News Karnataka Kannada
Sunday, May 05 2024
ಕ್ಯಾಂಪಸ್

ಸಂತಜೋಸೆಫ್ ಇಂಜಿನಿಯರಂಗ್ ಕಾಲೇಜಿನಲ್ಲಿ 16ನೇ ಪದವಿ ಸಮಾರಂಭ

Joseph
Photo Credit : News Kannada

 

ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಹದಿನಾರನೇ ಪದವಿ ಪ್ರದಾನ ಸಮಾರಂಭವು 26 ಮಾರ್ಚ್ 2022 ರಂದು ಕಾಲೇಜಿನಲ್ಲಿ ನಡೆಯಿತು.

ಈ ಸಮಾರಂಭದಲ್ಲಿ 2021ನೇ ಸಾಲಿನ 563 ಪದವಿಪೂರ್ವ ವಿದ್ಯಾರ್ಥಿಗಳು (ಬಿಇ) ಮತ್ತು 115 ಸ್ನಾತಕೋತ್ತರ ಪದವೀಧರರಿಗೆ (ಎಂಬಿಎ, ಎಂಸಿಎ, ಎಂಟೆಕ್ ಮತ್ತು ಪಿಎಚ್‌ಡಿ) ಸಂಸ್ಥೆಯಿಂದ ಪದವಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದೂಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ನ ಉಪಕುಲಪತಿಗಳಾದ ಡಾ ಎಸ್ ಎನ್ ಶ್ರೀಧರ ಅವರು ಭಾಗವಹಿಸಿ ಪದವೀಧರರಿಗೆ ಪದವಿ ಪ್ರಮಾಣ ಪತ್ರ ವಿತರಿಸಿದರು. ಟೊಯೊಟಾ ಕಿರ್ಲೋಸ್ಕರ್ ಮೋಟರ್‌ನ ಡೆಪ್ಯೂಟಿ ಮ್ಯಾನೇಜರ್ ಮತ್ತು ಕಾಲೇಜಿನ 2006ರ ಸಾಲಿನ ಹಳೆಯ ವಿದ್ಯಾರ್ಥಿ ಶ್ರೀ ಕಾರ್ತಿಕ್ ಎಸ್ ಕೆ ಅವರು ಈ ಸಂದರ್ಭದಲ್ಲಿ ಗೌರವ ಅತಿಥಿಯಾಗಿದ್ದರು. ಸಮಾರಂಭದ
ಅಧ್ಯಕ್ಷತೆಯನ್ನು ಮಂಗಳೂರಿನ ಬಿಷಪ್ ಮತ್ತು ಕಾಲೇಜಿನ ಅಧ್ಯಕ್ಷರಾದ ಅತಿ ವಂ ಡಾ ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಿದ್ದರು.

ಕಾಲೇಜಿನ ನಿರ್ದೇಶಕರಾದ ವಂ ವಿಲ್ರ್ಪೆಡ್ ಪ್ರಕಾಶ್ ಡಿಸೋಜಾ ಅವರು 2021ನೇ ಸಾಲಿನ ಪದವೀಧರರನ್ನು ಮತ್ತು ಗಣ್ಯರನ್ನು ಪದವಿ ಪ್ರದಾನ ಸಮಾರಂಭಕ್ಕೆ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ ರಿಯೋ ಡಿಸೋಜಾ ಅವರು ಮುಖ್ಯ ಅತಿಥಿ ಮತ್ತು ಗೌರವ
ಅತಿಥಿಗಳನ್ನು ಪರಿಚಯಿಸಿದರು.

ಶ್ರೀ ಕಾರ್ತಿಕ್ ಅವರು ತಮ್ಮ ಸ್ವಂತ ಅನುಭವಗಳ ಬಗ್ಗೆ ಮಾತನಾಡುತ್ತಾ ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳು ಪ್ರತಿಯೊಂದು ಸನ್ನಿವೇಶಕ್ಕೆ ಹೊಂದಿಕೊಳ್ಳುವ ಗುಣಗಳ ಜೊತೆಗೆ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಅವರು ಕರೆ ನೀಡಿದರು. ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು ಪ್ರತಿಯೊಬ್ಬ ಪದವೀಧರರು ಉದ್ಯಮದಲ್ಲಿ ಯಶಸ್ಸಿಗೆ ಪ್ರಮುಖವಾದ ಕಲಿಕೆಯನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು. ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಮತ್ತು ನೈತಿಕತೆಯ ಜೊತೆಗೆ ನಿರಂತರವಾಗಿ ಹೊಸತನವನ್ನು ಪಡೆಯುವುದು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.

ಡಾ ಎಸ್ ಎನ್ ಶ್ರೀಧರ ಅವರು ಮಾತನಾಡುತ್ತಾ ಶಿಕ್ಷಣವು ವಿದ್ಯಾರ್ಥಿಗಳಿಗೆ ಬುದ್ಧಿಮತ್ತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದರು. ಅದರ ಜೊತೆಗೆ ಪದವೀಧರರು ತಮ್ಮಲ್ಲಿ ಭಾವನಾತ್ಮಕತೆ, ಹೊಂದಿಕೊಳ್ಳುವಿಕೆ ಮತ್ತು ಆಧ್ಯಾತ್ಮಿಕತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದರು. ವೈಯಕ್ತಿಕ ಜೀವನ
ಮತ್ತು ವೃತ್ತಿಜೀವನವು ಸಮತೋಲನ ಹೊಂದಿದ್ದು ಪದವೀಧರರು ಅಗತ್ಯ ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಪದವೀಧರರನ್ನು ಅಭಿನಂದಿಸುತ್ತಾ ಅವರೆಲ್ಲರೂ ಶ್ರೇಷ್ಠತೆಯ ಅನ್ವೇಷಣೆಯಲ್ಲಿ ನಿರಂತರವಾಗಿ ಇರಬೇಕು ಎಂದು ಅವರು ಹೇಳಿದರು.

ಡಾ ರಿಯೋ ಡಿಸೋಜಾ ಅವರು ಪದವಿ ಪ್ರಮಾಣ ವಚನ ಬೋಧಿಸಿದರು. ಎಂಬಿಎ ವಿಭಾಗದ ಪದವೀಧರರಾದ ಎವಿಟಾ ಲವಿಸಿಯಾ ಡಿಸೋಜಾ ಹಾಗೂ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪದವೀಧರರಾದ ಸಂಕೇತ್ ಬಿ ಪ್ರಭು ಅವರು ತಮ್ಮ
ಅನುಭವಗಳನ್ನು ಹಂಚಿಕೊಂಡರು. ವಿದ್ವತ್ಪೂರ್ಣ ಸಾಧಕರು ಮತ್ತು ಕ್ರೀಡಾ ಸಾಧಕರನ್ನು ಮಂಗಳೂರಿನ ಬಿಷಪ್ ಅವರು ಗುರುತಿಸಿ
ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಕಾಲೇಜಿಗೆ ರ‍್ಯಾಂಕ್‌ಗಳನ್ನು ತAದ ಶೇಕ್ ಮೊಹಮ್ಮದ್ ಜುನೈನ್ (ಸಿವಿಲ್ ಇಂಜಿನಿಯರಿಂಗ್ ನಲ್ಲಿ 4ನೇ ರ‍್ಯಾಂಕ್), ಸುಶ್ಮಿತಾ (ಎಂಸಿಎಯಲ್ಲಿ 8ನೇ ರ‍್ಯಾಂಕ್) ಮತ್ತು ವರುಣ್ ಎಂ (ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ 9ನೇ ರ‍್ಯಾಂಕ್) ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷೀಯ ಭಾಷಣದಲ್ಲಿ ಬಿಷಪ್ ಕಾಲೇಜು ತನ್ನ ಪದವೀಧರರೊಂದಿಗೆ ಅವರ ಸಾಧನೆಗಳಿಗಾಗಿ ಸಂತೋಷಪಡುತ್ತದೆ ಎಂದು ಹೇಳಿದರು. ಕಠಿಣ
ಪರಿಶ್ರಮವಿಲ್ಲದೆ ಯಶಸ್ಸು ಹೊಂದಲು ಸಾಧ್ಯವಿಲ್ಲ ಎಂದ ಅವರು ದೇವರು, ಪಾಲಕರು, ಸಂಸ್ಥೆ ಮತ್ತು ಸಮಾಜಕ್ಕೆ ನಿಷ್ಠರಾಗಿ ಎಲ್ಲರೂ ದೃಢ ಸಂಕಲ್ಪ ದಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು. ಪದವೀಧರರು ಪ್ರೀತಿ, ಗೌರವ ಮತ್ತು ಕಾಳಜಿಯ ಸಮಾಜವನ್ನು ರಚಿಸಲು ಸಹಕರಿಸಬೇಕು ಎಂದು ಅವರು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಸದಸ್ಯರ ಜೊತೆಗೆ ಸಹಾಯಕ ನಿರ್ದೇಶಕರಾದ ವಂ ಆಲ್ವಿನ್ ರಿಚರ್ಡ್ ಡಿಸೋಜಾ, ಮಾನವ ಸಂಪನ್ಮೂಲ ವ್ಯವಸ್ಥಾಪಕರು ಶ್ರೀ ರಾಕೇಶ್ ಲೋಬೊ, ಕಾರ್ಯಕ್ರಮದ ಸಹ ಸಂಚಾಲಕಿ ರೇಣುಕಾ ತಂತ್ರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಡಾ ಶರುನ್ ಮೆಂಡೋನ್ಸಾ ವಂದಿಸಿದರು. ಪ್ರೀತಾ ಅರೋಜಾ ಮತ್ತು ರೂಪೇಶ್ ಕಾರ್ಯಕ್ರಮ ನಿರೂಪಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು