Showing 20 of 20689 articles • Page 618 of 1035
ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬವನ್ನು ವಿರೋಧಿಸಿ ಇಂದ್ರಾಳಿ ಸೇತುವೆ ಹೋರಾಟ ಸಮಿತಿ ಇದೇ ಅ. 29ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಇಂದ್ರಾಳಿ ಸೇತುವೆ ಹೋರಾಟ ಸಮಿತಿಯ ಸಂಚಾಲಕ ಅಮೃತ್ ಶೆಣೈ ಹೇಳಿದರು.
ಕಾರಿನಲ್ಲಿ ಬಂದು ಶಸ್ತ್ರಾಸ್ತ್ರಗಳೊಂದಿಗೆ ಮನೆಯೊಳಗೆ ನುಗ್ಗಿ, ಇಬ್ಬರು ಮಕ್ಕಳನ್ನು ಅಪಹರಿಸಿ ಪರಾರಿಯಾಗಿರುವ ಇಬ್ಬರು ಅಪಹರಣಕಾರರಿಗಾಗಿ ಬೆಳಗಾವಿ ಪೊಲೀಸರು ಶೋಧ ಆರಂಭಿಸಿದ್ದಾರೆ.
ತಪಾಸಣೆಗೆಂದು ವಾಹನವನ್ನು ನಿಲ್ಲಿಸಲು ಯತ್ನಿಸಿದ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯಲ್ಲಿ 3 ಸಾವಿರ ರೂ. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯದಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ರೈತರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಸಂಗೀತ ಸಭಾದ ವತಿಯಿಂದ ಪದ್ಮ ಭೂಷಣ ಪುರಸ್ಕೃತ ಪಂಡಿತ್ ರಾಜನ್ ಮಿಶ್ರಾಜೀ ಅವರ ಸ್ಮರಣೆಯ ಅಂಗವಾಗಿ ಇದೇ ಅಕ್ಟೋಬರ್ 28ರಂದು ಸಂಜೆ 5.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಗೀತಾ ಸಭಾದ ಅಧ್ಯಕ್ಷ ರಂಗ ಪೈ ತಿಳಿಸಿದರು.
ಲೊಂಬಾರ್ಡ್ ಆಸ್ಪತ್ರೆಯ 101ನೇ ವಾರ್ಷಿಕೋತ್ಸವ ಹಾಗೂ ಉಡುಪಿ ರನ್ನರ್ಸ್ ಕ್ಲಬ್ನ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಲೊಂಬಾರ್ಡ್ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡುವ ಧೈಯದೊಂದಿಗೆ “ಉಡುಪಿ ಮ್ಯಾರಥಾನ್-2024” ನ್ನು ಡಿಸೆಂಬರ್ 1ರಂದು ಮಲ್ಪೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶಿಲ್ ಜತ್ತನ್ನ ಹೇಳಿದರು.
ಅಂಗವಿಕಲರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಇದೇ ಅ. 28ರಂದು 9.30ಕ್ಕೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ
ಮಂಗಳಮುಖಿಯರ ಉಪಟಳ ಕುರಿತು ಸಾರ್ವಜನಿಕರ ದೂರು ನೀಡಿದ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ರಾತ್ರೋರಾತ್ರಿ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದರು.
ಕರಿಮಣಿ ಮಾಲೀಕ ನೀನಲ್ಲ ಅಂತಾ ಗಂಡನ ಜೊತೆ ರೀಲ್ಸ್ ಮಾಡಿದ ರೀಲ್ಸ್ ರಾಣಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಗೆ ವಿಷವುಣಿಸಿ ಕೊಂದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ದೆಪ್ಪುಜೆಯಲ್ಲಿ ನಡೆದಿದೆ.
