News Karnataka Kannada
Monday, April 29 2024
ಕ್ಯಾಂಪಸ್

78 ಸಾವಿರ ಪದವಿಧರರಿಗೆ ಉದ್ಯೋಗಾವಕಾಶ

Call Center
Photo Credit :
ಬೆಂಗಳೂರು : ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​ (ಟಾಟಾ ಸಲಹಾ ಸೇವೆಗಳು-TCS) ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ 35 ಸಾವಿರಕ್ಕೂ ಅಧಿಕ ಜನರನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಿದೆ. ಅಂದರೆ ಪೂರ್ಣ ಹಣಕಾಸು ವರ್ಷದ ಕೊನೆಯಲ್ಲಿ ಒಟ್ಟು 78 ಸಾವಿರ ಮಂದಿ ಹೊಸ ಪದವೀಧರರನ್ನು ನೇಮಕ ಮಾಡಿಕೊಳ್ಳಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.

ಇದೀಗ ಹೆಚ್ಚುತ್ತಿರುವ ಸಂಘರ್ಷಣದಿಂದಾಗಿ ನಮ್ಮ ಸಂಸ್ಥೆಯಲ್ಲಿ ನೇಮಕಾತಿ ವೇಗವವನ್ನು ಹೆಚ್ಚಿಸಬೇಕಾಗಿಬಂದಿದೆ. ಇಷ್ಟು ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕಾಗಿ ಬಂದಿದೆ ಎಂದು ಟಿಸಿಎಚ್​ ಮುಖ್ಯ ಸಂಪನ್ಮೂಲಕ ಅಧಿಕಾರಿ ಮಿಲಿಂದ್​ ಲಕ್ಕದ್​ ತಿಳಿಸಿದ್ದಾರೆ.  ಹಣಕಾಸು ವರ್ಷ 2021-22ರ ಮೊದಲಾರ್ಧ ಭಾಗದಲ್ಲಿ, 43 ಸಾವಿರ ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗಿದೆ. ನಾವು ಅಳವಡಿಸಿಕೊಂಡಿರುವ ಶಿಫ್ಟ್​-ಲೆಫ್ಟ್​ ತರಬೇತಿ ಕಾರ್ಯತಂತ್ರದಿಂದಾಗಿ ನೇಮಕಾತಿ ವೇಗವೂ ಅಧಿಕಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಟಾಟಾ ಕನ್ಸ್​ಲ್ಟೆನ್ಸಿ ಸರ್ವೀಸ್​​ ಭಾರತದ ಅತಿದೊಡ್ಡ ಐಟಿ ಸರ್ವೀಸ್​ ಕಂಪನಿಯಾಗಿದೆ. ಇದೀಗ ದೊಡ್ಡ ಮಟ್ಟದಲ್ಲಿ ನೇಮಕಾತಿ ಯೋಜನೆಗಳನ್ನು ಘೋಷಿಸಿದೆ. ಇದು ಖಂಡಿತವಾಗಿಯೂ ಹೊಸಬರಿಗೆ, ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಲಿದೆ. ಇದೇ ಹೊತ್ತಲ್ಲಿ ಟಾಟಾ ಕನ್ಸಲ್ಟೆನ್ಸಿ ತನ್ನ ಎರಡನೇ ತ್ರೈಮಾಸಿಕದ ದಾಖಲೆ ಮಟ್ಟದ ಲಾಭವನ್ನೂ ಘೋಷಿಸಿದೆ.  ಅಂದಹಾಗೆ ಕಳೆದ 6ತಿಂಗಳಿಂದೀಚೆಗೆ ಟಿಸಿಎಸ್​ ಸುಮಾರು 43 ಸಾವಿರ ಹೊಸಬರಿಗೆ ಉದ್ಯೋಗ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು