Showing 20 of 21629 articles • Page 152 of 1082
ಬಹಿಷ್ಕಾರ ಹಿನ್ನೆಲೆ ಮಾರಾಮಾರಿ ಹಲ್ಲೆ ನಡೆದಿದ್ದು, ನಂಜನಗೂಡು ತಾಲ್ಲೂಕಿನ ಬಂಕಹಳ್ಳಿ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಮೇ. 15 ರಂದು ಶುಕ್ರವಾರ ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿ, ಮೈಸೂರು ಇವರ ವತಿಯಿಂದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ವರ್ಷದ ಜನ್ಮದಿನದ ಅಂಗವಾಗಿ ಬಹುತ್ವ ಭಾರತ ಮತ್ತು ಸಂವಿಧಾನವನ್ನು ಅಸ್ಥಿರಗೊಳಿಸುತ್ತಿರುವ ಕೋಮುವಾದಿ ಶಕ್ತಿಗಳು ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ತಿಳಿಸಿದರು.
ವಿವಿಧ ಕಾಮಗಾರಿಗಳಲ್ಲಿ ಅಕ್ರಮವೆಸಗಿ ಬರೋಬರಿ ಎರಡು ಕೋಟಿ ರೂ.ಅನುದಾನವನ್ನು ನುಂಗಿ ನೀರು ಕುಡಿದಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ದೇವರಸನಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಎಂ.ಮಹದೇವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಫೇಸ್ ಬುಕ್ ಮೂಲಕ ಪರಿಚಯವಾದ ಲಂಡನ್ ನಿವಾಸಿಯೊಬ್ಬ ಮೈಸೂರಿನ ಗೃಹಿಣಿಗೆ 12.65 ಲಕ್ಷ ವಂಚಿಸಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶಕ್ತಿನಗರದ ನಿವಾಸಿ ಸರ್ಕಾರಿ ಉದ್ಯೋಗಿ ಪತ್ನಿ ವೇದಾ(40) ಹಣ ಕಳೆದುಕೊಂಡವರು
ಯುಎಇಯ ಶಾರ್ಜಾ ಹೆಲ್ತ್ಕೇರ್ ಸಿಟಿಯಲ್ಲಿ ಮೊದಲ ಖಾಸಗಿ ಸಮಗ್ರ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಆಸ್ಪತ್ರೆ ನಿರ್ಮಾಣಕ್ಕೆ ತುಂಬೆ ಗ್ರೂಪ್ ಭೂಮಿ ಪೂಜೆ ನೆರವೇರಿಸಿದೆ.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನ ಸಮಯದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದ್ದು, ಭಕ್ತರಿಗೆ ಹೆಚ್ಚಿನ ಸಮಯದ ದರ್ಶನ ಸೌಲಭ್ಯ ಕಲ್ಪಿಸಲಾಗಿದೆ.
ಸಂಕಷ್ಟದ ಸಮಯದಲ್ಲಿ ದೇಶದ ಜನರು ತ್ಯಾಗ ಮಾಡಬೇಕು ಎಂದು ಹೇಳುವ ಕೇಂದ್ರ ಸರ್ಕಾರಕ್ಕೆ ಸಾಮಾನ್ಯ ಜನರ ನೋವು ಅರ್ಥವಾಗುತ್ತಿಲ್ಲ. ಜನರು ತ್ಯಾಗ ಮಾಡುವುದಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರವನ್ನು ತ್ಯಾಗ ಮಾಡಿದರೆ ದೇಶದ ಜನರಿಗೆ ಸುಖ ಸಿಗುತ್ತದೆ ಎಂದು ಅವರು ಹೇಳಿದರು.
ನೀಟ್ ಪರೀಕ್ಷೆಯಲ್ಲಿ ನಿರಂತರವಾಗಿ ಅಕ್ರಮಗಳು ಬೆಳಕಿಗೆ ಬರುತ್ತಿರುವುದು ಯುವಜನರ ಭವಿಷ್ಯಕ್ಕೆ ಮಾರಕವಾಗಿದೆ. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ರಮಾನಾಥ್ ರೈ ಆಗ್ರಹಿಸಿದರು.
ಆಧಾರಸ್ಥಂಬ ಕಳೆದುಕೊಂಡು ಮಗನೊಂದು ಜೀವನ ನಡೆಸುತ್ತಿದ್ದ ಪಳ್ಳಿ ಕನ್ನಡಿಬೈಲು ಸುಮಿತ್ರ ದಿನೇಶ ಆಚಾರ್ಯ ಎರ್ಮಾಲು ಅವರಿಗೆ “ಸಮಾನ ಮನಸ್ಕರ ತಂಡ ಉಡುಪಿ” ನಿರ್ಮಿಸಿಕೊಟ್ಟ ಮನೆಯನ್ನು ಹಸ್ತಾಂತರಿಸಲಾಯಿತು.
ನಮ್ಮ ಸಿನಿಮಾದ ಭಾಷೆ ನಾಟ್ಯ ಶಾಸ್ತ್ರದ ಭಾಷೆಯಾಗಿದೆ. ತಾರತಮ್ಯ, ಕೊಳ್ಳುತನ, ಪ್ರಚಾರ, ಧರ್ಮ, ಜಾತಿಗಳ ಶ್ರೇಣೀಕರಣದಿಂದಾಗಿ ಭಾರತೀಯ ಸಿನಿಮಾಗಳು ಧರ್ಮ ಕೇಂದ್ರೀಕೃತವಾಗಿವೆ.
ಭಗ್ನ ಪ್ರೇಮಿಯಿಂದ ಯುವತಿಗೆ ಚೂರಿಯಿಂದ ಇರಿದ ಘಟನೆ ಮಣಿಪಾಲ- ಅಲೆವೂರು ರಸ್ತೆಯ ಶಾಂತಿನಗರ ಸಮೀಪದ ಐಡಿಯಲ್ ಬಿಲ್ಡಿಂಗ್ ನಲ್ಲಿರುವ ಮಹಿಳಾ ಪಿಜಿಯಲ್ಲಿ ನಡೆದಿದೆ.
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ನಡೆಯಲಿರುವ ಮಹಾರುದ್ರಯಾಗದ ಪ್ರಯುಕ್ತ ಮೇ 18ರಂದು ಕೊಡವೂರಿನ ವಿಪ್ರಶ್ರೀ ಸಭಾಭವನದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ ಎಂದು ಉದ್ಯೋಗ ಮೇಳದ ಅಧ್ಯಕ್ಷೆ ಡಾ.ದಿವ್ಯಾ ರಾಣಿ ಹೇಳಿದರು.
ಆರ್ಎಸ್ಬಿ ಹಾಗೂ ಬಿಜಿಎಸ್ಬಿ ಸಮುದಾಯದ ವಧು-ವರರಿಗಾಗಿ ‘ಋಣಾನುಬಂಧ’ ಹೆಸರಿನ ವಧು-ವರರ ಪರಿಚಯ ಸಮಾವೇಶವು ಮೇ 17ರಂದು ಬಂಟಕಲ್ಲಿನ ರೋಟರಿ ಸಭಾಭವನದಲ್ಲಿ ನಡೆಯಲಿದೆ. ಬೆಂಗಳೂರು ಆರ್ಎಸ್ಬಿ ಮತ್ತು ಬಿಜಿಎಸ್ಬಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೇ 3 ರಂದು ದೇಶಾದ್ಯಂತ ನಡೆದಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ (NEET-UG 2026) ಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರದ್ದುಗೊಳಿಸಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ NSUI ಅಧ್ಯಕ್ಷ ಸುಹಾನ್ ಆಳ್ವ ತೀವ್ರವಾಗಿ ಖಂಡಿಸಿದ್ದಾರೆ.
ಕುತ್ತಾರು ಜಂಕ್ಷನ್ ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣದ ವಿಚಾರದಲ್ಲಿ ಭದ್ರತಾ ಸಿಬ್ಬಂದಿಯನ್ನ ತಳ್ಳಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಫೇರಾವ್ ಹಾಕಿ ತರಾಟೆಗೈದ ಮದನಿ ನಗರದ ಜುನೈದ್ ಮತ್ತು ಆತನ ಹತ್ತು ಜನ ಸಹಚರರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಜಿಲ್ಲೆಯ ಸಾರ್ವಜನಿಕರು ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕಾಗಿ ತಮ್ಮ ಮನೆಯನ್ನು ಲಾಕ್ ಮಾಡಿ ಹೊರಗೆ ಹೋದಾಗ ಪೊಲೀಸರು ನಿಮ್ಮ ಮನೆಗೆ ಸುರಕ್ಷಿತೆ ಒದಗಿಸಲಿದ್ದಾರೆ.
ಉಡುಪಿಯಲ್ಲೊಂದು ಜಲ ವಿಸ್ಮಯ ಕಂಡು ಬರುತ್ತಿದೆ. ಕಡು ಬೇಸಿಗೆಗೆ ಎಲ್ಲಾ ಕಡೆ ನೀರು ಬತ್ತಿ ಹೋದರೂ ಇಲ್ಲೊಂದು ಕೆರೆಯಲ್ಲಿ ತುಂಬಾ ಸ್ಪಟಿಕದಷ್ಟು ಶುದ್ದವಾದ ನೀರು ತುಂಬಿದೆ. ವರ್ಷದ 365 ದಿನವೂ ಈ ಕೆರೆಗೆ ಅಂತರ್ಜಲ ಹರಿದು ಬರುತ್ತಿದೆ. ತೆರೆದಿಟ್ಟ ನಳ್ಳಿಯಿಂದ ಸುರಿದಂತೆ ಈ ಕೆರೆಗೆ ನೀರು ಹರಿಯುತ್ತಿದೆ.
ನಗರದಲ್ಲಿ ಹೈಡ್ರೊವಿಡ್ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಬಿಸಿಎ ವಿದ್ಯಾರ್ಥಿನಿಯನ್ನು ಅರೆಸ್ಟ್ ಮಾಡಲಾಗಿದೆ. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿ ಸುಹಾನ(21) ಬಂಧಿತೆ ಆರೋಪಿ.
ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು “ಸಮಾಧಾನ ಸಮಾರೋಹ್-2026” ಹೆಸರಿನಲ್ಲಿ ವಿಶೇಷ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ತಿಳಿಸಿದ್ದಾರೆ.
ತಡರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರು ನಗರದ ಪಂಪ್ ವೆಲ್ , ಕಂಕನಾಡಿ, ಕೊಡಿಯಾಲ್ ಬೈಲ್ ಸೇರಿದಂತೆ ಎಲ್ಲೆಡೆ ನೀರು ಉಕ್ಕಿ ಹರಿದಿದೆ.