ಮಂಗಳೂರು: ಮುಸ್ಲಿಂ ಯುವಕರ ಗುಂಪಿನ ಮಧ್ಯೆ ರಣಭೀಕರ ತಲ್ವಾರು ಕಾಳಗ ನಡೆದಿದ್ದು, ಪೂರ್ವದ್ವೇಷದ ಹಿನ್ನೆಲೆಯಲ್ಲಿ ಯುವಕರ ಮೇಲೆ ರೌಡಿಶೀಟರ್ ಗಳಿಂದ ಯದ್ವಾತದ್ವಾ ತಲ್ವಾರ್ ದಾಳಿ ಮಾಡಿದ್ದು, ನಡುಬೀದಿಯಲ್ಲಿ ಯುವಕರ ಅಟ್ಟಾಡಿಸಿ ತಲ್ವಾರಿನಲ್ಲಿ ರೌಡಿ ಗ್ಯಾಂಗ್ ಕೊಚ್ಚಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಎಂಬಲ್ಲಿ ನಡೆದಿದೆ. ತಲ್ವಾರ್ ದಾಳಿಯಲ್ಲಿ ಇಬ್ಬರು ಯುವಕರ ಸ್ಥಿತಿ ಗಂಭೀರವಾಗಿದ್ದು, ತಲವಾರು ದಾಳಿಯಲ್ಲಿ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್ ತಂಡದಿಂದ ಮಾರಕ ದಾಳಿ […]
ವಿದ್ಯಾಭಾರತಿ ರಾಷ್ಟçಮಟ್ಟದ ಈಜು ಸ್ಪರ್ಧೆಯು ಅಕ್ಟೋಬರ್ 1 ರಿಂದ 4ರವರೆಗೆ ಮಧ್ಯಪ್ರದೇಶದ ಮದಸ್ಸೂರ್ನಲ್ಲಿ ನಡೆಯಿತು.
ಹಾಡಹಗಲೇ ಜನವಸತಿ ಪ್ರದೇಶದ ಮನೆಯೊಂದರ ಬಾಗಿಲು ಒಡೆದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಸಹಿತ ನಗದು ದೋಚಿ ಪರಾರಿಯಾದ ಘಟನೆ ಕುಂದಾಪುರ ಹೊರವಲಯದಲ್ಲಿರುವ ಹಂಗಳೂರು ಸಮೀಪದ ಬ್ರಹ್ಮಗುಡಿ ಎಂಬಲ್ಲಿ ನಡೆದಿದೆ.
ಹಾವು ಕಡಿದು ಮಂಜೇಶ್ವರ ನಿವಾಸಿ ಯೋರ್ವರು ಮೃತ ಪಟ್ಟ ಘಟನೆ ಮೀಯಪದವು ಎಂಬಲ್ಲಿ ನಡೆದಿದೆ.
ಉದ್ಯೋಗದ ಭರವಸೆ ನೀಡಿ ಲಕ್ಷಾಂತರ ರೂ . ವಂಚಿಸಿದ ಪ್ರಕರಣದ ಆರೋಪಿ ಯಾಗಿರುವ ಶಾಲಾ ಶಿಕ್ಷಕಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ “ಕೃಷಿ ಮೇಳ-2024” ಅನ್ನು ಇದೇ ಅ. 26 ಮತ್ತು 27ರಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ ಬಿ. ತಿಳಿಸಿದರು.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಸತತ ಕಾರ್ಯಾಚರಣೆ ಬಳಿಕ ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾಧ್ಯಮ ಸಂಶೋಧನೆ ವಿಧಾನಗಳ ಕುರಿತು ಒಂದು ದಿನದ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನಿರ್ಮಿಸಿದ ತುಳುನಾಡಿನ ಸಾಕ್ಷ್ಯಚಿತ್ರ ಪಿಲಿವೇಷ (ಹುಲಿವೇಷ) 2024ರ ಟೋಕಿಯೊ ಸಾಕ್ಷ್ಯಚಿತ್ರ ಚಲನಚಿತ್ರೋತ್ಸವ (TDFF)ಕ್ಕೆ ಅಧಿಕೃತವಾಗಿ ಆಯ್ಕೆಗೊಂಡಿದೆ.
ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಅಂಬಲಪಾಡಿ ರಾಷ್ಟೀಯ ಹೆದ್ದಾರಿ 66ರಲ್ಲಿ ಗುರುವಾರ ನಡೆದಿದೆ.
ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ʼಜೈʼ ತುಳು ಸಿನಿಮಾದ ಶೂಟಿಂಗ್ ಗುರುವಾರದಿಂದ (ಅ.24) ಆರಂಭವಾಗಿದೆ. ʼಗಿರ್ಗಿಟ್ʼ ಮತ್ತು ʼಸರ್ಕಸ್ʼ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಸಾಹಸಕ್ಕೆ ಇಳಿದಿದ್ದಾರೆ.