Categories: ವಿಜಯಪುರ

ಮತದಾನದ ಮರುದಿನ ಆಲಗೂರ್ ನಿರಾಳ: ಸಚಿವ ಪಾಟೀಲರ ಜೊತೆ ಊಟ, ಮನೆಯವರ ಜೊತೆ ಮಾತು

ವಿಜಯಪುರ: ಲೋಕಸಭೆ ಚುನಾವಣೆ ಮಂಗಳವಾರ ಮುಗಿದು ಹೋಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮತದಾನದ ಮರು ದಿನ ನಿರಾಳ ನಗೆ ಬೀರುತ್ತ ಓಡಾಡಿದ್ದು ಕಂಡು ಬಂದಿದೆ.

ಚುನಾವಣೆ ಘೋಷಣೆಗೂ ಮುನ್ನವೇ ಕಳೆದ ನಾಲ್ಕು ತಿಂಗಳಿಂದಲೇ ಪ್ರೊ.ರಾಜು ಆಲಗೂರರು ಕಾಲಿಗೆ ಚಕ್ರ ಕಟ್ಟಿದ್ದರು.  ವಿಜಯಪುರದಿಂದ ಇವರಿಗೆ ಟಿಕೆಟ್ ಘೋಷಣೆಯಾಯಿತು.

ಜಿಲ್ಲೆಯಿಂದ ರಾಜ್ಯದಲ್ಲೇ ದಾಖಲೆ ಎನ್ನುವಂತೆ ಇವರೊಬ್ಬರದ್ದೇ ಹೆಸರು ಪಕ್ಷದ ಹೈಕಮಾಂಡ್ ಅಂಗಳ ತಲುಪಿತ್ತು. ಮುಂದೆ ಇವರು ತಿರುಗಿ ನೋಡದೇ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡರು. ಮೊದಲ ದಿನದಿಂದ ಮತದಾನದ ಕೊನೆಯ ದಿನದವರೆಗೂ ಇವರ ವೇಗ ಎಲ್ಲೂ ಕಮ್ಮಿಯಾಗಲಿಲ್ಲ.

ಕುಟುಂಬದ ಜೊತೆ ಸಮಯ: ಬೆಳಗ್ಗೆ ಬೇಗನೇ ಎದ್ದ ಆಲಗೂರರು, ಕುಟುಂಬದ ಜೊತೆ ಬೆರೆತರು. ನಿನ್ನೆಯ ಮತದಾನ ವಿವರಕ್ಕಾಗಿ ಪತ್ರಿಕೆಗಳನ್ನು ತಿರುವಿ ಹಾಕಿದರು.

ಆಲಗೂರ್ ದೃಶ್ಯ ಮಾಧ್ಯಮದ ಜೊತೆ ಮಾತನಾಡಿ, ‘ನನ್ನ ಗೆಲುವು ಶತಃಸಿದ್ಧ. ಜಿಲ್ಲೆಯ ಎಲ್ಲ ಕಡೆಯಿಂದಲೂ ಕಾಂಗ್ರೆಸ್‌ಗೆ ಒಳ್ಳೆಯ ವರದಿಗಳಿವೆ. ನಮಗೆ ಒಲವಿರುವ ಕಡೆಗಳಲ್ಲೆಲ್ಲ ಭರ್ಜರಿ ಮತದಾನವಾಗಿದೆ. ದಶಕಗಳ ನಂತರ ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಎಲ್ಲ ಲಕ್ಷಣಗಳಿವೆ’ ಎಂದರು.

ಇದಾದ ನಂತರ ಬಿಎಲ್‌ಡಿಇ ಆವರಣದ ಕಚೇರಿಗೆ ತೆರಳಿ ಅಲ್ಲಿ ಪ್ರಮುಖರೊಂದಿಗೆ ಸೇರಿ ಎಲ್ಲ ಬೆಳವಣಿಗೆಗಳ ಕುರಿತು ಚರ್ಚಿಸಿದರು, ಅಷ್ಟೂ ದಿನದ ಅನುಭವಗಳನ್ನು ಹಂಚಿಕೊಂಡು ಹಗುರಾದರು. ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ತಂಡದ ರೂವಾರಿ ಡಾ.ಮಹಾಂತೇಶ ಬಿರಾದಾರ, ಮುಖಂಡರಾದ ಡಾ.ಸಂಗಮೇಶ ಬಬಲೇಶ್ವರ, ಸುರೇಶ ಹಳ್ಳಿ, ಚಂದ್ರಶೇಖರ ಶೆಟ್ಟಿ, ಡಾ.ಗಂಗಾಧರ ಸಂಬಣ್ಣಿ ಹಾಗೂ ಪ್ರಫುಲ್ ಮಂಗಣ್ಣವರ ಸೇರಿ ಅನೇಕರ ಜೊತೆ ಆಪ್ತವಾಗಿ ಬೆರೆತರು.

ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಮನೆಯಲ್ಲಿ ಬಹಳೊತ್ತು ಕಳೆದರು. ಮೂರು ಗಂಟೆಗೂ ಹೆಚ್ಚುಕಾಲ ಅವರೊಂದಿಗಿದ್ದು ಎಲ್ಲ ವಿವರಣೆ ನೀಡಿದರು. ಅವರೊಂದಿಗೆ ಊಟ ಮಾಡಿ, ಖುಷಿಯಿಂದ ಇದ್ದರು. ಚುನಾವಣೆಯ ಯಾವ ಒತ್ತಡವೂ ಅವರಲ್ಲಿ ಇರಲಿಲ್ಲ. ಸಚಿವರು ಕೂಡ ಖುಷಿಯಿಂದ ಇದ್ದರು.

ರಾಜು ಆಲಗೂರರು ಸಂಜೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಧನ್ಯತಾಭಾವ ಮೆರೆದರು. ದೈವ ಭಕ್ತರಾಗಿರುವ ಆಲಗೂರರಿಗೆ ಪೂಜೆ-ಪುನಸ್ಕಾರದಲ್ಲಿ ಹೆಚ್ಚು ಆಸಕ್ತಿ. ದೇವರನ್ನು ನಂಬಿ ಒಳ್ಳೆಯ ಕಾರ್ಯದಲ್ಲಿ ತೊಡಗಬೇಕು, ಯಾರಗೂ ನೋಯಿಸದೆ ಇರಬೇಕೆನ್ನುವ ಮಿಸ್ಟರ್ ಕೂಲ್ ಮನಸ್ಸಿನವರು ಇವರು. ಜೂ.4ರ ವರೆಗೆ ಫಲಿತಾಂಶಕ್ಕಾಗಿ ಕಾಯುವುದು ಕಷ್ಟದ ಕೆಲಸ ಎನ್ನುವ ಮಾತುಗಳೊಂದಿಗೆ ದಿನ ಸರಿದು ಹೋಗಿತ್ತು.

Chaitra Kulal

Recent Posts

ಮಲ್ಲಮ್ಮ ಜಯಂತಿಗೆ ಅಗೌರವ : ರೆಡ್ಡಿ ಸಮಾಜ ಪದಾಧಿಕಾರಿಗಳ ಪ್ರತಿಭಟನೆ

ಚಿಟಗುಪ್ಪ'ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಗೌರವ…

4 mins ago

ಮಳೆಯಿಂದ​ ಪಂದ್ಯ ರದ್ದು : ರಾಯಲ್ಸ್​ ವಿರುದ್ಧ ರಾಜಸ್ಥಾನ್​ ಕಣಕ್ಕೆ

17ನೇ ಆವೃತ್ತಿಯ ಐಪಿಎಲ್​ನ ಕೊನೆಯ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ತಂಡಗಳು ಈ…

22 mins ago

ನಿಮ್ಮ ಡಲ್‌ಸ್ಕಿನ್‌ಗೆ ಇದು ಬೆಸ್ಟ್‌ ಪಾನೀಯ : ಎರಡು ವಾರದಲ್ಲೆ ಉತ್ತಮ ರಿಸಲ್ಟ್‌

ಬೇಸಿಗೆಯಲ್ಲಿ ಬಿಸಿಲಿನ ತಾಪ, ಕಲುಷಿತ ನೀರು, ಮಾಲಿನಗೊಂಡ ವಾತಾವರಣದಿಂದಾಗಿ ಸಾಕಷ್ಟು ಜನರು ಚರ್ಮದ ಸಮಸ್ಯೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಡಲ್‌ಸ್ಕಿನ್‌ ಇರುವವರೂ…

34 mins ago

ಇಂದು 49 ಕ್ಷೇತ್ರಗಳಲ್ಲಿ 5ನೇ ಹಂತದ ಮತದಾನ

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನವು ಸೋಮವಾರ (ಮೇ 20) ನಡೆಯಲಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ…

52 mins ago

ಇಂದಿನ ರಾಶಿ ಭವಿಷ್ಯ : ಈ ರಾಶಿಯವರಿಗೆ ಹೊಸ ಉದ್ಯೋಗ ಆಫರ್ ಬರಲಿದೆ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ…

1 hour ago

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

9 hours ago