ಯಾದಗಿರಿ:  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಂದಾಯ, ಸರ್ಕಾರಿ ಜಮೀನು, ದೋರನಹಳ್ಳಿ ಗ್ರಾಮದ ವರವಲಯದಲ್ಲಿರುವ ಶ್ರೀ ಮಾತ್ಮ ಮಹಾತೇಶ್ವರ. ಜಮೀನು ಸೇರಿದಂತೆ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅಧಿಕೃತವಾಗಿ ಪರವಾನಗಿ ಪಡೆದಿರುವ ಗಣಿ ಗುತ್ತಿಗೆದಾರರ ಅಕ್ರಮ ನಿಂತಿಲ್ಲ.

ಸಂಜೆ 5ರ ನಂತರವಷ್ಟೇ ಕ್ವಾರಿಗಳಲ್ಲಿ ಸ್ಫೋಟ ನಡೆಸಬೇಕು. ದಿನಕ್ಕೆ ಐದಾರು ಗಂಟೆ ಮಾತ್ರ ಈ ಕಾರ್ಯ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ಹಲವು ಕಡೆಗಳಲ್ಲಿ ಹಗಲು ಹೊತ್ತಿನಲ್ಲೇ ಸ್ಫೋಟಕ ಬಳಸಿ ಬಂಡೆ ಸಿಡಿಸಲಾಗುತ್ತಿದೆ. ನಿಗದಿತ ಏಜೆನ್ಸಿ ಮೂಲಕ, ಪರಿಣತರಿಂದಲೇ ‘ಸ್ಫೋಟ’ ನಡೆಸಬೇಕು ಎಂಬ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ ಎಂಬುದು ಸಂತ್ರಸ್ತ ಗ್ರಾಮಸ್ಥರ ದೂರು.

ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಗ್ರಾಮಸ್ಥರು ಜೀವಭಯದಲ್ಲಿ ಬದುಕುತ್ತಿದ್ದಾರೆ. ಗಣಿಗಾರಿಕೆಯ ದೂಳಿನಿಂದ ಸುತ್ತಮುತ್ತಲಿನ ದೋರನಹಳ್ಳಿ ಅಕ್ಕಪಕ್ಕದ ಊರುಗಳಲ್ಲಿ. ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿವೆ.

ಯಾದಗಿರಿ ಜಿಲ್ಲೆಯ ಶಹಪುರ್. ತಾಲ್ಲೂಕಿನ ದೋರನಹಳ್ಳಿ ಗ್ರಾಮದ. ಇದಕ್ಕಿಂತ ಭಿನ್ನವಾಗಿಲ್ಲ. ರಾಜಶೇಖರ್ ಮಾಲಿಪಾಟೀಲ್. ಈ ಭಾಗದ ಮಾಂತೇಶ್ವರ್ ಬೆಟ್ಟದ ಹಿಂದುಗಡೆ.ಕ್ರಷರ್‌ ನಡೆಸುತ್ತಿದ್ದು, ಗ್ರಾಮದಲ್ಲಿ ಮನೆಗಳು ಬಿರುಕು ಬಿಡುವ ಸಾಧ್ಯತೆ ಇದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಇದ್ದರೂ ನಿಯಂತ್ರಣ ಸಾಧ್ಯವಾಗಿಲ್ಲ. ಸ್ಫೋಟಕ ಬಳಸುತ್ತಿರುವುದರಿಂದ ಮನೆಗಳು ಬಿರುಕು ಬಿಡುವುದು ಸಾಮಾನ್ಯವಾಗಿದೆ.

ದೇವರಿಂದ ಭಕ್ತಾದಿಗಳಿಗೆ ಪ್ರಸಾದ ಕೈ ತಪ್ಪು ಬಹುದು. ಆದರೆ ಮೂರು ಇಲಾಖೆಗಳಿಗೆ. ಪ್ರತಿ ತಿಂಗಳಾದರೂ. ರಸದ ಕೈ ತಪ್ಪಲಾರದು. ಎಂಬುದು ಗ್ರಾಮದ ಪ್ರಜ್ಞಾವಂತರಿಂದ ಆರೋಪದ ಮಾತುಗಳು ಕೇಳಿ ಬಂದಿವೆ. ಕೆಲವು ವರ್ಷಗಳ ಹಿಂದೆ ಹಲವು ಸಂಘಟನೆಗಳು ಇದರ ಬಗ್ಗೆ ಧ್ವನಿ ಎತ್ತಿದರು. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ . ಶಾಸಕರು ಇದರ ಬಗ್ಗೆ ಡೋಂಟ್ ಕೇರ್.

ಗಣಿಗಾರಿಕೆಯಿಂದ ತೊಂದರೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕಾಗಿ ಸ್ಥಳೀಯರು ನಿಂಗಪ್ಪ ಮೂಗಿನ. ದೊರನಹಳ್ಳಿ. ಸಾಮಾಜಿಕ ಹೋರಾಟಗಾರ ಸ್ಥಳೀಯರು ಆರೋಪಿಸಿದ್ದಾರೆ.