ಯಾದಗಿರಿ: ಜಮ್ಮು ಕಾಶ್ಮೀರದಲ್ಲಿ ಯಾದಗಿರಿ ನಾಲ್ವರು ಯಾತ್ರಿಕರು ದಾಳಿಯಾದ ಸ್ಥಳದಲ್ಲೇ ಇದ್ದು ಬಚ್ಛಾವ್ ಆಗಿದ್ದಾರೆ. ದಾಳಿಯಾದ ಸ್ಥಳದಿಂದ ಕೂದಲೆಳೆ ಅಂತರದಲ್ಲಿದ್ದ ಯಾದಗಿರಿ ಪ್ರವಾಸಿಗರು ಪಾರಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆ ನಿವಾಸಿಗಳಾಗಿದ್ದಾರೆ. ಪ್ರಭಾಕರ್ ಹಾಗೂ ಮಹೇಶ್ವರಿ ದಂಪತಿ ಸೇರಿ ಮಕ್ಕಳು ಸೇಪ್ ಆಗಿದ್ದಾರೆ. ಗುಂಡಿನ ದಾಳಿ ಸದ್ದಿಗೆ ಭಯಭೀತಗೊಂಡು ಸ್ಥಳದಿಂದ ಓಡಿ ಹೋಗಿ ಬಚ್ಛಾವ್ ಆಗಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯಮಿ ಆಗಿರುವ ಪ್ರಭಾಕರ್ ಬೇಸಿಗೆ ರಜೆ ಅಂತ ಪತ್ನಿ ಮಕ್ಕಳೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಪೆಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ಸ್ಥಳದಿಂದ ನೂರು ಮಿಟರ್ ಅಂತರದಲ್ಲಿ ಇದ್ದರು. ಕಾರು ಚಾಲಕನ ಸಮಯ ಪ್ರಜ್ಞೆಯಿಂದ ನಾವು ಏಳು ಕಿಲೋಮೀಟರ ದೂರ ಬಂದ್ವಿ ಎಂದರು.
ಏಳು ಕಿಲೋಮೀಟರ ಬಂದು ಲಾಡ್ಜ್ ನಲ್ಲಿ ಸೇಪ್ ಆಗಿ ಉಳಿದಿದ್ವಿ. ಸದ್ಯ ಸೇಪ್ ಆಗಿ ಶ್ರೀನಗರ ಕಡೆಗೆ ಹೊರಟ್ಟಿದ್ದೇವೆ. ರಿಟರ್ನ್ ಪ್ಲೈಟ್ ಶುಕ್ರವಾರ ಇದೆ. ಸರ್ಕಾರ ಏರ್ ಲಿಪ್ಟ್ ಮಾಡಿದರೇ ಬೆಂಗಳೂರಿಗೆ ಬರೋಕೆ ಅನುಕೂಲ ಆಗುತ್ತೆ. ಜಮ್ಮು ಕಾಶ್ಮೀರದಿಂದ ಪ್ರಭಾಕರ್ ವಿಡಿಯೋ ಹೇಳಿಕೆ ನೀಡಿದ್ದಾರೆ.
ವರದಿ : ಸುಧೀರ್ ಕೋಟಿ ಯಾದಗಿರಿ

