News Karnataka Kannada
Sunday, May 05 2024
ಕ್ಯಾಂಪಸ್

ವಿವಿ ಕಲಾ ಕಾಲೇಜು ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆಹ್ವಾನ

Tumkur University
Photo Credit :

ತುಮಕೂರು : ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ೨೦೨೧-೨೨ನೇ ಸಾಲಿನ ಪ್ರಥಮ ಬಿಎ /ಬಿಎಸ್ ಡಬ್ಲ್ಯೂ/ ಬಿಕಾಂ / ಬಿಬಿಎ ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು htttps://onlinetut.in/ucatut/  ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕಿರುತ್ತದೆ. ಅರ್ಜಿ ಸಲ್ಲಿಸಲು ದಿನಾಂಕ: ೦೬-೦೯-೨೦೨೧ ಕೊನೆಯ ದಿನವಾಗಿರುತ್ತದೆ.

ರೂ. ೫೦ ಅರ್ಜಿ ಶುಲ್ಕವಿರುತ್ತದೆ. ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ಜನ್ಮದಿನಾAಕ ದಾಖಲೆ, ಆಧಾರ್ ಕಾರ್ಡ್, ಪಿಯುಸಿ ಅಂಕಪಟ್ಟಿ., ನಡತೆ ಪ್ರಮಾಣಪತ್ರ/ ಪ್ರಮಾಣ ಪತ್ರ, ಜಾತಿ/ಆದಾಯ ಪ್ರಮಾಣಪತ್ರಗಳನ್ನು ಪೂರಕ ದಾಖಲೆಗಳಾಗಿ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಯನ್ನು ಇಟ್ಟುಕೊಂಡು ಪ್ರವೇಶ ಸಂದರ್ಭದಲ್ಲಿ ನಿಗದಿತ ದಾಖಲೆಗಳೊಂದಿಗೆ ಕಾಲೇಜಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಜ್ಯೇಷ್ಠತಾ ಪಟ್ಟಿಯನ್ನು ದಿನಾಂಕ: ೦೮-೦೯-೨೦೨೧ರಂದು ಕಾಲೇಜಿನಲ್ಲಿ ಹಾಗೂ ವಿಶ್ವವಿದ್ಯಾನಿಲಯದ ವೆಬ್‌ಸೈಟ್ www.tumkuruniversity.ac.in ನಲ್ಲಿ ಪ್ರಕಟಿಸಲಾಗುವುದು. ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ: ೦೯-೦೯-೨೦೨೧ ಕೊನೆಯ ದಿನವಾಗಿರುತ್ತದೆ.

ದಿನಾಂಕ: ೧೧-೦೯-೨೦೨೧ರಂದು ಅಂತಿಮ ಜ್ಯೇಷ್ಠತಾ ಪಟ್ಟಿ ಮತ್ತು ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. ದಿನಾಂಕ: ೧೩-೦೯-೨೦೨೧ರಿಂದ ೧೫-೦೯-೨೦೨೧ರವರೆಗೆ ಬಿಎ /ಬಿಎಸ್ ಡಬ್ಲ್ಯೂ/ ಬಿಕಾಂ / ಬಿಬಿಎ ಕೋರ್ಸುಗಳಿಗೆ ಆಯ್ಕೆ ಪಟ್ಟಿಯಂತೆ ಪ್ರವೇಶ ನೀಡಲಾಗುವುದು. ದಿನಾಂಕ: ೧೬-೦೯-೨೦೨೧ರಿಂದ ೧೮-೦೯-೨೦೨೧ರವರೆಗೆ ಬಿಕಾಂ/ಬಿಬಿಎ ಕೋರ್ಸುಗಳಿಗೆ ಆಯ್ಕೆ ಪಟ್ಟಿಯಂತೆ ಪ್ರವೇಶ ನೀಡಲಾಗುವುದು. ಉಳಿದ ಸೀಟುಗಳಿಗೆ ದಿನಾಂಕ: ೨೦-೦೯-೨೦೨೧ರಿಂದ ೨೨-೦೯-೨೦೨೧ರವರೆಗೆ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಹೆಚ್ಚಿನ ಮಾಹಿತಿಗಳಿಗೆ ತುಮಕೂರು ವಿಶ್ವವಿದ್ಯಾನಿಲಯದ ವೆಬ್‌ಸೈಟ್ ಅನ್ನು ವೀಕ್ಷಿಸಲು ಕೋರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು