ರೋಮ್: ಇಟಲಿಯ ವೇನ್ಸ್ನಲ್ಲಿ ಪ್ರಸಿದ್ಧ ಗ್ರ್ಯಾಂಡ್ ಕಾಲುವೆಯಲ್ಲಿ ನೀರು ಹಸಿರಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕಾಲುವೆಯಲ್ಲಿ ಪಾಚಿಯಂತಹ ವಸ್ತು ಶೇಖರವಾಗಿದ್ದು, ರಿಯಾಲ್ಟೊ ಸೇತುವೆಯ ಬಳಿ ಕೆಲವು ನಿವಾಸಿಗಳು ಈ ಬಗ್ಗೆ ತಿಳಿಸಿದ್ದಾರೆ.
ತನಿಖೆಗೆ ಸಂಬಂಧಿಸಿ ಪೊಲೀಸರು ತುರ್ತು ಸಭೆ ಕರೆಯಲಾಗಿದೆ ಎಂದು ವೆನೆಟೊ ಪ್ರಾದೇಶಿಕ ಅಧ್ಯಕ್ಷ ಲುಕಾ ಝಾಯಾ ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಅಲ್ಲದೆ ಸ್ಥಳೀಯ ಸಿಸಿಟಿವಿ ಮತ್ತು ನೀರಿನ ಮಾದರಿಗಳನ್ನು ತನಿಖೆ ನಡೆಸಲಾಗಿದೆ.