ಮಂಗಳೂರು: ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು, ಸೇಂಟ್ ಅಲೋಶಿಯಸ್ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ, 1974, 75 ಮತ್ತು 76 ಬ್ಯಾಚ್‌ಗಳ ಸುವರ್ಣ ಪುನರ್ಮಿಲನ ಮತ್ತು ಘಟಿಕೋತ್ಸವ ಸಮಾರಂಭವನ್ನು ಜನವರಿ 11, 2026 ರಂದು ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ಆಯೋಜಿಸಿತ್ತು.

ಕಾರ್ಯಕ್ರಮವು ಬೆಳಿಗ್ಗೆ 8:30ಕ್ಕೆ ಸಾಂಕೇತಿಕ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡಿತು. ಗೋಲ್ಡನ್ ರಿಯೂನಿಯನ್ 2026 ರ ಅಧ್ಯಕ್ಷರಾದ ಶ್ರೀ ಸುನಿಲ್ ಕುಂದರ್ ಕೆ. ಸ್ವಾಗತಿಸಿದರು. ಹಳೆಯ ವಿದ್ಯಾರ್ಥಿಗಳ ಜೀವಮಾನದ ಸಾಧನೆಗಳು ಮತ್ತು ಅವರು ತಮ್ಮ ಮಾತೃಸಂಸ್ಥೆಗೆ ಮರಳಿದ್ದಕ್ಕಾಗಿ ಹೆಮ್ಮೆ ವ್ಯಕ್ತಪಡಿಸಿದರು.

ಶ್ರೀ ಐವನ್ ಡಿ. ಫ್ರಾಂಕ್ (1976 ರ ವಾಣಿಜ್ಯ ಬ್ಯಾಚ್) ಮುಖ್ಯ ಭಾಷಣ ಮಾಡಿ, ಸಂಸ್ಥೆಯು ದಶಕಗಳಲ್ಲಿ ಕಾಲೇಜಿನಲ್ಲಿ ತಂದ ಮೌಲ್ಯಗಳು ಮತ್ತು ವಿಕಸನದ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮವನ್ನು ಗೌರವಾನ್ವಿತ ಅತಿಥಿ ಡಾ. ಬಿ. ಸತೀಶ್ ಕುಮಾರ್ ಭಂಡಾರಿ (ಉಪಾಧ್ಯಕ್ಷರು, ಐಎಸ್ಆರ್, ನಿಟ್ಟೆ ವಿಶ್ವವಿದ್ಯಾಲಯ) ಮತ್ತು ಅಲೋಶಿಯಸ್ ವಿವಿಯ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್‌ಜೆ ಅಧ್ಯಕ್ಷತೆ ವಹಿಸಿದ್ದರು.

ಈ ಸಮಾರಂಭದಲ್ಲಿ 1974, 1975, 1976 ಮತ್ತು 1970 (ಎಸ್‌ಎಸ್‌ಸಿ) ಮತ್ತು 1971 (ಪಿಯುಸಿ) ಬ್ಯಾಚ್‌ಗಳು; 3 ನಿವೃತ್ತ ಶಿಕ್ಷಕರು ಮತ್ತು 1975-76ರ ಒಬ್ಬ ಗ್ರಂಥಪಾಲಕರನ್ನು ಸಹ ಗೌರವಿಸಲಾಯಿತು. ಅಲ್ಲದೆ ಶಿಕ್ಷಣ ಘಟಿಕೋತ್ಸ್ವದ 50 ವರ್ಷಗಳನ್ನು ಪೂರೈಸಿದ ಪ್ರತಿಯೊಬ್ಬ ಸದಸ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಔಪಚಾರಿಕ ಕಾರ್ಯಕ್ರಮವನ್ನು ಡಾ. ಸೆವೆರಿನ್ ಪಿಂಟೊ ಮತ್ತು ಶ್ರೀ ಅಭಿಷೇಕ್ ಶೆಟ್ಟಿ ಅವರು ನಿರೂಪಿಸಿದರು. ಸಂಯೋಜಕ ಡಾ. ದಿನೇಶ್ ನಾಯಕ್ ವಂದಿಸಿದರು.