Bengaluru 22°C
Ad

ಮತ್ತೆ ಪುಟಿದೆದ್ದ ಷೇರು ಮಾರುಕಟ್ಟೆ; ಕಾರಣ ಪಿಎಂ ಮೋದಿ

Stock

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹಿನ್ನಡೆ ಅನುಭವಿಸುತ್ತಿದ್ದಂತೆ ಕಳೆದ ದಿನ ಶೇರು ಮಾರುಕಟ್ಟೆ ಡಿಢೀರ್‌ ಕುಸಿತ ಕಂಡಿತ್ತು.

ಆದರೆ ಇಂದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ 1.95 ರಷ್ಟು ಏರಿಕೆಯಾಗಿ 73,486.14ಕ್ಕೆ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 1.91 ರಷ್ಟು ಏರಿಕೆಯಾಗಿ 22,303.40 ಮಟ್ಟದಲ್ಲಿದೆ.

ಕಳೆದ ಬಾರಿ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಎನ್‌ಡಿಎ ಒಕ್ಕೂಟ ಕೇವಲ 291 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಅಲ್ಲದೇ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ನಿನ್ನೆ ಫಲಿತಾಂಶ ಹೊರಬೀಳುತ್ತಿದ್ದಂತೆ ಪವರ್ ಫೈನಾನ್ಸ್ ಕಾರ್ಪೊರೇಷನ್ ಷೇರುಗಳು ಭಾರೀ ಕುಸಿತ ಕಂಡಿವೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರುವ ಹಿನ್ನೆಲೆಯಲ್ಲಿ ಷೇರು ದರಗಳು ಕುಸಿದು ಹೂಡಿಕೆದಾರರಿಗೆ ಸುಮಾರು 40 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಪಕ್ಕಾ ಆಗುತ್ತಿದ್ದಂತೆ ನಿಫ್ಟಿಯಲ್ಲಿ ONGC, M&M, BPCL, HUL, ಟಾಟಾ ಸ್ಟೀಲ್ ಪ್ರಮುಖ ಲಾಭ ಗಳಿಸಿವೆ.

ಮತ ಎಣಿಕೆಯ ಆರಂಭದಲ್ಲಿ ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು ಶೇಕಡಾ 3.03ರಷ್ಟು ಕುಸಿದು 22,557 ಕ್ಕೆ ತಲುಪಿದೆ ಮತ್ತು ಎಸ್ ಆಂಡ್ ಪಿ ಬಿಎಸ್ಇ ಸೆನ್ಸೆಕ್ಸ್ ಶೇಕಡಾ 3ರಷ್ಟು ಕುಸಿದು 74,107ಕ್ಕೆ ಇಳಿದಿತ್ತು. ಆದರೆ ಇಂದು ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದೆ.

 

Ad
Ad
Nk Channel Final 21 09 2023
Ad