News Karnataka Kannada
Monday, April 29 2024
ಕ್ಯಾಂಪಸ್

ಅಲೋಶಿಯಸ್ ಕಾಲೇಜಿನಲ್ಲಿ ‘ಸಂತ ಅಲೋಶಿಯಸ್ ಪ್ರಕಾಶನ’ ಉದ್ಘಾಟನೆ

Alsyous
Photo Credit :

ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ಪ್ರಕಟಣಾ ಘಟಕ ‘ಸಂತ ಅಲೋಶಿಯಸ್ ಪ್ರಕಾಶನ’ ಅಕ್ಟೋಬರ್ ೭, ೨೦೨೧ರಂದು ಕಾಲೇಜಿನ ಜೋಸೆಫ್ ವಿಲ್ಲಿ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿರುವ ಡಾ.ಉದಯ ಕುಮಾರ್ ಎಂಎ, ಇರ್ವತ್ತೂರು ಕಾರ್ಯಕ್ರಮದ ‌‌ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂತ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಗಳ ವರಿಷ್ಟರಾಗಿರುವ ರೆ. ಫಾ. ಮೆಲ್ವಿನ್ ಜೋಸೆಫ್ ಪಿಂಟೊ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾಗಿರುವ ರೆ. ಡಾ ಪ್ರವೀಣ್ ಮರ‍್ಟಿಸ್, ಕುಲಸಚಿವರಾಗಿರುವ ಡಾ ಆಲ್ವಿನ್ ಡೇಸಾ, ಪ್ರಕಾಶನ ಕೇಂ ಿಸೋಜ, ಕಾಲೇಜಿನ ಆಡಳಿತ ಬ್ಲಾಕಿನ ನಿರ್ದೇಶಕ ಡಾ. ನಾರ್ಬರ್ಟ್ ಲೋಬೊ, ಡಾ. ಸಿಲ್ವಿಯ ರೇಗೊ, ವಿಶ್ರಾಂತ ಪ್ರಾಂಶುಪಾಲರಾದ ವಂ. ಫಾ. ಪ್ರಶಾಂತ್ ಮಾಡ್ತಾ ಮತ್ತು ವಂ. ಫಾ. ರೋನಿ ಸೆರಾವೊ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಯತ್ತ ಕಾಲೇಜಿನ ಸ್ಥಾನಮಾನ ದೊರೆತ ನಂತರ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬೋಧನೆಯ ಪ್ರಾಧಾನ್ಯತೆಯ ಜೊತೆಗೆ ಸಂಶೋಧನೆಯ ಬಗೆಗಿನ ಒಲವು ತೀವ್ರಗೊಂಡ ಕಾರಣಕ್ಕಾಗಿ ಕಾಲೇಜಿನಲ್ಲಿ ಸಂಶೋಧನಾ ಪ್ರಕಟಣೆಗಳು ಹೆಚ್ಚಾಗಿವೆ. ಇದರಿಂದಾಗಿ ಕಳೆದ ಕೆಲವು ವರ್ಷಗಳಿಂದ ಕಾಲೇಜು ತನ್ನದೇ ಆದ ಪ್ರಕಾಶನ ಕೇಂದ್ರವನ್ನು ಆರಂಭಿಸಲು ಚಿಂತನೆ ನಡೆಸುತ್ತ ಬಂದಿದ್ದು, ಸಂಶೋಧನ ಪ್ರಕಟಣೆಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಅಗತ್ಯತೆಯ ನೆಲೆಯಲ್ಲಿ ‘ಸಂತ ಅಲೋಶಿಯಸ್ ಪ್ರಕಾಶನ’ ಎಂಬ ಹೆಸರಿನಲ್ಲಿ ತನ್ನದೇ ಆದ ಪ್ರಸಾರಾಂಗವನ್ನು ಪ್ರಾರಂಭಿಸಿದೆ. ಸಾಹಿತ್ಯ, ಶಿಕ್ಷಣ ಮತ್ತು ಸಂಶೋಧನೆಗೆ ಸಂಬಂಧಿಸಿದ ಬರಹಗಳನ್ನು ಪ್ರಕಟಿಸುವ ಪ್ರಕಾಶನ ಕಾಲೇಜಿನ ಅಧಿಕೃತ ಪ್ರಕಟಣಾ ಘಟಕವಾಗಿರುತ್ತದೆ. ಕೇಂದ್ರವು ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಲೇಖನಗಳು, ಸೃಜನಶೀಲ ಬರಹಗಳನ್ನು ಮಾತ್ರವಲ್ಲದೆ ಸಾರ್ವಜನಿಕ ಸಂಶೋಧನೆ ಮತ್ತು ಸಾಹಿತ್ಯ ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ.
ಕತೆ, ಕಾದಂಬರಿಗಳ ಹೊರತಾಗಿ ವಿದ್ಯಾರ್ಥಿಗಳ ಲೇಖನಗಳು, ಜೀವನಚರಿತ್ರೆಗಳು, ಪಠ್ಯ ಪುಸ್ತಕಗಳು, ಸಾಹಿತ್ಯ ಕೃತಿಗಳ ಸಂಕಲನಗಳು ಮತ್ತು ಕರಾವಳಿ ಪ್ರದೇಶದ ಸಂಶೋಧನ ಕೃತಿಗಳಿಗೆ ಆದ್ಯತೆ ನೀಡಲಾಗುತ್ತದೆ. ಈ ಪ್ರದೇಶದ ಸಮಸ್ಯೆಗಳು ಮತ್ತು ಕಾಳಜಿಗಳ ಬಗ್ಗೆ ತಿಳಿವಳಿಕೆ ನೀಡುವ ಮತ್ತು ಯಾವುದೇ ಭಾಷೆಯ ಮೂಲ ಕೃತಿಗಳನ್ನು ಪ್ರಕಟಿಸಲು ಕೇಂದ್ರವು ಆಸಕ್ತಿಯನ್ನು ಹೊಂದಿದೆ.
ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ಪ್ರಕಾಶನವು ಕ್ರಮವಾಗಿ ರೆ. ಫಾ. ಪ್ರಶಾಂತ್ ಮಾಡ್ತಾ, ರೆ. ಫಾ. ರೋನಿ ಸೆರಾವೊ, ಡಾ ಸಿಲ್ವಿಯಾ ರೇಗೊ ಮತ್ತು ಡಾ  ನಾರ್ಬರ್ಟ್ ಲೋಬೊ ಬರೆದ ಪುಸ್ತಕಗಳನ್ನು ಔಪಚಾರಿಕವಾಗಿ ಬಿಡುಗಡೆ ಮಾಡಿತು. ಲೇಖಕರ ಮೂಲ ಕೃತಿಯನ್ನು ಒಳಗೊಂಡ ಸಂತ ಅಲೋಶಿಯಸ್ ಪಾಡ್ಕಾಸ್ಟ್ ಅನ್ನು ಉದ್ಘಾಟಿಸಲಾಯಿತು.
ಬಿಬಿಎ ವಿಭಾಗದ ಮನೋಜ್ ಡೈಸನ್ ಫರ‍್ನಾಂಡಿಸ್  ಕಾರ್ಯಕ್ರಮ ನಿರೂಪಿಸಿದರು. ವಂ. ಡಾ. ಪ್ರವೀಣ್ ಮರ‍್ಟಿಸ್ ಸ್ವಾಗತಿಸಿದರು. ಡಾ. ಆಲ್ವಿನ್ ಡೇಸಾರವರು ಪ್ರಕಟಣಾ ಘಟಕ ‘ಸಂತ ಅಲೋಶಿಯಸ್ ಪ್ರಕಾಶನ’ದ ಬಗ್ಗೆ ವಿವರಿಸಿದರು. ಡಾ. ವಿದ್ಯಾ ವಿನುತ ಡಿಸೋಜ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು