News Karnataka Kannada
Wednesday, May 01 2024
ಮಂಗಳೂರು

ಮಂಗಳೂರು: 25ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಇಂಪೆಟಸ್ 2022’

Inauguration of IMPETUS 2022 25th Annual National Homoeopathic Conference at Deralakatte Father Muller Homoeopathic Medical College
Photo Credit : News Kannada

ಮಂಗಳೂರು: ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆಯಲ್ಲಿ25 ನೇ ವಾರ್ಷಿಕರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಇಂಪೆಟಸ್ 2022’ಇದರ ಉದ್ಘಾಟನಾ ಸಮಾರಂಭವು ದೇರಳಕಟ್ಟೆಯ ಫಾದರ್‌ ಮುಲ್ಲರ್‌ ಸಭಾಂಗಣದಲ್ಲಿ ಸೆ.16ರಂದು ಬೆಳಗ್ಗೆ 9.30 ಗಂಟೆಗೆ ನಡೆಯಿತು.

ನಿಟ್ಟೆ ಡೀಮ್ಡ್ ಟು. ಬಿ. ಯುನಿವರ್ಸಿಟಿ, ದೇರಳಕಟ್ಟೆ ಇದರ ಗೌರವಾನ್ವಿತ ಉಪಕುಲಪತಿಗಳಾದ ಪ್ರೊಫೆಸರ್‌ಡಾ. ಸತೀಶ್‌ ಕುಮಾರ್‌ ಭಂಡಾರಿ ಮುಖ್ಯ ಅತಿಥಿಗಳಾಗಿಮತ್ತು ಫಾದರ್ ಮುಲ್ಲರ್‌ ಚಾರಿಟೇಬಲ್ ಸಂಸ್ಥೆ, ಕಂಕನಾಡಿ, ಮಂಗಳೂರು ಇದರ ನಿರ್ದೇಶಕರಾದ ವಂದನೀಯ ರಿಚರ್ಡ್ಅಲೋಶಿಯಸ್‌ ಕುವೆಲ್ಲೊರವರು ಸಮಾರಂಭದ ಅಧ್ಯಕ್ಷತೆ ವಹಿಸಿದರು.

ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯ ರೂಪದಲ್ಲಿ ದೇವರ ಆಶೀರ್ವಾದವನ್ನು ಕೋರುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಂಘಟನಾ ಕಾರ್ಯದರ್ಶಿ ಡಾ.ವಿವೇಕ್ ಶಕ್ತಿಧರನ್‌ ಗಣ್ಯರನ್ನು ವೇದಿಕೆಗೆ ಕರೆದೊಯ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಇ.ಎಸ್.ಜೆ.ಪ್ರಭುಕಿರಣ್‌ ಇವರು ಸಭೆಯನ್ನು ಸ್ವಾಗತಿಸಿದರು. ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸುವ ಮೂಲಕ ಸಮ್ಮೇಳನದ ಸಾಂಕೇತಿಕ ಉದ್ಘಾಟನೆಯನ್ನು ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರೊಫೆಸರ್‌ ಡಾ. ಸತೀಶ್‌ ಕುಮಾರ್‌ ಭಂಡಾರಿಯವರು ಉದ್ಘಾಟನಾ ಭಾಷಣದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಫಾದರ್ ಮುಲ್ಲರ್ ಸಂಸ್ಥೆಯ ಸೇವೆ ಹಾಗೂ ಸಮಾಜಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಪ್ರಶಂಸಿಸಿದರು. ಆಧುನಿಕ ವೈದ್ಯಕೀಯ ಪದ್ಧತಿಯ ಸಹಯೋಗದಿಂದ ವೈಜ್ಯಾನಿಕ ಸಂಶೋಧನೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಜಂಟಿಯಾಗಿ ಕೆಲಸ ಮಾಡುವಂತೆ ಪ್ರೇರೇಪಿಸಿದರು. ನಂತರ 25ನೇ  ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದ ಸ್ಮರಣಿಕೆಯನ್ನು ಬಿಡುಗಡೆ ಮಾಡಿದರು. ವೇದಿಕೆಯಲ್ಲಿರುವ ಇತರ ಗಣ್ಯರೊಂದಿಗೆ ಸ್ಮರಣಿಕಾ ಸಮಿತಿಯ ಅಧ್ಯಕ್ಷೆ ಡಾ.ರೈಸಾಚೆರಿಯನ್‌ ಜೊತೆಗೂಡಿದರು.

ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್‌ ಡಿವಿಜನ್‌ ತಮ್ಮ ಗುಣಮಟ್ಟದ ಉತ್ಪನ್ನಗಳು ಮತ್ತು ಔಷಧಿಗಳಿಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ ಮತ್ತು ಯಾವಾಗಲೂ ಆಧುನೀಕರಿಸುವ, ನವೀಕರಿಸುವ ಮತ್ತುಉತ್ತಮ ಉತ್ಪನ್ನಗಳನ್ನು ರಚಿಸುವ ಪ್ರಕ್ರಿಯೆಯಲ್ಲಿದೆ. ಈ ಸಂದರ್ಭದಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯಕಾಲೇಜು ಮತ್ತುಆಸ್ಪತ್ರೆ ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್‌ ಡಿವಿಜನ್‌ನ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್‌ ಕ್ರಾಸ್ತಾರವರು ಅಧ್ಯಕ್ಷರಾದ ವಂದನೀಯರಿಚರ್ಡ್ ಅಲೋಶಿಯಸ್ ಕುವೆಲ್ಲೊರವರ ಜೊತೆಗೂಡಿ ಹೊಸ ಔಷಧಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ಆಡಳಿತಾಧಿಕಾರಿಗಳಾದ ವಂದನೀಯ ರೋಶನ್‌ ಕ್ರಾಸ್ತಾರವರು ತಮ್ಮ ಸಂದೇಶದಲ್ಲಿ ಸಂಶೋಧನೆ ಮತ್ತು ಅವಿಷ್ಕಾರಗಳು ಯಾವುದೇ ಶಿಕ್ಷಣ ಸಂಸ್ಥೆಯ ಮುಖ್ಯ ಅಂಗವಾಗಿದೆ ಮತ್ತು ಈ ಕಾಲೇಜಿನ ಸಂಶೋಧನಾಘಟಕವುಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಾಧನೆಗಳನ್ನು ಗುರುತಿಸುವುದಕ್ಕೋಸ್ಕರ ಸಂಶೋಧನಾ ಸಂಚಿಕೆಯನ್ನು ಹೊರತಂದಿರುವುದಾಗಿ ತಿಳಿಸಿದರು. ಸಂಚಿಕೆಯ ಪರಿಚಯಾತ್ಮಕ ಸಂಪುಟವನ್ನು ಅಧ್ಯಕ್ಷರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಬಿಡುಗಡೆಗೊಳಿಸಿದರು. ವೈಜ್ಞಾನಿಕ ಸಮಿತಿಯ ಸಂಯೋಜಕರಾದ ಡಾ. ಕುರಿಯನ್ ಪಿ.ಜೆ.ರವರು ಬಿಡುಗಡೆ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರೊಂದಿಗೆ ಸೇರಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷರುಗಳಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಮುಖ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ತಮ್ಮಅಧ್ಯಕ್ಷೀಯ ಭಾಷಣದಲ್ಲಿ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಹಾಗೂ ತಂಡದವರನ್ನು ಅಭಿನಂದಿಸಿ ಸಂಸ್ಥೆಯ ಗುರಿ ಮತ್ತು ಆದರ್ಶಗಳ ಬಗ್ಗೆ ವಿವರಿಸಿದರು.

ಸಂಘಟನಾ ಕಾರ್ಯದರ್ಶಿ ಡಾ.ವಿವೇಕ್ ಶಕ್ತಿಧರನ್‌ರವರ ವಂದನಾರ್ಪಣೆಯ ಬಳಿಕ ಸಂಸ್ಥೆಯ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ ಮತ್ತು ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಗಿರೀಶ್ ನಾವಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ರಾಜಚಂದ್ರ ಮತ್ತುಡಾ. ಮೇಬಲ್ ಅಂದ್ರಾದೆಇವರುಕಾರ್ಯಕ್ರಮವನ್ನು ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು