ಯಾದಗಿರಿ: ಪಿಡಬ್ಲೂಡಿ ಸಚಿವ ಸತೀಶ ಜಾರಕಿಹೊಳಿ ನೋಡಲೇಬೇಕಾದ ಸ್ಟೋರಿ ಇದಾಗಿದ್ದು, ಪಿಡಬ್ಲುಡಿ ಇಲಾಖೆಯ ಕಮಿಷನ್ ದಂಧೆ ನಡೆಸುತ್ತಿದ್ದಾರೆ. ಪಿಡಬ್ಲೂಡಿ ಇಲಾಖೆ ಅಧಿಕಾರಿಗಳ ವಸೂಲಿ ದಂಧೆಯ ಕರಾಳ ಮುಖ ಬಯಲಾಗಿದೆ.
ಲೋಕೋಪಯೋಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಬಟಾಬಯಲಾಗಿದೆ. ಪಿಡಬ್ಲೂಡಿ ಇಲಾಖೆಯ ಅಧಿಕಾರಿಗಳ ಲಂಚಾವತಾರದ ಆಡಿಯೋ ಲಭ್ಯವಾಗಿದೆ. ಬಾಕಿ ಹಣ ಬಿಡುಗಡೆ ಪೈಲ್ ಗೆ ಸಹಿ ಮಾಡಲು ಲಕ್ಷ ಲಕ್ಷ ರೂ. ಲಂಚ ಅಧಿಕಾರಿಗಳಿಗೆ ಕೊಡಬೇಕು.
ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿ ಐದಾರು ಅಧಿಕಾರಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಯಾದಗಿರಿ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಅಧಿಕಾರಿಗಳಿಂದ ಲಂಚ ನಡೆಯುತ್ತಿದೆ.

