Ad

ರಾಜ್ಯಕ್ಕೆ ಸರ್ಕಾರ ಶಾಕ್‌ : ಪೆಟ್ರೋಲ್‌, ಡಿಸೇಲ್‌ ದರದಲ್ಲಿ 3 ರೂ. ಏರಿಕೆ

ಇದೀಗ ಸಿದ್ಧರಾಮಯ್ಯ ಸರ್ಕಾರ ಜರಿಗೆ ಶಾಕ್‌ ನೀಡಿದ್ದು ಪೆಟ್ರೋಲ್‌, ಡಿಸೇಲ್‌ ದರದಲ್ಲಿ 3 ರೂ. ಏರಿಕೆ ಮಾಡಿದೆ. ಸರ್ಕಾರ ರಾಜ್ಯದ ಜನರಿಗೆ ಐದು ಉಚಿತ ಗ್ಯಾರಂಟಿಗಳನ್ನು ನೀಡಿರುವ ಹಿನ್ನಲೆ ಮದ್ಯ ಮತ್ತು ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಿಸಿ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿತ್ತು. ಆದರೆ ಈಗ ಮತ್ತೊಂದರಲ್ಲೂ ಏರಿಕೆ ಮಾಡಿದೆ.

ಬೆಂಗಳೂರು:  ಇದೀಗ ಸಿದ್ಧರಾಮಯ್ಯ ಸರ್ಕಾರ ಜರಿಗೆ ಶಾಕ್‌ ನೀಡಿದ್ದು ಪೆಟ್ರೋಲ್‌, ಡಿಸೇಲ್‌ ದರದಲ್ಲಿ 3 ರೂ. ಏರಿಕೆ ಮಾಡಿದೆ. ಸರ್ಕಾರ ರಾಜ್ಯದ ಜನರಿಗೆ ಐದು ಉಚಿತ ಗ್ಯಾರಂಟಿಗಳನ್ನು ನೀಡಿರುವ ಹಿನ್ನಲೆ ಮದ್ಯ ಮತ್ತು ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಿಸಿ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿತ್ತು. ಆದರೆ ಈಗ ಮತ್ತೊಂದರಲ್ಲೂ ಏರಿಕೆ ಮಾಡಿದೆ.

Ad
300x250 2

, ಕರ್ನಾಟಕದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಂದು ಲೀಟರ್‌ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೆಟ್ರೋಲ್‌ ಹಾಗೂ ಡೀಸೆಲ್‌ ಮಾರಾಟ ಬೆಲೆಯನ್ನು ಏರಿಕೆ ಮಾಡಿದ್ದು ಒಂದು ಲೀಟರ್‌ ಡೀಸೆಲ್‌ಗೆ ರಾಜ್ಯದ ಜನ 89.20 ರೂ. ನೀಡಬೇಕಾದರೆ, ಲೀಟರ್‌ ಪೆಟ್ರೋಲ್‌ಗೆ 103 ಆಗಲಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಪೆಟ್ರೋಲ್‌ಗೆ ರಾಜ್ಯ ಸರ್ಕಾರವು ಇದುವರೆಗೆ ಶೇ.25.92ರಷ್ಟು ಮಾರಾಟ ತೆರಿಗೆ ವಿಧಿಸುತ್ತಿತ್ತು. ಈಗ ಶೇ.3.9ರಷ್ಟು ಹೆಚ್ಚಳ ಮಾಡಿದ್ದು, ಇನ್ನು ಮುಂದೆ ಒಟ್ಟು ಶೇ.29.84ರಷ್ಟು ತೆರಿಗೆ ವಸೂಲಿ ಮಾಡಲಿದೆ. ಇನ್ನು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ.4.1ರಷ್ಟು ಏರಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಇನ್ನು ಶೇ.18.44ರಷ್ಟು ತೆರಿಗೆ ವಸೂಲಿ ಮಾಡಲಿದೆ.

 

Ad
Ad
Nk Channel Final 21 09 2023
Ad