ಪುಣೆ: ದೇಶದೆಲ್ಲೆಡೆ ಇದೀಗ ಮಳೆಗಾಲ ಆರಂಭವಾಗಿದ್ದು, ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬೆಂಬಿಡದೆ ಸುರಿಯುತ್ತಿದೆ. ಈ ಅಕಾಲಿಕಾ ಮಳೆಯಿಂದಾಗಿ ಅಲ್ಲಲ್ಲೆ ಮಳೆ ನಿಂತು ಡೆಂಗ್ಯೂ ಸೊಳ್ಳೆ ಉತ್ಪತ್ತಿಗೊಂಡು ಜನರಲ್ಲಿ ಡೆಂಗ್ಯೂ ಕಾಯಿಲೆಯನ್ನು ಉಂಟುಮಾಡಿದೆ. ಸದ್ಯ ರಾಜ್ಯದಾದ್ಯಂತ ಡೆಂಗ್ಯೂ ಕೇಸ್ಗಳು ಹೆಚ್ಚುತ್ತಲೇ ಇದೆ.
ಈ ನಡುವೆ, ಪುಣೆಯಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದ್ದು, ಇದನ್ನು ಝಿಕಾ ವೈರಸ್ ಎಂದು ಗುರುತಿಸಲಾಗಿದೆ. ಈ ವೈರಸ್ ಸದ್ಯ ಪುಣೆಯಲ್ಲಿ 46 ವರ್ಷದ ವೈದ್ಯರು ಮತ್ತು 13 ವರ್ಷದ ಮಗಳಲ್ಲಿ ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.
ಪುಣೆಯಲ್ಲಿ ಮೊದಲ ಬಾರಿಗೆ ಝಿಕಾ ವೈರಸ್ ಪತ್ತೆಯಾಗಿದೆ. ಇಲ್ಲಿನ 46 ವರ್ಷದ ವೈದ್ಯರು ಮತ್ತು ಅವರ 13 ವರ್ಷದ ಮಗಳಿಗೆ ಝಿಕಾ ರೋಗಲಕ್ಷಣಗಳು ಇರುವುದು ಪತ್ತೆಯಾಗಿದ್ದು, ಪತ್ತೆಯಾಗಿದ್ದು, ಸದ್ಯ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Ad