News Karnataka Kannada
Friday, May 03 2024
ಕ್ಯಾಂಪಸ್

ಉಜಿರೆ ಎಸ್.ಡಿ.ಎಂ ಕಾಲೇಜಿನ 208 ವಿದ್ಯಾರ್ಥಿಗಳು ಇನ್ಫೋಸಿಸ್‌ಗೆ ಆಯ್ಕೆ

208 students of Ujire SDM College selected for Infosys
Photo Credit : News Kannada

ಉಜಿರೆ: ಬೆಂಗಳೂರಿನ ಇನ್ಫೋಸಿಸ್ ಬಿಪಿಎಂ ಲಿಮಿಟೆಡ್ ಕಂಪನೆಯ ಕ್ಯಾಂಪಸ್ ನೇಮಕಾತಿಯಲ್ಲಿ ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗದ ೨೦೮ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಕಾಲೇಜಿನ ರೋಟರಿ ಕರಿಯರ್ ಗೈಡೆನ್ಸ್ ಮತ್ತು ಪ್ಲೇಸ್‌ಮೆಂಟ್ ಸೆಲ್ ವಿಭಾಗದಿಂದ ಗುರುವಾರ ನೇಮಕಾತಿ ಪ್ರಕ್ರಿಯೆ ನಡೆದಿದೆ. `ಬ್ಯುಸಿನೆಸ್ ಪ್ರೋಸೆಸ್ ಎಕ್ಸಿಕ್ಯುಟಿವ್’ ಹುದ್ದೆಗಾಗಿ ಕ್ಯಾಂಪಸ್ ನೇಮಕಾತಿ ನಡೆದಿದ್ದು, ಬಿ.ಕಾಮ್ ಮತ್ತು ಬಿ.ಬಿ.ಎ ವಿಭಾಗದ ಒಟ್ಟು ೩೭೪ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇನ್ಫೋಸಿಸ್ ಬಿಪಿಎಂ ಲಿಮಿಟೆಡ್‌ನ ನೇಮಕಾತಿ ಅಧಿಕಾರಿ ಅನುಷಾ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳಾದ ನಿಖಿತಾ ಮತ್ತು ನಿಧಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಕಾಲೇಜಿನ ಕರಿಯರ್ ಗೈಡೆನ್ಸ್ ಮತ್ತು ಪ್ಲೇಸ್‌ಮೆಂಟ್ ಸೆಲ್ ವಿಭಾಗದ ಡಾ. ನಾಗರಾಜ್ ಪೂಜಾರಿ, ಹರೀಶ್ ಶೆಟ್ಟಿ ಮತ್ತು ಸೌಮ್ಯ ಕುಮಾರಿ ಇವರ ನೇತೃತ್ವದಲ್ಲಿ ಕ್ಯಾಂಪಸ್ ನೇಮಕಾತಿ ನಡೆದಿದೆ. ಕಾಲೇಜಿನ ಆಡಳಿತ ವರ್ಗವು ವಿದ್ಯಾರ್ಥಿಗಳ ಮತ್ತು ಶಿಕ್ಷಕ ವೃಂದದ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು