Showing 20 of 20367 articles • Page 72 of 1019
: ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿಯಲ್ಲಿ ವಾಮಾಚಾರ ನಡೆದಿದ್ದು, ಬೆಳ್ಳಂಬೆಳಿಗ್ಗೆ ತರಗನಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸ್ಥಾಪಿಸಿರುವ ಸುಶಾನ್ ಟ್ರಸ್ಟ್ ಕೊಡ್ಲಾಡಿ ಇದರ ವತಿಯಿಂದ ಕಿರುಚಿತ್ರ ಬಿಡುಗಡೆ, ವಿಚಾರಗೋಷ್ಠಿ ಹಾಗು ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಮೇ 30 ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ನ ಸಂಚಾಲಕ ಕಿರಣ್ ಶೆಟ್ಟಿ ಕೊಡ್ಲಾಡಿ ತಿಳಿಸಿದ್ದಾರೆ.
ಎಂಸಿಸಿ ಬ್ಯಾಂಕ್ನ ಸಂತೇಕಟ್ಟೆ ಶಾಖೆಯು ಪ್ರಾರಂಭವಾದ ಕೇವಲ ಏಳು ತಿಂಗಳ ಅವಧಿಯಲ್ಲೇ ₹10 ಕೋಟಿ ವ್ಯವಹಾರ ವಹಿವಾಟು ಸಾಧಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗುತ್ತಿರುವ ಬಗ್ಗೆ ಭೋವಿ ಯುವ ಮುಖಾಂಡ ಹೋರಾಟಕ್ಕೆ ಇಳಿದಿದ್ದು ಈ ಸಮಸ್ಯೆಯ ಮಾನವೀಯ ಮೇರೆಗೆ ಜಿಲ್ಲೆಗೆ 3 ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದು ಕಾರಣಾಂತರಗಳಿಂದ ಪ್ರವಾಸ ರದ್ದು ಆಗಿರುತ್ತದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿರುವ ಆರು ಸ್ಪೀಡ್ ರ್ಯಾಡರ್ ಕ್ಯಾಮೆರಾಗಳು ಕಳೆದ ಒಂದು ವಾರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 46,753 ವಾಹನಗಳನ್ನು ಪತ್ತೆ ಹಚ್ಚಿವೆ.
ನೂತನ ಮಂತ್ರಿಮಂಡಲದಲ್ಲಿ ಎಂಎಲ್ ಸಿ ಮಂಜುನಾಥ ಭಂಡಾರಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕುಂದಾಪುರ ಯೂತ್ ಕಾಂಗ್ರೆಸ್ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಆಗ್ರಹಪಡಿಸಿದೆ.
ಮಳೆಗಾಲದ ಪೂರ್ವ ತಯಾರಿ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೊಳ್ಳುವಲ್ಲಿ ಉಡುಪಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಆರೋಪಿಸಿದರು.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಆರೋಪಿಗ ನ್ನು ಬಂಧಿಸಿ ಆರೋಪಿಗಳಿಂದ ಕಳವಾದ ಬೈಕ್ ಹಾಗೂ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡ ಘಟನೆ ಮುಲ್ಕಿ ಪೊಲೀಸರಿಂದ ನಡೆದಿದೆ.
ಇತ್ತೀಚೆಗೆ ನಗರದ ಕೋಡಿಕಲ್ ಬಳಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದ ಎರಡು ದಶಕಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಫೆರೋಕ್ ಸಮೀಪದ ಕೊಡಂಪುಳ ನಿವಾಸಿ ಅಬ್ದುಲ್ ರಹೀಮ್ ಬಿಡುಗಡೆಗೆ ಸಂಬಂಧಿಸಿದ ಅಧಿಕೃತ ಆದೇಶಕ್ಕೆ ಸೌದಿ ಅಧಿಕಾರಿಗಳು ಸಹಿ ಹಾಕಿದ್ದಾರೆ
ನಗರದ ಬಾವುಟಗುಡ್ಡದ ಈದ್ಧಾ ಮಸ್ಟಿದ್ದಲ್ಲಿ ದ.ಕ.ಜಿಲ್ಲಾ ಖಾಝಿ ಅಲ್ಲಾಝ್ ತ್ವಾಖಾ ಅಹ್ಮದ್ ಮುಸ್ಲಿಯಾರ್ರ ನೇತೃತ್ವದಲ್ಲಿ ಖುತುಬಾ ಪಾರಾಯಣ ಮತ್ತು ಝೀನತ್ ಬಕ್ಸ್ ಮಸ್ಟಿದ್ನ ಖತೀಬ್ ಸೈಯದ್ ಶಂಶುದ್ದೀನ್ ಬಾಸಿತ್ ಬಾ ಅಲವಿ ತಂಜಳ್ ಅಲ್ ಅನ್ಸಾರಿ ನೇತೃತ್ವದಲ್ಲಿ ಈದ್ ನಮಾಝ್ ನಡೆಯಿತು.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ವಿಸ್ತರಣೆ ಕಾಮಗಾರಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಕೆಲವು ಪ್ರಮುಖ ರೈಲುಗಳ ಸಂಚಾರವನ್ನು ದಾದರ್ ಮತ್ತು ಠಾಣೆ ನಿಲ್ದಾಣಗಳಲ್ಲೇ ಭಾಗಶಃ ರದ್ದುಗೊಳಿಸುವ ಅವಧಿಯನ್ನು ಮಧ್ಯ ರೈಲ್ವೆಯು ಮತ್ತಷ್ಟು ವಿಸ್ತರಿಸಿದೆ.
ಗುರುವಾಯನಕೆರೆಯಿಂದ ಮೂಡಬಿದಿರೆ ಕಡೆಗೆ ಕಾರಿನಲ್ಲಿ ನಿಷೇಧಿತ MDMA ಮಾದಕವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಕ್ರಿಕೆಟ್ ಪ್ರೇಮಿಗಳಿಗೆ ಕ್ರೀಡಾಂಗಣದ ಅನುಭವವನ್ನು ನೀಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಬಿಸಿಸಿಐ ವತಿಯಿಂದ ‘ಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ (TATA IPL Fan Park) ಆಯೋಜಿಸಲಾಗಿದೆ ಎಂದು ಬಿಸಿಸಿಐ ಪ್ರತಿನಿಧಿ ವಿಕಾಸ್ ಪಂಡಿತ್ ತಿಳಿಸಿದ್ದಾರೆ.
ಮೇ ತಿಂಗಳ ಕೊನೆಯವಾರದಲ್ಲಿ ಕೇರಳಕ್ಕೆ ಪ್ರವೇಶಿಸಬೇಕಿದ್ದ ಮುಂಗಾರು ಮಳೆ ಈ ಬಾರಿ ಇನ್ನೂ ಎಂಟ್ರಿ ಕೊಟ್ಟಿಲ್ಲ. ಈಗಾಗಲೇ ಎಲ್ ನಿನೋ ಪ್ರಭಾವದಿಂದ ಈ ಬಾರಿ ಮುಂಗಾರು ಮಳೆಯಲ್ಲಿ ಅಭಾವ ಉಂಟಾಗಲಿದೆ ಎಂದು ಹವಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
ಹಲವಾರು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕ ಭವನದಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.
ಮಂಗಳೂರು ನಗರದ ಕೆಲವು ಪ್ರಮುಖ ಸಿಟಿ ಬಸ್ ಮಾರ್ಗಗಳ ಬದಲಾವಣೆ ಮತ್ತು ವಿಸ್ತರಣೆಯ ಅಗತ್ಯತೆ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಬರೆದಿರುವ ಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಕೇಂದ್ರ ಸರಕಾರ ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ಧದ ನೆಪಹೇಳಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಸಿಎನ್ಜಿ ಬೆಲೆಗಳನ್ನು ಪ್ರತಿದಿನದಂತೆ ಏರಿಸುತ್ತಿದ್ದು, ಇದರಿಂದ ಇತರ ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಅಗಾಧವಾಗಿ ಏರಲಿದೆ. ಈಗಲೇ ಜೀವನ ನಡೆಸಲು ಕಷ್ಟ ಪಡುತ್ತಿರುವ ಜನಸಾಮಾನ್ಯರು ಕಂಗಾಲಾಗಲಿದ್ದಾರೆ.
ಪತಿ ತನ್ನ ಪತ್ನಿಯನ್ನೇ ಸ್ನೇಹಿತರಿಗೆ 50 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.