Showing 20 of 21592 articles • Page 19 of 1080
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ವೇದಿಕೆಯನ್ನು ‘ಶುದ್ದೀಕರಣ’ ಹೆಸರಲ್ಲಿ ಅವಮಾನಿಸಿದ ಘಟನೆ ಹಾಗೂ ಇದನ್ನು ಪ್ರಶ್ನಿಸಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಉತ್ತರಾಖಂಡದ ಬಿಜೆಪಿ ಸರಕಾತವನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ದ.ಕ. ಜಿಲ್ಲಾ ಸಮಿತಿ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಬುಧವಾರ ಗಾಂಧಿ ಸತ್ಯಾಗ್ರಹ- ಧರಣಿ ನಡೆಯಿತು.
ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರಾಗಿರುವುದನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಸ್ಡಿಪಿಐ ಆಕ್ರೋಶ ವ್ಯಕ್ತಪಡಿಸಿದೆ.
ನಿಮಗೆ ರೈಫಲ್ ಕೊಟ್ಟಿದ್ದೇಕೆಂದು ಬಹಿರಂಗವಾಗಿ ಪೊಲೀಸರಲ್ಲಿ ಕೇಳುವ ಯು.ಟಿ.ಖಾದರ್ ಅವರಿಗೆ ಧಮ್, ತಾಕತ್ ಎನ್ನುವುದಿದ್ದರೆ ಭರತ್ ಕುಮ್ಡೇಲು ಬಂದಾಗ ತಲೆಗೆ ಗುಂಡು ಹೊಡೆದು ಸಾಯಿಸಲು ಹೇಳಲಿ ಎಂದು ಯಂಗ್ ಡೆಮಾಕ್ರೆಟ್ ನ ರಾಜ್ಯಾಧ್ಯಕ್ಷ ಮೂನಿಶ್ ಅಲಿ ಸವಾಲು ಹಾಕಿದ್ದಾರೆ.
ಪ್ರಧಾನಿ ಮೋದಿ 75 ನೇ ವರ್ಷದ ಸಂಭ್ರಮಾಚರಣೆಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ದ.ಕ ಯೂತ್ ಕಾಂಗ್ರೆಸ್ ನಿಂದ ವಿಭಿನ್ನ ಪ್ರತಿಭಟನೆ ನಡೆಸಲಾಯಿತು.
ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ಧರಾಮಯ್ಯ ಅವರು ಮಹಾನಗರ ಪಾಲಿಕೆ ಮತ್ತು ಸ್ವಚ್ಛ ಮಂಗಳೂರು ಆಶ್ರಯದಲ್ಲಿ ಬೀಚ್ ಕ್ಲೀನಿಂಗ್ ಮಾಡಿದರು.
ಪಡು ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲೋಕಕಲ್ಯಾಣ, ದೇಶದ ಸುಭಿಕ್ಷೆ ಹಾಗೂ ಗ್ರಾಮ–ರಾಷ್ಟ್ರಗಳ ಕ್ಷೇಮಕ್ಕಾಗಿ ಫೆಬ್ರವರಿಯಲ್ಲಿ ಸಹಸ್ರ ಚಂಡಿಕಾಯಾಗ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಕೃಷ್ಣರಾಜ್ ಭಟ್ ತಿಳಿಸಿದರು.
ಕರಾವಳಿ ಸಚಿವ ಸಂಪುಟ ಸಭೆಯಲ್ಲಿ ರೈತರು ಹಾಗೂ ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಆಗ್ರಹಿಸಿದೆ.
ಕರಾವಳಿಯ ವಿಶಿಷ್ಟ ಜನಪದ ಆಚರಣೆ ಹಾಗೂ ಕ್ರೀಡೆಯಾಗಿರುವ ಸಾಂಪ್ರದಾಯಿಕ ಕಂಬಳಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ಆಗ್ರಹಿಸಿದೆ.
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ನಿರ್ವಹಣಾ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗ (ECE),
ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ (ಕೆಸಿಎಸ್ಸಿ) ಉಡುಪಿ ಸಂಸ್ಥೆಯ 32ನೇ ವಾರ್ಷಿಕೋತ್ಸವ ಹಾಗೂ ಓಣಂ ಹಬ್ಬ ಆಚರಣೆ
ಕಟ್ಟಡ ಪರವಾನಗಿ ನೀಡುವಲ್ಲಿ ವಿಳಂಬ ಸೇರಿದಂತೆ ವಿವಿಧ ದೂರುಗಳ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿತು.
ಮುಂಬರುವ 2027ರಲ್ಲಿ ನಡೆಯುವ 5ನೇ ಆವೃತ್ತಿ ಮಹಿಳಾ ಪ್ರೀಮಿಯರ್ ಲೀಗ್ನ ವೇಳಾಪಟ್ಟಿ ಹಾಗೂ ಹರಾಜು ದಿನಾಂಕವನ್ನು WPL ಪ್ರಕಟಿಸಿದೆ.
ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕ, ನೃತ್ಯ ಕಲಾಸಿಂಧು ಕೀರ್ತಿಶೇಷ ರಾಧಾಕೃಷ್ಣ ತಂತ್ರಿ ಅವರ 91ನೇ ಜನ್ಮದಿನದ ಸ್ಮರಣಾರ್ಥವಾಗಿ ಸೆ.19ರಂದು ‘ನೃತ್ಯಾಭಿಷೇಕಂ’ ಕಾರ್ಯಕ್ರಮ
ನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರನ್ನು ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿರುವ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
ಪತಿಯೊಬ್ಬ ಪತ್ನಿ ಮೇಲೆ ಆ್ಯಸಿಡ್ ಎರಚಿ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಜೆಪಿ ನಗರದ ನಾರಾಯಣ ಕ್ಲೀನಿಕ್ ಬಳಿ ನಡೆದಿದೆ.
ರಾಜ್ಯದ ನೂತನ ಮೀನುಗಾರಿಕೆ ಹಾಗೂ ಬಂದರು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರಾವಳಿ ಭಾಗಕ್ಕೆ ಭೇಟಿ ನೀಡಿದ ಇಲಾಖಾ ಸಚಿವ ಕೆ.ಎಸ್ ಬಸವಂತಪ್ಪ ಇಂದು ಮಲ್ಪೆ ಬಂದರಿಗೆ ಭೇಟಿ ನೀಡಿ ವಿವಿಧ ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
MDCC ಬ್ಯಾಂಕ್ ಮುಂದೆ ಹುಣಸೂರು ರೈತರು ಪ್ರತಿಭಟನೆ ನಡೆಸಿದರು. ಸಾಲ ನೀಡದ MDCC ಬ್ಯಾಂಕ್ ಕಾರ್ಯವೈಖರಿಗೆ ಬೇಸತ್ತು ವಿಷ ಕುಡಿಯಲು ರೈತರು ಮುಂದಾದರು.
ಪ್ರತಾಪ್ ಸಿಂಹ ವಿರುದ್ಧ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
10 ತಿಂಗಳ ಹಿಂದೆ ನಡೆದ ಮಣಿಪಾಲದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಿರುಕುಳ ನೀಡಿದ ಆರೋಪದಡಿ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ತುಳು ರಾಜ್ಯ ಭಾಷೆ ಬಿಜೆಪಿ ಬೇಡಿಕೆ ವಿಚಾರವಾಗಿ ಮಾಜಿ ಸಚಿವ ರಮಾನಾಥ್ ರೈ ವಾಗ್ದಾಳಿ ನಡೆಸಿದರು.