“ನೂತನ ಶೈಲಿಯ ಅಳವಡಿಕೆ ಮಧ್ಯೆ ಪ್ರಾಚೀನ ಪರಂಪರೆ ನಷ್ಟ”

ಉಜಿರೆ: “ಇಂದು ನಮ್ಮ ಕರಾವಳಿ ಭಾಗದಲ್ಲಿ ದೇವಾಲಯಗಳ ಜೀರ್ಣೋದ್ಧಾರ ಭರಾಟೆಯಲ್ಲಿ ನೂತನ ಶೈಲಿಯ ಅಳವಡಿಕೆ ಮಧ್ಯೆ ಪ್ರಾಚೀನ ಮೂಲ ಶೈಲಿಯ ಪರಂಪರೆಯನ್ನು ಕಳಚಿಕೊಳ್ಳುತ್ತಿದ್ದೇವೆ” ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಇತಿಹಾಸ ವಿಭಾಗದ ವತಿಯಿಂದ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದ ಅಂಗವಾಗಿ ಆಯೋಜಿಸಲಾದ ‘ಸಪ್ತ ಚಾರಿತ್ರ’ ಕಾರ್ಯಕ್ರಮವನ್ನು ನ. 24ರಂದು ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ಅದು ನಿಂತ ನೀರಾಗಲು ಸಾಧ್ಯವಿಲ್ಲ. ಆದರೆ, ಪ್ರಾಚೀನ ಶಾಸನಗಳನ್ನು, ದಾಖಲೆಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ಕರಾವಳಿ ಪ್ರದೇಶಕ್ಕೆ ತನ್ನದೇ ಆದ ಆಹಾರ ಪರಂಪರೆ, ನ್ಯಾಯ ಪರಂಪರೆ, ಧಾರ್ಮಿಕ ಪರಂಪರೆ ಎಂಬ ವಿಶಿಷ್ಟವಾದ ಇತಿಹಾಸವಿದೆ. ಮೂಲ ಪರಂಪರೆಯನ್ನು ಉಳಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

“ಕರಾವಳಿಯ ಯುವಜನತೆ ನಮ್ಮ ಪ್ರಾಚೀನ ಆಹಾರ ಪದ್ಧತಿಯನ್ನು ತೊರೆದು ಆಧುನಿಕ ಶೈಲಿಯತ್ತ ವಾಲುತ್ತಿರುವುದು ಶೋಚನೀಯ ಸಂಗತಿ” ಎಂದ ಅವರು, ಇತಿಹಾಸವನ್ನು ಉಳಿಸುವಲ್ಲಿ ‘ಸಪ್ತ ಚಾರಿತ್ರ’, ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದಂತಹ ಕಾರ್ಯಕ್ರಮಗಳು ಉಪಯುಕ್ತವಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಧ. ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಪ್ರಾಚೀನ ಕಾಲದ ಆದರ್ಶ, ಸಂದೇಶಗಳನ್ನು ಮಾದರಿಯಾಗಿಟ್ಟುಕೊಂಡು ಪ್ರಸ್ತುತ ಚರಿತ್ರೆಯನ್ನು ಅಧ್ಯಯನ ಮಾಡಬಹುದು‌ ಎಂದು ಹೇಳಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸನ್ಮತಿ ಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಗೌರವಿ ವಂದಿಸಿ, ಸೋನಾ ಕಾರ್ಯಕ್ರಮ ನಿರೂಪಿಸಿದರು.

Gayathri SG

Recent Posts

ಮತದಾನದ ಮರುದಿನ ಆಲಗೂರ್ ನಿರಾಳ: ಸಚಿವ ಪಾಟೀಲರ ಜೊತೆ ಊಟ, ಮನೆಯವರ ಜೊತೆ ಮಾತು

ಲೋಕಸಭೆ ಚುನಾವಣೆ ಮಂಗಳವಾರ ಮುಗಿದು ಹೋಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮತದಾನದ ಮರು ದಿನ ನಿರಾಳ ನಗೆ ಬೀರುತ್ತ ಓಡಾಡಿದ್ದು ಕಂಡು…

6 mins ago

ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ: ಅಪ್ರಾಪ್ತನ ಬಂಧನ

ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಸಿದ ಘಟನೆ ಮೇ 6ರಂದು ನಡೆದಿದ್ದು,…

11 mins ago

ಸುಡು ಬಿಸಿಲು: ದಾಹ ನೀಗಿಸಲು ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡು

ಜಿಲ್ಲೆಯ ಮಲೇ ಮಹದೇಶ್ವರ ಬೆಟ್ಟದ ಹಾಡಿಯೊಂದರ ಸಮೀಪ ಆನೆಗಳ ಹಿಂಡೊಂದು ಜಾನುವಾರುಗಳಿಗೆ ಕಟ್ಟಿಸಿರುವ ನೀರಿನ ತೊಟ್ಟಿಯಲ್ಲಿ ದಾಹ ತೀರಿಸಿಕೊಂಡು ಕಾಡಿಗೆ…

33 mins ago

ರೈಲು ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರ ತೆರೆಯಲು ರೈಲ್ವೆ ಇಲಾಖೆ ನಿರ್ಧಾರ

ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡುವ ಪ್ರಯಾಣಿಕರ ಯೋಗಕ್ಷೇಮವನ್ನು ಹೆಚ್ಚಿಸುವ ಅನ್ವೇಷಣೆಯಲ್ಲಿ, ಭಾರತೀಯ ರೈಲ್ವೆ ಇಲಾಖೆ 2023ರ ಆಗಸ್ಟ್ ತಿಂಗಳಲ್ಲಿ ಪ್ರಧಾನ…

35 mins ago

ಚಾಮರಾಜನಗರ: ಜನ ಜಾನುವಾರುಗಳಿಗೆ ನೀರು, ಮೇವು ವಿತರಣೆ

ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಜಾನುವಾರುಗಳ  ಮೇವಿಗೆ ಯಾವುದೇ ಕೊರತೆಯಾಗದಂತೆ ಜಿಲ್ಲಾಡಳಿತ ವತಿಯಿಂದ…

54 mins ago

ವರುಣನ ಅಬ್ಬರಕ್ಕೆ ತುಂಬಿ ಹರಿದ ಕೆರೆ ಕಟ್ಟೆಗಳು

ವರುಣನ ಅಬ್ಬರಕ್ಕೆ ಕೆರೆಕಟ್ಟೆಗಳು ಭರ್ತಿಯಾಗಿದ್ದು, ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಸುತ್ತೂರು, ತಾಯೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳಲ್ಲಿ…

56 mins ago