ನ್ಯೂಯಾರ್ಕ್​: ನ್ಯೂಯಾರ್ಕ್​ನ ಮೆಲ್ವಿಲ್ಲೆನಲ್ಲಿರುವ ಬಾಪ್ಸ್ ಶ್ರೀ ಸ್ವಾಮಿ ನಾರಾಯಣ ಮಂದಿರದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಇಂಡಿಯನ್ ನ್ಯೂಯಾರ್ಕ್​ ಇದೊಂದು ಅತ್ಯಂತ ಹೀನವಾದ ಕೃತ್ಯ. ಬಾಪ್ಸ್ ಶ್ರೀಸ್ವಾಮಿ ನಾರಾಯಣ ಮಂದಿರ ಧ್ವಂಸವನ್ನು ಯಾರೂ ಕೂಡ ಒಪ್ಪಲಾರರು. ಹಿಂದೂ ಸಮುದಾಯದೊಂದಿಗೆ ಇಂಡಿಯನ್ ನ್ಯೂಯಾರ್ಕ್ ಈಗಾಗಲೇ ಸಂಪರ್ಕವನ್ನು ಹೊಂದಿದೆ. ನಡೆದ ದುರ್ಘಟನೆಯನ್ನು ಅಮೆರಿಕಾದ ಕಾನೂನು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇನ್ನು ಬಾಪ್ಸ್ ಸ್ವಾಮಿ ನಾರಾಯಣ ಸಂಸ್ಥೆಯೂ ಕೂಡ ಮಂದಿರ ಧ್ವಂಸದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಒಂದು ಘಟನೆಯಿಂದ ಅತ್ಯಂತ ನೋವಾಗಿದೆ. ಇದು ಹಿಂದೂಗಳ ಮೇಲಿ ದ್ವೇಷವನ್ನು ಸಾರಿ ಹೇಳುತ್ತಿದೆ. ಇಂದು ಸ್ಥಳೀಯರು, ರಾಜ್ಯ ಹಾಗೂ ದೇಶದಲ್ಲಿರುವ ಸಮುದಾಯದವರೆಲ್ಲಾ ಸೇರಿ ಶಾಂತಿ ಗೌರವ ಹಾಗೂ ಒಗ್ಗಟ್ಟುತನದ ಸಂದೇಶವನ್ನ ಸಾರಿದ್ದೇವೆ ಎಂದು ಹೇಳಿದೆ.

— Hindu American Foundation (@HinduAmerican) September 16, 2024