ಬೆಂಗಳೂರು: ಜೈ ಬಾಂಗ್ಲಾ ಎಂದು ಘೋಷಣೆ ಕೂಗಿದ್ದ ಮಹಿಳೆಯನ್ನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಹುಲಿಮಂಗಲದಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರನ್ನ ತೆರವು ಕಾರ್ಯಾಚರಣೆ ಮಾಡ್ತಿದ್ದ ವೇಳೆ ಶರ್ಬಾನು ಖತನ್ ಜೈ ಬಾಂಗ್ಲಾ ಅಂತ ಕೂಗಿದ್ದಾಳೆ.
ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಿಳೆಯನ್ನ ಬಂಧಿಸಿದ್ದಾರೆ. ಸದ್ಯ ಬಂಧಿಸಿರುವ ಪೊಲೀಸರು ಆಕೆಯನ್ನ ತೀವ್ರ ವಿಚಾರಣೆ ನಡೆಸ್ತಿದ್ದಾರೆ.
ಆಕೆಯ ಮೂಲ ಯಾವುದು? ಸ್ವಯಂ ಪ್ರೇರಿತವಾಗಿ ಕೂಗಿದ್ದಾ? ಅಥವಾ ಇದರ ಹಿಂದೆ ಯಾರಾದರೂ ಇದ್ದಾರಾ ಅನ್ನೋದ್ರ ಬಗ್ಗೆಯೂ ಚರ್ಚೆ ಆರಂಭಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

