News Karnataka Kannada
Monday, May 06 2024
ಕ್ಯಾಂಪಸ್

ಇಲೆಕ್ಟ್ರಾನಿಕ್ ವಸ್ತುಗಳಲ್ಲಿ ಬೆರಳುಗಳನ್ನಾಡಿಸಿ ಆಟವಾಡುವುದು ಮನರಂಜನೆಯ ಒಂದು ಮಾಧ್ಯಮ

Eletronicgadget
Photo Credit :

ನಾವು ಇಂದು ಮನಸ್ಸನ್ನು ರಂಜಿಸಲು ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಸಂಗೀತವನ್ನು ಆಲಿಸುವುದು, ಚಲನಚಿತ್ರಗಳನ್ನು ನೋಡುವುದು, ಆಟ ಆಡುವುದು ಹೀಗೆ ಹಲವು ಮಾರ್ಗಗಳಿಂದ ನಮ್ಮ ಮನಸ್ಸನ್ನು ಒತ್ತಡಗಳಿಂದ ಹೊರತರಲು ಪ್ರಯತ್ನಿಸುತ್ತಿದ್ದೇವೆ.ಆದರೆ ಹೊರಾಂಗಣ ಆಟಗಳಿಗಿಂತ ಇಂದು ನಾವು ಇಲೆಕ್ಟ್ರಾನಿಕ್ ವಸ್ತುಗಳಲ್ಲಿ ಬೆರಳುಗಳನ್ನಾಡಿಸಿ ಆಟವಾಡುತ್ತಿದ್ದೇವೆ. ಅವುಗಳು ಮನರಂಜನೆಯ ಒಂದು ಮಾಧ್ಯಮವಾಗಿ ಪರಿವರ್ತನೆ ಹೊಂದಿದೆ.

ಇಲೆಕ್ಟ್ರಾನಿಕ್ ವಸ್ತುಗಳಲ್ಲಿ ಆಡುವ ಆಟಗಳನ್ನು ನಾವು ವಿಡಿಯೋ ಗೇಮ್ ಎಂದು ಕರೆಯುತ್ತೇವೆ. ಇಲೆಕ್ಟ್ರಾನಿಕ್ ವಸ್ತುಗಳ ಬೆಳವಣಿಗೆಯ ಜೊತೆ ಜೊತೆಗೆ ಗೇಮ್ ಗಳೂ ಬೆಳೆಯುತ್ತಾಬಂದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ನಾವು ಎಲ್ಲಾ ಇಲೆಕ್ಟ್ರಾನಿಕ್ ಗೆಜೆಟ್ಗಳಲ್ಲಿ ಗೇಮ್ಗಳನ್ನು ಕಾಣಬಹುದು. ಗೇಮ್ಗಳು ಇಲ್ಲದ ಇಲೆಕ್ಟಾçನಿಕ್ ಗೆಜೆಟ್ಗಳು ತುಂಬ ಕಡಿಮೆ.

ಸ್ಮಾರ್ಟಪೋನ್ ಗಳು ಇಂದು ಎಲ್ಲರ ಕೈಗೆ ವೀಡಿಯೋ ಗೇಮ್ ಗಳನ್ನು ತಲುಪಿಸಿದೆ. ಅವುಗಳಲ್ಲಿ ಆನ್ಲೈನ್ ಗೇಮ್ಗಳ ಸಂಖ್ಯೇ ಹೆಚ್ಚಾಗಿದೆ. ಆ ಗೇಮ್ ಆಡುವುದರ ಮೂಲಕ ಹಣ ಸಂಪಾದಿಸುವ ಮಾರ್ಗಗಳನ್ನೂ ಕೆಲವರು ಕಂಡುಕೊಂಡಿದ್ದಾರೆ. ಇವುಗಳ ಪಂದ್ಯಾಟಗಳೂ ಜರಗುತ್ತವೆ. ಅವುಗಳಲ್ಲಿ ಭಾಗವಹಿಸಿ ಕೆಲವರು ದುಡ್ಡನ್ನು ಸಂಪಾದಿಸುತ್ತಾರೆ.

ವಿದೇಶಗಳಲ್ಲಿ ಆನ್ಲೈನ್ ಪಂದ್ಯಾವಳಿಗಳು ಹಲವು ವರ್ಷಗಳಿಂದ ಆಯೋಜನೆಗೊಳ್ಳುತ್ತಿದೆ. ತೀರಾ ಇತ್ತೀಚಿಗಷ್ಟೇ ಭಾರತೀಯರು ಇದರಲ್ಲಿ ಭಾಗವಹಿಸತೊಡಗಿದ್ದಾರೆ. ಅವುಗಳನ್ನು ಈ-ಸ್ಪೋಟ್ಸ್ ಟೂರ್ನಿಮೆಂಟ್ ಎಂದು ಕರೆಯುತ್ತಾರೆ. ಇಂತಹಾ ಪಂದ್ಯಾಟಗಳಿಗೆ ತರಬೇತಿ ನೀಡುವ ಕಾಲೇಜುಗಳೂ ವಿದೇಶಗಳಲ್ಲಿ ಹುಟ್ಟಿಕೊಂಡಿವೆ. ಅವುಗಳು ಯುವಕರನ್ನು ಈ-ಸ್ಪೋಟ್ಸ್ ಪಂದ್ಯಗಳಿಗೆ ಸಜ್ಜುಗೊಳಿಸುವ ಕೆಲಸವನ್ನು ಮಾಡುತ್ತವೆ.

ವೀಡಿಯೋ ಗೇಮ್ಗಳನ್ನು ಆಡುವುದರಿಂದ ಹಲವಾರು ಲಾಭಗಳೂ ಇವೆ. ಗೇಮ್ಗಳನ್ನು ಆಡುವುದರಿಂದ ಆಟಗಾರರಲ್ಲಿ ಆಡುವಾಗ ಬಳಸುವ ತಂತ್ರಗಳನ್ನು ನಿಜಜೀವನದಲ್ಲಿ ಬಳಸುವಂತೆ ಪ್ರೇರೇಪಿಸುತ್ತದೆ. ಕೆಲವೊಂದು ಗೇಮ್ ಗಳನ್ನು ಮಕ್ಕಳ ಬುದ್ದಿಮತ್ತೆಯನ್ನು ಹೆಚ್ಚಿಸಲೆಂದೇ ರಚಿಸಲಾಗುತ್ತದೆ. ಅವುಗಳಿಂದ ಮಕ್ಕಳ ಬುದ್ಧಿಮತ್ತೆಯೂ ಬೆಳವಣಿಗೆಯಾಗುತ್ತದೆ. ಕೆಲವೊಮ್ಮೆ ಗೇಮ್ಗಳು ಸಮಯವನ್ನು ಕಳೆಯಲು ತುಂಬಾ ಒಂದು ಒಳ್ಳೆಯ ದಾರಿಯಾಗಿರುತ್ತದೆ. ಆದರೆ ಅದು ಮಿತಿಮೀರಿ ಹೋದರೆ ಹಾನಿಯನ್ನು ಉಂಟುಮಾಡುತ್ತದೆ.

ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬಂತೆ ಅತಿಯಾಗಿ ಗೇಮ್ಗಳನ್ನು ಆಡುವುದರಿಂದ ಹಲವಾರು ಸಮಸ್ಯೆಗಳು ಕಂಡುಬರುತ್ತವೆ. ಗೇಮ್ಗಳನ್ನು ಅತಿಯಾಗಿ ಆಡುವುದರಿಂದ ಮಾನಸಿಕ ಆರೋಗ್ಯ ಹದಗೆಡುತ್ತದೆ. ಅತಿಯಾಗಿ ಸ್ಕ್ರೀನ್ಅನ್ನು ನೋಡುವುದರಿಂದ ಕಣ್ಣಿನ ಆರೋಗ್ಯವೂ ಹದಗೆಡುತ್ತದೆ. ಇನ್ನು ಕೆಲವು ಮಕ್ಕಳು ಓದುವ ಕಾಲದಲ್ಲಿ ಓದದೆ ಗೇಮ್ಗಳನ್ನು ಆಡಿ ತಮ್ಮ ಭವಿಶ್ಯವನ್ನೇ ಹಾಳುಮಾಡುತ್ತಾರೆ.

ಮೊಬೈಲ್ ಗೇಮ್ಗಳು ಬಂದ ಬಳಿಕ ಮಕ್ಕಳು ಹೊರಾಂಗಣ ಆಟಗಳನ್ನು ಆಡುವುದನ್ನು ಬಿಟ್ಟಿದ್ದಾರೆ. ಹೊರಾಂಗಣ ಆಟಗಳನ್ನು ಆಡುವುದರಿಂದ ಮಕ್ಕಳು ದೈಹಿಕವಾಗಿ ಹಾಗು ಮಾನಸಿಕವಾಗಿ ಸಧೃಡರಾಗುತ್ತಾರೆ. ಆದರೆ ಇಂದು ಮಿತಿಮೀರಿ ವೀಡಿಯೋ ಗೇಮ್ಗಳನ್ನು ಆಡುವುದರಿಂದ ಮಕ್ಕಳು ಅದರ ದಾಸರಾಗುತ್ತಿದ್ದಾರೆ.

ಗೇಮ್ಗಳು ಮಕ್ಕಳನ್ನು ಮಾತ್ರವಲ್ಲದೆ ಇಂದಿನ ಯುವಕರನ್ನೂ ದಾರಿತಪ್ಪಿಸುತ್ತಿದೆ. ಆನ್ಲೈನ್ನಲ್ಲಿ ರಮ್ಮಿ ಸೇರಿದಂತೆ ಹಲವಾರು ಜೂಜಾಟಗಳಲ್ಲಿ ದುಡ್ಡನ್ನು ಸುರಿದು ತಮ್ಮ ಜೀವನವನ್ನು ಹಾಳುಮಾಡುತ್ತಿದ್ದಾರೆ. ಕೆಲವರು ಅವುಗಳ ವ್ಯಸನಕ್ಕೆ ತುತ್ತಾಗಿದ್ದಾರೆ ಎನ್ನಬಹುದು.

ಪ್ರತಿಯೊಂದಕ್ಕೂ ಸಾಧಕ ಭಾದಕಗಳು ಇದ್ದೇ ಇರುತ್ತವೆ. ಗೇಮ್ಗಳು ಅವುಗಳಿಂದೇನೂ ಹೊರತಾಗಿಲ್ಲ. ಗೇಮ್ಗಳಿಗೂ ಉಪಯೋಗಗಳು ಹಾಗು ದುಷ್ಪರಿಣಾಮಗಳು ಇವೆ. ಗೇಮ್ಗಳನ್ನು ಇತಿಮಿತಿಯಲ್ಲಿ ಆಡಿದರೆ ಉತ್ತಮ. ಮಿತಿಮೀರಿ ಹೋದರೆ ಅದು ಹಾನಿಯನ್ನು ಉಂಟುಮಾಡುತ್ತವೆ. ಗಾಗಾಗಿ ಅವುಗಳನ್ನು ಇತಿ ಮಿತಿಯಲ್ಲಿ ಬಳಸೋಣ. ನಮ್ಮ ಸುಂದರ ಭವಿಶ್ಯವನ್ನು ರೂಪಿಸೋಣ.

                                                                                                                                                       ಕಿಶನ್

                                                                                                                          ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರ ಉಜಿರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು