Ad

ಬಾಂಗ್ಲಾ ತಂಡವನ್ನು ಸೋಲಿಸಿ ಸೆಮಿಫೈನಲ್‌ಗೇರಿದ ಟೀಂ ಇಂಡಿಯಾ!

ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ 2024ರ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ಭಾರತ 196 ರನ್ ಗಳಿಸುವ ಮೂಲಕ ಭರ್ಜರಿ ಜಯ ಗಳಿಸಿದೆ.

ನಾರ್ತ್ ಸೌಂಡ್: ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ 2024ರ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ಭಾರತ 196 ರನ್ ಗಳಿಸುವ ಮೂಲಕ ಭರ್ಜರಿ ಜಯ ಗಳಿಸಿದೆ.

Ad
300x250 2

ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟ್ ಬೀಸಿದ ಭಾರತ ಒಟ್ಟು 20 ಓವರ್‌ಗಳಲ್ಲಿ 196 ರನ್ ಗಳಿಸಿ ಬಾಂಗ್ಲಾದೇಶಕ್ಕೆ 197 ರನ್‌ಗಳ ಗುರಿ ನೀಡಿತು. 197 ರನ್‌ಗಳ ಬೆನ್ನಟ್ಟಿದ ಬಾಂಗ್ಲಾ 20 ಓವರ್‌ಗಳಲ್ಲಿ 146 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿದೆ.

ಭಾರತ ತಂಡದಿಂದ ಓಪನಿಂಗ್ ಬ್ಯಾಟ್ಸ್ಮನ್‌ಗಳಾಗಿ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದರು. 11 ಎಸೆತಗಳಿಗೆ 23 ರನ್ ಸಿಡಿಸಿ ರೋಹಿತ್ ಶರ್ಮಾ ಔಟಾಗುವ ಮೂಲಕ ಟೀಂ ಇಂಡಿಯಾದ ಮೊದಲ ವಿಕೆಟ್ ಪತನಗೊಂಡಿತು.

11 ಬಾಲ್‌ಗಳಲ್ಲಿ ರೋಹಿತ್ ಶರ್ಮಾ 3 ಫೋರ್ ಹಾಗೂ 1 ಸಿಕ್ಸ್ ಸಿಡಿಸಿ ಒಟ್ಟು 23 ಅಂಕಗಳನ್ನು ತಂಡಕ್ಕೆ ಗಳಿಸಿಕೊಟ್ಟರು. ವಿರಾಟ್ ಕೊಹ್ಲಿ 28 ಬಾಲ್‌ಗಳಿಗೆ ಒಟ್ಟು 37 ರನ್ ಸಿಡಿಸಿ 2ನೇ ವಿಕೆಟ್ ಬಿಟ್ಟುಕೊಟ್ಟರು.

ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಮೊದಲ ಎಸೆತಕ್ಕೆ ಸಿಕ್ಸ್ ಬಾರಿಸಿ ಎರಡನೇ ಬಾಲ್ ಅನ್ನು ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡುವ ಮೂಲಕ ಒಟ್ಟು 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ರಿಷಭ್ ಪಂತ್ 4 ಫೋರ್ ಹಾಗೂ 2 ಸಿಕ್ಸ್ ಸಿಡಿಸಿ 24 ಬಾಲ್‌ಗಳಿಗೆ ಒಟ್ಟು 36 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಕ್ರೀಸ್‌ಗೆ ಮರಳಿದ ಶಿವಂ ದುಬೆ 24 ಎಸೆತಗಳಿಗೆ 34 ರನ್ ಸಿಡಿಸಿ ಔಟಾದರು. ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟವಾಡಿ ತಂಡಕ್ಕೆ 54 ರನ್ ಗಳಿಸಿಕೊಟ್ಟರು. ಅಕ್ಷರ್ ಪಟೇಲ್ 5 ಎಸೆತಗಳಿಗೆ 3 ರನ್ ಗಳಿಸಿ ಔಟಾಗದೇ ಆಟವನ್ನು ಕೊನೆಗೊಳಿಸಲು ಸಹಕರಿಸಿದರು. ಹಾರ್ದಿಕ್ ಪಾಂಡ್ಯ ಕೊನೆಯ 1 ಬಾಲ್‌ನಲ್ಲಿ ಫೋರ್ ಸಿಡಿಸಿ 27 ಎಸೆತಗಳಿಗೆ ಅರ್ಧಶತಕ ಪೂರ್ಣಗೊಳಿಸಿ ಔಟಾಗದೇ ಆಟವನ್ನು ಕೊನೆಗೊಳಿಸಿ ಬಾಂಗ್ಲಾದೇಶಕ್ಕೆ 197 ರನ್‌ಗಳ ಗುರಿ ನೀಡಿದರು.

197 ರನ್‌ಗಳ ಬೆನ್ನಟ್ಟಿದ ಬಾಂಗ್ಲದೇಶ 20 ಓವರ್‌ಗಳಲ್ಲಿ 146 ರನ್ ಗಳಿಸಿ ಸೋಲನ್ನಪ್ಪಿತು. ಓಪನಿಂಗ್ ಬ್ಯಾಟ್ಸ್ಮೆನ್‌ಗಳಾಗಿ ಲಿಟನ್ ದಾಸ್ ಹಾಗೂ ತಂಜೀದ್ ಹಸನ್ ಬ್ಯಾಟ್ ಬೀಸಿದರು. 10 ಎಸೆತಗಳಿಗೆ 13 ರನ್ ಗಳಿಸಿ ಲಿಟನ್ ದಾಸ್ ಔಟಾದರು. 4.3 ಓವರ್‌ಗಳಿಗೆ ಬಾಂಗ್ಲಾ ಮೊದಲ ವಿಕೆಟ್ ಕಳೆದುಕೊಂಡಿತು. ಲಿಟನ್ ದಾಸ್ ಅವರನ್ನು ಔಟ್ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ಭಾರತಕ್ಕೆ ಮೊದಲ ಯಶಸ್ಸನ್ನು ನೀಡಿದರು.

ತಂಜೀದ್ ಹಸನ್ 31 ಎಸೆತಗಳಿಗೆ 29 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ತೌಹಿದ್ ಹೃದೋಯ್ 6 ಬಾಲ್‌ಗಳಿಗೆ 4 ರನ್ ಸಿಡಿಸಿ ವಿಕೆಟ್ ಬಿಟ್ಟುಕೊಟ್ಟರು. ಇವರ ಬಳಿಕ ಶಕೀಬ್ ಅಲ್ ಹಸನ್ 7 ಎಸೆತಗಳಿಗೆ 11 ರನ್ ಗಳಿಸಿ ಔಟಾದರು. ಬೂಮ್ರಾ ಮಾರಕ ಬೌಲಿಂಗ್‌ಗೆ ಬಾಂಗ್ಲಾ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂಟೋ 32 ಎಸೆತಗಳಲ್ಲಿ 40 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.

ಜಾಕಿರ್ ಅಲಿ 4 ಎಸೆತಗಳಿಗೆ ಕೇವಲ 1 ರನ್, ರಶೀದ್ ಹೊಸೈನ್ 24 ರನ್, ಮಹಮ್ಮದುಲ್ಲಾ 15 ಬಾಲ್‌ಗಳಿಗೆ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಔಟಾಗದೆ ಮೆಹದಿ ಹಸನ್ 5 ರನ್ ಹಾಗೂ ತಂಜೀಮ್ ಹಸನ್ ಶಕೀಬ್ 1 ರನ್‌ಗಳಿಸಿ ಆಟವನ್ನು ಕೊನೆಗೊಳಿಸಿದರು.

Ad
Ad
Nk Channel Final 21 09 2023
Ad