News Karnataka Kannada
Friday, May 03 2024
ಕ್ಯಾಂಪಸ್

ಇಸ್ರೋದ ದಾರುಕೇಶ್‌ರಿಂದ ಎಸ್.ಡಿ.ಎಂ ಶೈಕ್ಷಣಿಕ ವರ್ಷಕ್ಕೆ ಚಾಲನೆ

ISRO's Darukesh launches SDM academic year
Photo Credit : News Kannada

ಉಜಿರೆ: ಎಸ್. ಡಿ ಎಂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಲ್ಲಿ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮವು ಅಕ್ಟೋಬರ್ ೪ ರಂದು ನಡೆಯಲಿದೆ. ಎಸ್ ಡಿ ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ೨೦೨೩-೨೪ ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಕಾಲೇಜಿಗೆ ಆಗಮಿಸಲಿರುವ ಹೊಸ ವಿದ್ಯಾರ್ಥಿಗಳನ್ನು ಕಾಲೇಜು ಎದುರು ನೋಡುತ್ತಿದೆ.

ಇಸ್ರೋದ ಅಸೋಸಿಯೇಟ್ ಡೈರೆಕ್ಟರ್ ಡಾ. ಬಿ.ಹೆಚ್.ಎಂ ಧಾರುಕೇಶ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಡಾ. ಬಿ.ಹೆಚ್.ಎಂ ಧಾರುಕೇಶ ಮೂಲತಃ ವಿಜಯನಗರ ಜಿಲ್ಲೆಯವರಾಗಿದ್ದು, ಬಿ.ಎಸ್.ಸಿ ಡಿಗ್ರಿಯನ್ನು ಕೊಟ್ಟೂರಿನಲ್ಲಿ ಪಡೆದಿದ್ದಾರೆ. ೧೯೯೭ ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಭೌತ ಶಾಸ್ತ್ರದಲ್ಲಿ ಎಂ.ಎಸ್.ಸಿ ಪದವಿಯನ್ನು ಹಾಗೂ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಡೈರೆಕ್ಟೋರಿಯಲ್ ಡಿಗ್ರಿಯನ್ನೂ ಪಡೆದುಕೊಂಡಿದ್ದಾರೆ.

ಸ್ನಾತಕೋತ್ತರ ಪದವಿಯ ನಂತರ ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆರ್‌ಎಫ್ ಹಾಗೂ ಮೈಕ್ರೋವೇವ್ ಸರ್ಕ್ಯೂಟ್ ಫಾರ್ ಸ್ಪೇಸ್ ಅಪ್ಲೀಕೇಶನ್‌ನಲ್ಲಿ ಪರಿಣಿತಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನ ಇಸ್ರೋದ ಪ್ರಧಾನ ಘಟಕದ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಕಾರ್ಯ ಪರಿಣಿತಿಗೆ ಸ್ಯಾಟಲೈಟ್ ಟೆಕ್ನಾಲಜಿ ಡೇ ಅವಾರ್ಡ್, ಬೆಸ್ಟ್ ಪ್ರೋಸೆಸ್ ಡೆವೆಲೆಪ್‌ಮೆಂಟ್ ಅವಾರ್ಡ್, ಟೀಮ್ ಎಕ್ಸಲೆನ್ಸ್ ಅವಾರ್ಡ್, ಬೆಸ್ಟ್ ಪೇಪರ್ ಅವಾರ್ಡ್ ಮುಂತಾದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು