಖ್ಯ ಅತಿಥಿಗಳಾದ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ.ವಿ.ಜಿ.ತಳವಾರ್ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಿದರು.

ಕಾರ್ಯಕ್ರಮಕ್ಕೆ ಯೆನೆಪೊಯ ವೈದ್ಯಕೀಯ ಕಾಲೇಜಿನ ಡೀನ್ ಮತ್ತು ಪ್ರಾಂಶುಪಾಲರಾದ ಡಾ.ಮೂಸಬ್ಬ ಅತಿಥಿಗಳಾಗಿ ಆಗಮಿಸಿದ್ದರು. ಸಹಾಯಕ ಗ್ರಂಥಪಾಲಕಿ ಶ್ರೀಮತಿ ಸೀಮಲತಾ ಧನ್ಯವಾದ ಪ್ರಸ್ತಾಪಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದ ವಿಶ್ವವಿದ್ಯಾನಿಲಯದ ಗ್ರಂಥಪಾಲಕ ಡಾ.ಪುರುಷೋತ್ತಮ ಗೌಡ, ಇತರ ಆರೋಗ್ಯ ವಿಜ್ಞಾನ ಸಂಸ್ಥೆಗಳ ಗ್ರಂಥಪಾಲಕರು ,ವೃತ್ತಿಪರ ಸಹೋದ್ಯೋಗಿಗಳು ಮತ್ತು ಯೆನೆಪೊಯ ಗ್ರಂಥಾಲಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು